(1) ಈ ನಿಯಮಗಳ ಮೇರೆಗೆ ಅನುಕಂಪದ ಆಧಾರದ ಮೇಲೆ ನೇಮಕಾತಿಯನ್ನು ಹಕ್ಕಾಗಿ ಕ್ಲೇಮು ಮಾಡತಕ್ಕದ್ದಲ್ಲ ಮತ್ತು ಸಹಜವಾಗಿಯೇ ಬಂದಿದೆ ಎಂಬಂತೆ ನೀಡತಕ್ಕದ್ದಲ್ಲ.
(2) ಈ ನಿಯಮಗಳ ಮೇರೆಗೆ ನೇಮಕಾತಿಯನ್ನು, ಕೆಳಕಂಡ ಪ್ರಾಶಸ್ತ್ಯ ಕ್ರಮದಲ್ಲಿ ಮೃತ ಸರ್ಕಾರಿ ನೌಕರನ/ಳ ಅವಲಂಬಿತರಿಗೆ ನಿರ್ಬಂಧಿಸತಕ್ಕದ್ದು ಎಂದರೆ:-
( ಮೃತ ಪುರುಷ ವಿವಾಹಿತ ಸರ್ಕಾರಿ ನೌಕರನ ಸಂದರ್ಭದಲ್ಲಿ-
ಅವನ ಮೇಲೆ ಅವಲಂ೦ಬಿತರಾಗಿದ್ದ ಮತ್ತು ಅವನೊಂದಿಗೆ ವಾಸಿಸುತ್ತಿದ್ದ
(ಎ) ವಿಧವೆ; ಮತ್ತು
(ಬಿ) ವಿಧವೆಯು ಅರ್ಹಳಾಗಿರದಿದ್ದರೆ ಅಥವಾ ಯಾವುದೇ ಸಮಂಜಸ ಕಾರಣಕ್ಕಾಗಿ ಅವಳು ನೇಮಕಾತಿಯನ್ನು ಸ್ವೀಕರಿಸಲು ಇಚ್ಮಿಸದಿದ್ದರೆ, ಮೃತ ಸರ್ಕಾರಿ ನೌಕರನ ವಿಧವೆಯು ಆಯ್ಕೆ ಮಾಡಿದ ಮಗ ಅಥವಾ ಮಗಳು".
ಟಿಪ್ಪಣಿ: ಪತಿ/ಪತ್ನಿ ಈ ಹಿಂದೆಯೇ ಮೃತರಾಗಿದ್ದ ಸಂದರ್ಭದಲ್ಲಿ, ಆಗ ಮಕ್ಕಳ ವಯಸ್ಸಿನ ಕ್ರಮದಲ್ಲಿ ಪ್ರಾಶಸ್ತ್ಯವನ್ನು ಕೊಡತಕ್ಕದ್ದು.
*(ಎ) ಮೃತ ಪುರುಷ ಅವಿವಾಹಿತ ಸರ್ಕಾರಿ ನೌಕರನ ಸಂದರ್ಭದಲ್ಲಿ ತಂದೆ ಮತ್ತು ತಾಯಿಯು ಆಯ್ಕೆ ಮಾಡಿರುವ ಅಥವಾ ಅವರಲ್ಲಿ ಭಿನ್ನಾಭಿಪ್ರಾಯವಿದ್ದ ಸಂದರ್ಭದಲ್ಲಿ, ಅವನ ಮೇಲೆ ಅವಲಂ೦ಬಿತವಾಗಿದ್ದ ಮತ್ತು ಅವನೊಂದಿಗೆ ವಾಸಿಸುತ್ತಿದ್ದ ತಾಯಿಯು ಆಯ್ಕೆ ಮಾಡಿರುವ ಅವನ ಸಹೋದರ ಅಥವಾ ಸಹೋದರಿ".
ಟಿಪ್ಪಣಿ: ತಂದೆ-ತಾಯಿಗಳು, ಈ ಹಿಂದೆಯೇ ಮೃತರಾಗಿದ್ದ ಸಂದರ್ಭದಲ್ಲಿ... ಆಗ, ಸಹೋದರ/ಸಹೋದರಿಯ ವಯಸ್ಸಿನ ಕ್ರಮದಲ್ಲಿ ಪ್ರಾಶಸ್ತ್ಯವನ್ನು ಕೊಡತಕ್ಕದ್ದು.
“(1 ಮೃತ ಮಹಿಳಾ ವಿವಾಹಿತ ಸರ್ಕಾರಿ ನೌಕರಳ ಸಂದರ್ಭದಲ್ಲಿ;
ಅವಳ ಮೇಲೆ ಅವಲಂ೦ಬಿತರಾಗಿದ್ದ ಮತ್ತು ಅವಳೊಂದಿಗೆ ವಾಸಿಸುತ್ತಿದ್ದ.
(ಎ) ಮೃತ ಸರ್ಕಾರಿ ನೌಕರಳ ವಿಧುರನು ಆಯ್ಕೆ ಮಾಡಿರುವ ಮಗ ಅಥವಾ ಮಗಳು; ಮತ್ತು
(ಬಿ) ಮಗ ಅಥವಾ ಮಗಳು ಅರ್ಕರಾಗಿರದಿದ್ದರೆ ಅಥವಾ ಯಾವುದೇ ಸಮಂಜಸ ಕಾರಣಕ್ಕಾಗಿ ಅವರು, ನೇಮಕಾತಿಯನ್ನು ಸ್ವೀಕರಿಸಲು ಇಚ್ನಿಸದಿದ್ದರೆ; ವಿಧುರ”.
ಟಿಪ್ಪಣಿ: ಪತಿ/ಪತ್ನಿ ಈ ಹಿಂದೆಯೇ ಮೃತರಾಗಿದ್ದ ಸಂದರ್ಭದಲ್ಲಿ, ಆಗ ಮಕ್ಕಳ ವಯಸ್ಸಿನ ಕ್ರಮದಲ್ಲಿ ಪ್ರಾಶಸ್ತ್ಯವನ್ನು ಕೊಡತಕ್ಕದ್ದು] 1. ಅಧಿಸೂಚನೆ ಸಂಖ್ಯೆ. ಡಿಪಿಎಆರ್ 26 ಎಸ್ಸಿಎ 2018, ದಿನಾಂಕ: 09.02.2021ರ ಮೂಲಕ ಪ್ರತ್ಯಾಯೋಜಿಸಲಾಗಿದೆ.
1!1ಬಐ)ಮೃತ ಮಹಿಳಾ ವಿವಾಹಿತ ಸರ್ಕಾರಿ ನೌಕರಳ ಸಂದರ್ಭದಲ್ಲಿ, ತಂದೆ ಮತ್ತು ತಾಯಿಯು ಆಯ್ಕೆ ಮಾಡಿದಂತಹ ಅಥವಾ ಅವರಲ್ಲಿ ಭಿನ್ನಾಭಿಪ್ರಾಯವಿದ್ದ ಸಂದರ್ಭದಲ್ಲಿ, ಆಕೆಯ ಮೇಲೆ ಅವಲಂ೦ಬಿತವಾಗಿದ್ದ ಮತ್ತು ಆಕೆಯೊಂದಿಗೆ ವಾಸಿಸುತ್ತಿದ್ದ, ತಾಯಿಯು ಆಯ್ಕೆ ಮಾಡಿದಂಥ ಆಕೆಯ ಸಹೋದರ ಅಥವಾ ಸಹೋದರಿ] ಟಿಪ್ಪಣಿ: ಒಂದು ವೇಳೆ ಪೋಷಕರು ಈ ಹಿಂದೆಯೇ ಮೃತರಾಗಿದ್ದ ಸಂದರ್ಭದಲ್ಲಿ ಪ್ರಾಶಸ್ತ್ಯವನ್ನು ಸಹೋದರ/ಸಹೋದರಿಯ ವಯಸ್ಸಿನ ಕ್ರಮದಲ್ಲಿ ನೀಡತಕ್ಕದ್ದು] ೭1) ಪತಿ/ಪತ್ನಿಯು ಸಹ ಮೃತರಾಗಿರುವಂಥ ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಹೊಂದಿರುವಂಥ ಮೃತ ವಿವಾಹಿತ ಸರ್ಕಾರಿ ನೌಕರರ ಸಂದರ್ಭದಲ್ಲಿ ಅವರೊಂದಿಗೆ ವಾಸವಿರುವಂಥ ಮತ್ತು ಸಂಬಂಧಪಟ್ಟ ಕಾನೂನಿನ ಉಪಬಂಧಗಳ ಅನುಸಾರ ಅಪ್ರಾಪ್ತ ವಯಸ್ಸಿನ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವಂಥ ಅಪ್ರಾಪ್ತ ವಯಸ್ಸಿನ ಮಕ್ಕಳ ಪ್ರಮಾಣೀಕರಿಸಿದ ಪಾಲಕರು.
(3) 000000 ಬಿಟ್ಟುಬಿಡಲಾಗಿದೆ 'L(4) ಅರ್ಜಿ ಸಲ್ಲಿಸುವ ಸಮಯದಲ್ಲಿ, ಮೃತ ಸರ್ಕಾರಿ ನೌಕರನನ್ನು ಕೊಲೆ ಮಾಡಿರುವಂತಹ ಅಥವಾ ಕ್ರಿಮಿನಲ್ ಪ್ರಕರಣ ತನಿಖೆಯಲ್ಲಿರುವ ಅಥವಾ ಅಂತಹ ಅಪರಾಧವನ್ನು ಮಾಡಲು ದುಷ್ಟೈೇರಣೆ ಮಾಡಿರುವ ಆರೋಪದ ಮೇಲೆ ವಿಚಾರಣೆಯು ನಡೆಯುತ್ತಿರುವ ವ್ಯಕ್ತಿಯು, ಈ ನಿಯಮಗಳ ಅಡಿಯಲ್ಲಿ ನೇವಕಾತಿಗೆ ಅರ್ಹನಾಗಿರತಕ್ಕದ್ದಲ್ಲ] Bod. ‘000000* ಬಿಟ್ಟುಬಿಡಲಾಗಿದೆ 1. ಅಧಿಸೂಚನೆ ಸಂಖ್ಯೆ. ಡಿಪಿಎಆರ್ 26 ಎಸ್ಸಿಐಎ 2018, ದಿನಾಂಕ: 09.04.2021ರ ಮೂಲಕ ಪ್ರತ್ಯಾಯೋಜಿಸಲಾಗಿದೆ. 2. ಅಧಿಸೂಚನೆ ಸಂಖ್ಯೆ. ಡಿಪಿಎಆರ್ 26 ಎಸ್ಸಿಎಐಎ 2018, ದಿನಾಂಕ: 09.04.2021ರ ಮೂಲಕ ಸೇರಿಸಲಾಗಿದೆ. 3. ಅಧಿಸೂಚನೆ ಸಂಖ್ಯೆ. ಡಿಪಿಎಆರ್ 26 ಎಸ್ಸಿಐಎ 2018, ದಿನಾಂಕ: 09.04.2021ರ ಮೂಲಕ ಬಿಟ್ಟುಬಿಡಲಾಗಿದೆ.