(1) ಇಲಾಖಾ ಮುಖ್ಯಸ್ಥರು, 5ನೇ ನಿಯಮದ ಮೇರೆಗೆ ಅರ್ಜಿಯನ್ನು ಸ್ವೀಕರಿಸಿದ ನಂತರ ಅರ್ಜಿದಾರನು, ಈ ನಿಯಮಗಳ ಮೇರೆಗೆ ನಿರ್ದಿಷ್ಟಪಡಿಸಲಾದ ಎಲ್ಲಾ ಷರತ್ತುಗಳನ್ನು ಪುರೈಸುತ್ತಾನೆಂದು ಮನವರಿಕೆಯಾದರೆ ಅವನನ್ನು ನೇಮಕ ಮಾಡಿಕೊಳ್ಳತಕ್ಕದ್ದು ಮತ್ತು ಒಂದು ವೇಳೆ ಅಲ್ಲದಿದ್ದರೆ, ನೇಮಕಾತಿಯ ಆದೇಶವನ್ನು ನೀಡಲು ಸೂಕ್ತ ನೇಮಕಾತಿ ಪ್ರಾಧಿಕಾರಕ್ಕೆ ನಿರ್ದೇಶಿಸತಕ್ಕದ್ದು.
(2) (1ನೇ ಉಪ-ನಿಯಮದ ಮೇರೆಗೆ ನೇಮಕಾತಿಯನ್ನು, 5ನೇ ನಿಯಮದ ಮೇರೆಗೆ ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ ಮೂರು ತಿಂಗಳುಗಳ ಕಾಲಾವಧಿಯೊಳಗಾಗಿ ಸಾಧ್ಯವಾದಷ್ಟು ಬೇಗನೆ ಮಾಡತಕ್ಕದ್ದು.
(3) ಈ ನಿಯಮಗಳ ಮೇರೆಗಿನ ನೇಮಕಾತಿಗಾಗಿ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸುವ ಅಗತ್ಯವಿರತಕ್ಕದ್ದಲ್ಲ.
(4) ಈ ನಿಯಮಗಳ ಮೇರೆಗೆ ಒಮ್ಮೆ ಮಾಡಲಾದ ನೇಮಕಾತಿಯು ಅಂ೦ತಿಮವಾಗಿರತಕ್ಕದ್ದು ಮತ್ತು ಈ ನಿಯಮಗಳ ಮೇರೆಗೆ ಬೇರೆ ಹುದ್ದೆಗೆ ಅಥವಾ ಉನ್ನತ ಹುದ್ದೆಯ ಹೊಸ ನೇಮಕಾತಿಗೆ ಅನುಮತಿಸತಕ್ಕದ್ದಲ್ಲ.
(5) ಈ ನಿಯಮಗಳ ಮೇರೆಗೆ ನೇಮಕಾತಿಗಾಗಿ ಮೃತ ವ್ಯಕ್ತಿಯ ಮರಣದ ಸಂದರ್ಭದಲ್ಲಿ ಮರು- ನಿಯೋಜನೆಯಲ್ಲಿರುವ ಅಥವಾ ಸ್ಥಳೀಯ ಅಭ್ಯರ್ಥಿಯಾಗಿ, ಸ್ಮಫಂಡರಿ ಪದವಿದರನಾಗಿ. ಉದ್ಯೋಗ ಮಾಡುತ್ತಿರುವ ಅಥವಾ ದಿನಗೂಲಿ ನೌಕರ ಅಥವಾ ಯಾವುದೇ ಕಾರ್ಯಸಂಸ್ಥೆಯಲ್ಲಿ ನೌಕರಿ ಮಾಡುತ್ತಿರುವ ಅಥವಾ ಸಾಂದರ್ಭಿಕ ನೌಕರಿಯಲ್ಲಿರುವಂತಹ ಮೃತ ವ್ಯಕ್ತಿಯ ಅವಲಂಬಿತರ ಸಂದರ್ಭದಲ್ಲಿ [ಅಥವಾ ಸಾದಿಲ್ದಾರುಗಳಿಂದ ಪಾವತಿಸಲಾಗುವ ಸಂದರ್ಭದಲ್ಲಿ ಪೂರ್ಣಕಾಲಿಕ ಅಥವಾ ಅರೆ-ಕಾಲಿಕ ನೌಕರರನ್ನು) ಪರಿಗಣಿಸತಕ್ಕದ್ದಲ್ಲ.
- ಅಧಿಸೂಚನೆ ಸಂಖ್ಯೆ. ಡಿಪಿಎಆರ್ 26 BAAD 2018, ದಿನಾಂಕ: 09.04.2021ರ ಮೂಲಕ ಪ್ರತ್ಯಾಯೋಜಿಸಲಾಗಿದೆ. '[ಪರಂತು, ಕರ್ನಾಟಕ ಸಿವಿಲ್ ಸೇವೆಗಳ (ಅನುಕಂಪದ ಆಧಾರದ ಮೇಲೆ ನೇಮಕಾತಿ) (ಎರಡನೇ ತಿದ್ದುಪಡಿ) ನಿಯಮಗಳು, 2020ರ ಪ್ರಾರಂಭದ ದಿನಾಂಕದಂದು ಬಾಕಿಯಿರುವ ಅರ್ಜಿಗಳನ್ನು ಈ ಸದರಿ ತಿದ್ದುಪಡಿ ನಿಯಮಗಳ ಪ್ರಾರಂಭಕ್ಕೂ ಮೊದಲು ಅಸ್ತಿತ್ವದಲ್ಲಿದ್ದ ಉಪಬಂಧಗಳಿಗೆ ಅನುಸಾರವಾಗಿ ವಿಲೇಮಾಡತಕ್ಕದ್ದು]' 10 ಯಾರೇ ಅಭ್ಯರ್ಥಿಯನ್ನು ಸದರಿ ನಿಯಮಗಳಡಿಯಲ್ಲಿ ವಿನಾಯಿತಿ ನೀಡಿರುವವರನ್ನು ಹೊರತುಪಡಿಸಿ, ಕರ್ನಾಟಕ ಸಿವಿಲ್ ಸೇವೆಗಳು (ನೇಮಕಾತಿ) (ಕನ್ನಡ ಭಾಷಾ ಪರೀಕ್ಷೆ) ನಿಯಮಗಳು, 1984ರ ಮೇರೆಗೆ ನಿಯಮಿಸಲಾದ ಕನ್ನಡ ಭಾಷಾ ಪರೀಕ್ಬೆಯಲ್ಲಿ ಅವನು ತೇರ್ಗಡೆಯಾಗದ ಹೊರತು, ಈ ನಿಯಮಗಳ ಮೇರೆಗೆ ಗ್ರೂಪ್ “ಸಿ” ಹುದ್ದೆಗೆ ನೇಮಕಮಾಡತಕ್ಕದ್ದಲ್ಲ]‘ 47). ಈ ನಿಯಮಗಳ ಮೇರೆಗಿನ ನೇಮಕಾತಿಯನ್ನು, ಅರ್ಜಿಸಲ್ಲಿಕೆಯ ದಿನಾಂಕದಂದು ಚಾಲ್ತಿಯಲ್ಲಿರುವಂಥ ಉಪಬಂಧಗಳಿಗೆ ಅನುಸಾರವಾಗಿ ಮಾಡತಕ್ಕದ್ದು." 7. ಜ್ಯೇಷ್ಠತೆ:
ಈ ವಿಯಮಗಳ ಮೇರೆಗೆ ನೇಮಕಗೊಂಡ ವ್ಯಕ್ತಿಗಳ ಜ್ಯೇಷ್ಠತೆಯನ್ನು ಕರ್ತವ್ಯಕ್ಕೆ ಅವರು ವರದಿ ಮಾಡಿಕೊಂಡ ದಿನಾಂಕದಿಂದ ನಿರ್ಧರಿಸತಕ್ಕದ್ದು.
- ಅಧಿಸೂಚನೆ ಸಂಖ್ಯೆ. ಡಿಪಿಎಆರ್ 12 ಎಸ್ಸಿಎ 2010, ದಿನಾಂಕ: 27.07.2010, ಜಿಟಿಡಿ 29.07.2010ರ ಮೂಲಕ ಸೇರಿಸಲಾಗಿದೆ.
- ಅಧಿಸೂಚನೆ ಸಂಖ್ಯೆ. ಡಿಪಿಎಆರ್ 118 ಎಸ್ಸಿಎ 2009, ದಿನಾಂಕ: 28.06.2010ರ ಜಿಟಿಡಿ 03.07.2010ರ ಮೂಲಕ ಸೇರಿಸಲಾಗಿದೆ.
- ಅಧಿಸೂಚನೆ ಸಂಖ್ಯೆ. ಡಿಪಿಎಆರ್ 11 ಎಸ್ಸಿಎ 97 ದಿನಾಂಕ: 31.03.1999ರ ಮೂಲಕ ಪ್ರತ್ಯಾಯೋಜಿಸಲಾಗಿದೆ.