(1) ಪ್ರತಿ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿಗೆ ವಾರ್ಷಿಕ ಹತ್ತು ಸಾವಿರ ರೂಪಾಯಿಗಳ ಮುಕ್ತನಿಧಿ (ಅನಿರ್ಬಂಧಿತ ನಿಧಿ, ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ನೀಡಲಾಗುವುದು.
2 ಈ ನಿಧಿಯು ಸ್ಮಳೀಯ ಮಟ್ಟದಲ್ಲಿ ಕೈಗೊಳ್ಳುವ ಸಮುದಾಯ ಆರೋಗ್ಯ ಚಟುವಟಿಕೆಗಳಿಗೆ ಸಂಪನ್ಮೂಲವಾ? ರುತ್ತದೆ. ಇದನ್ನು ಸಮುದಾಯ ಆರೋಗ್ಯ ಚಟುವಟಿಕೆಗಳಿಗೆ ಮಾತ್ರ ಒದಗಿಸಬೇಕು. ಈ ನಿಧಿಯನ್ನು ಬಳಸುವಾಗ ಜನಾರೋಗ್ಯ, ಪೌಷ್ಠಿಕತೆ, ಶಿಕ್ಷಣ ಮತ್ತು ನೈರ್ಮಲ್ಯ ಪರಿಸರ ಸಂರಕ್ಷಣೆಯಂಂತಹ ವಲಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು.
-
ಕೆಲವೊಂದು ಸಾಮಾನ್ಯ ಚಟುವಟಿಕೆಗಳಾದ ಗ್ರಾಮ ಮಟ್ಟದ ಸ್ವಚ್ಛತಾ ಚಟುವಟಿಕೆ, ನೈರ್ಮಲ್ಯ ಚಟುವಟಿಕೆಗಳು, ಆರೋಗ್ಯ ಚಟುವಟಿಕೆಗಳು, ಅಂಗನವಾಡಿ ಕೇಂದ್ರದ ಮಟ್ಟದ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು, ಮನೆ ಮನೆ ಸಮೀಕ್ಷೆ, ರೋಗವಾಹಕ ಮೂಲಗಳನ್ನು ಕಡಿಮೆಗೊಳಿಸುವುದು, ತುರ್ತು ಸಮಯದಲ್ಲಿ ಸಾರಿಗೆ ವ್ಯವಸ್ಥೆ ಸೇವೆಗಳು (ಆರೋಗ್ಯ ಕವಚ ಸೇವೆ ಲಭ್ಯವಿಲ್ಲದಿದ್ದಲ್ಲಿ, ಮಾಹಿತಿ ಮತ್ತು ಶಿಕ್ಷಣ ಮತ್ತು ಸಂವಹನದ ಚಟುವಟಿಕೆಗಳು ಮತ್ತು ಕಾಲಕಾಲಕ್ಕೆ ಅಭಿಯಾನ ನಿರ್ದೇಶಕರು (ಎನ್ ಹೆಚ್ ಎಮ್) ಮತ್ತು ಯೋಜನಾ ನಿರ್ದೇಶಕರು (ಆರ್ಸಿಹೆಚ್) ನೀಡುವ ನಿರ್ದೇಶನದಂತೆ ಮುಕ್ತ ವಿಧಿಯನ್ನು ಬಳಸಬಹುದಾಗಿದೆ.
-
ಈ ನಿಧಿಯನ್ನು ಸುತ್ತು ವಿಧಿಯನ್ನಾಗಿಯೂ ಬಳಸಬಹುದು, ಬಳಸುವ ಸಂದರ್ಭದಲ್ಲಿ, ಯಾವ ಕುಟುಂಬವು ಪಡೆದಿರುತ್ತದೆಯೇ, ಆ ಕುಟುಂಬದಿಂದ ಸಮಯಕ್ಕೆ ಸರಿಯಾಗಿ BOIFOHAD, ಕಂತುಗಳಲ್ಲಿ ಹಿಂಪಡೆಯಲು ಕ್ರಮ ಕೈಗೊಳ್ಳಬೇಕು.
-
ವಿಶೇಷ ಸಂದರ್ಭಗಳಲ್ಲಿ ಅಂದರೆ ನಿರ್ಗತಿಕ ಮಹಿಳೆ ಅಥವಾ ಅತಿ ಬಡ ಕುಡುಂಬದವರಿಗೆ ಈ ನಿಧಿಯನ್ನು ನೀಡಿದ್ದರೆ, ಸಮಿತಿಯು ಚರ್ಚಿಸಿ ತೀರ್ಮಾನ ಕೈಗೊಂಡು ವಿನಾಯಿತಿ ನೀಡಬಹುದು.
-
ಪ್ರತೀ ಸಮಿತಿಯು ಹತ್ತು ಸಾವಿರ ಮುಕ್ತ ವಿಧಿಯ ಜೊತೆಗೆ ಸಮಿತಿಯ ಉದ್ದೇಶಗಳನ್ನು ಈಡೇರಿಸಲು ಸಮುದಾಯದಿಂದ ವಂತಿಗೆಯನ್ನು ಪಡೆಯುವ ಸಂಪೂರ್ಣ ಸ್ವಾತಂತ್ರ್ಯವನ್ನು ಸಮಿತಿಯು ಹೊಂದಿರುತ್ತದೆ.