ಈ ನಿಯಮಗಳ ಮೇರೆಗೆ ಅನುಕಂಪ ಆಧಾರಿತ ನೇಮಕಾತಿಯು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರತಕ್ಕದ್ದು, ಎಂದರೆ:-
(1) ಮೃತ ಸರ್ಕಾರಿ ನೌಕರನ ಕುಟುಂಬವು ಹಣಕಾಸಿನ ಮುಗ್ಗಟ್ಟು ಅಥವಾ ಅಸಹಾಯಕ ಪರಿಸ್ಥಿತಿಯಲ್ಲಿರತಕ್ಕದ್ದು.
ವಿವರಣೆ.- (ಎ) ಮೃತ ಸರ್ಕಾರಿ ನೌಕರನ ಕುಟುಂಬವು, ಅನುಕಂಪ ಆಧಾರಿತ ನೇಮಕಾತಿಗಾಗಿ ಅರ್ಜಿಯನ್ನು ಸಲ್ಲಿಸಿದ ದಿನಾಂಕದಂದು ಇದ್ದಂತೆ, ಒಂದು ವೇಳೆ ಎಲ್ಲ ಮೂಲಗಳಿಂದ ಕುಟುಂಬದ ಮಾಸಿಕ ಸಂಚಿತ ಆದಾಯವು ಪ್ರಥಮ ದರ್ಜಿ ಸಹಾಯಕ ಹುದ್ದೆಯ ವೇತನ ಶ್ರೇಣಿಯ ಕನಿಷ್ಠಖಮತ್ತು ಗರಿಷ್ಠ ಸರಾಸರಿಯ ಮೇಲೆ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ಬೆಂಗಳೂರಿನಲ್ಲಿ ಅಂಗೀಕಾರಾರ್ಹವಾದ ನಗರ ಪರಿಹಾರ ಭತ್ಯೆಯನ್ನು ಒಳಗೊಂಡಂತೆ ಒಟ್ಟು ಉಪ-ಲಬ್ಬಿಗಳಿಗಿಂತ ಕಡಿಮೆ ಇದ್ದರೆ, ಅದನ್ನು ಹಣಕಾಸಿನ ಬಿಕ್ಕಟ್ಟಿನಲ್ಲಿದೆ ಅಥವಾ ಅಸಹಾಯಕ ಪರಿಸ್ಥಿತಿಯಲ್ಲಿದೆ ಎಂದು ಪರಿಗಣಿಸತಕ್ಕದ್ದು. ಅಂತಕ ಮಾಸಿಕ ಆದಾಯವನ್ನು ಲೆಕ್ಕಹಾಕುವುದಕ್ಕಾಗಿ ಕುಟುಂಬ ಪಿಂಚಣಿ ಯೋಜನೆ, ಒಟ್ಟು ಮೊತ್ತದ ಪಿಂಚಣಿ ಪ್ರಯೋಜನಗಳು ಮತ್ತು ಅದರ ಮೇಲೆ ಗಳಿಸಿದ ಬಡ್ಡಿಯನ್ನು ಬಿಟ್ಟುಬಿಡತಕ್ಕದ್ದು.
(ಬಿ) ಕುಟುಂಬದ, ಕುಟುಂಬ ಪಿಂಚಣಿ, ಒಟ್ಟು ಮೊತ್ತದ ಪಿಂಚಣಿ ಪ್ರಯೋಜನಗಳು ಮತ್ತು ಅದರ ಮೇಲೆ ಗಳಿಸಿದ WE, CHAT, ಎಲ್ಲಾ ಮೂಲಗಳಿಂದ ಸಂಚಿತವಾಗುವ ಮಾಸಿಕ ಆದಾಯವನ್ನು ಈ ನಿಯಮದ ಉದ್ದೇಶಕ್ಕಾಗಿ ಕಚೇರಿಯ ಮುಖ್ಯಸ್ಥರು ಅಥವಾ ಇಲಾಖಾ ಮುಖ್ಯಸ್ಥರು ಅಥವಾ ನೇಮಕಾತಿ ಪ್ರಾಧಿಕಾರವು ಲೆಕ್ಕಹಾಕತಕ್ಕದ್ದು;
(i) ಮೃತ ಸರ್ಕಾರಿ ನೌಕರನು ದಾಖಲಿಸಿದ ಕೊನೆಯ ವಾರ್ಷಿಕ ಸ್ವತ್ತು ವಿವರಪಟ್ಟಿಕೆಯ ಆಧಾರದ ಮೇಲೆ ಮತ್ತು ಒಂದು ವೇಳೆ, ಯಾವುದೇ ಕಾರಣಕ್ಕಾಗಿ, ಅದು ಲಭ್ಯವಿಲ್ಲದಿದ್ದರೆ, ತಹಶೀಲ್ದಾರ್ ದರ್ಜಿಗಿಂತ ಕಡಿಮೆಯಿರದ ರಾಜಸ್ವ ಅಧಿಕಾರಿಯು ನೀಡಿದ ಆದಾಯ ಪ್ರಮಾಣಪತ್ರದ ಆಧಾರದ ಮೇಲೆ; ಮತ್ತು
(ii) ಒಂದು ವೇಳೆ ಮೃತ ಸರ್ಕಾರಿ ನೌಕರನ ಕುಟುಂಬದ ಯಾರೇ ಸದಸ್ಯನು ರಾಜ್ಯ ಅಥವಾ ಕೇಂದ್ರ ಸರ್ಕಾರಿ ಸೇವೆಯಲ್ಲಿ ಅಥವಾ ಸಾರ್ವಜನಿಕ ಅಥವಾ ಖಾಸಗಿ ವಲಯದ ಉದ್ದಿಮೆಗಳಲ್ಲಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗವನ್ನು ಹೊಂದಿದ್ದರೆ, ಆತನ ಉದ್ಯೋಗದಾತರು ನೀಡಿರುವ ಪ್ರಮಾಣಪತ್ರದ ಆಧಾರದ ಮೇಲೆ ಮತ್ತು ಒಂದು ವೇಳೆ ಅಂತಹ ಸದಸ್ಯನು ಸ್ವಯಂ ಉದ್ಯೋಗಿಯಾಗಿದ್ದರೆ, ತಹಶೀಲ್ದಾರ್ ದರ್ಜಿಗಿಂತ ಕಡಿಮೆಯಿಲ್ಲದ ರಾಜಸ್ವ ಅಧಿಕಾರಿಯು ನೀಡಿದ ಪ್ರಮಾಣಪತ್ರದ ಆಧಾರದ ಮೇಲೆ.
'ಪರಂತು, (BE ಉಪ-ನಿಯಮದಲ್ಲಿರುವುದಾವುದು ಸಮೂಹ-ಸಿ ಮತ್ತು ಡಿ ಗೆ ಸೇರಿರುವ ಸರ್ಕಾರಿ ನೌಕರರಿಗೆ ಅನ್ವಯವಾಗತಕ್ಕದ್ದಲ್ಲ]
(2) ನೇಮಕಾತಿಯನ್ನು ಕೋರುವ ವ್ಯಕ್ತಿಯು, ಕರ್ನಾಟಕ ಸಿವಿಲ್ ಸೇವೆಗಳ (ಸಾಮಾನ್ಯ ನೇವಕಾತಿ) ನಿಯಮಗಳು, 1977ರ 6ನೇ ನಿಯಮದ (3ನೇ ಉಪನಿಯಮದೊಂದಿಗೆ ಓದಿಕೊಂಡಂತೆ ಯಾವುದೇ ಸೇವೆ ಅಥವಾ ಹುದ್ದೆಗೆ ಸಂಬಂಧಿಸಿದಂತೆ ಅದರಲ್ಲೂ ವಿಶೇಷವಾಗಿ ರಚಿಸಲಾದ ನೇಮಕಾತಿಯ ಯುಕ್ತ ನಿಯಮಗಳಲ್ಲಿ ಹುದ್ದೆಗಾಗಿ ನಿರ್ದಿಷ್ಟಪಡಿಸಲಾದ ವಯೋಮಿತಿಯೊಳಗೆ ಇರತಕ್ಕದ್ದು ಮತ್ತು ಹಾಗೆಂದು ನಿರ್ದಿಷ್ಟಪಡಿಸದಿರುವಲ್ಲಿ ಅಂತಹ ವ್ಯಕ್ತಿಯು ಕರ್ನಾಟಕ ಸಿವಿಲ್ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರಲ್ಲಿ ನಿರ್ದಿಷ್ಟಪಡಿಸಿದ ವಯೋಮಿತಿಗಳೊಳಗೆ ಇರತಕ್ಕದ್ದು.
'ಪರಂತು, ಮೇಲೆ ನಿರ್ದಿಷ್ಟಪಡಿಸಿದ ವಯಸ್ಸು, ಈ ನಿಯಮಗಳ ಮೇರೆಗೆ ನೇಮಕಾತಿಯನ್ನು ಕೋರುವ ಮೃತ ಸರ್ಕಾರಿ ನೌಕರನ ವಿಧವೆ ಅಥವಾ ವಿಧುರವಿಗೆ ಅನ್ವಯವಾಗತಕ್ಕದ್ದಲ್ಲ. ಈ ಅವಲಂ೦ಬಿತರಿಗಾಗಿನ ವಯೋಮಿತಿಯು ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಐವತ್ತೈದು ವರ್ಷಗಳನ್ನು ಮೀರಿರತಕ್ಕದ್ದಲ್ಲ.]'
(3) ನೇಮಕಾತಿಯನ್ನು ಕೋರುವ ವ್ಯಕ್ತಿಯು, ಯಾವುದೇ ಸೇವೆ. ಅಥವಾ ಹುದ್ದೆಗೆ ಸಂಬಂಧಿಸಿದಂತೆ ವಿಶೇಷವಾಗಿ ರಚಿಸಿದ ನೇಮಕಾತಿಯ ಯುಕ್ತ ನಿಯಮಗಳಲ್ಲಿ ಹುದ್ದೆಗಾಗಿ ನಿರ್ದಿಷ್ಟಪಡಿಸಲಾದ ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು.
[BOOS ಈ ಉಪನಿಯಮದಲ್ಲಿ ಮತ್ತು ಕರ್ನಾಟಕ ಸಿವಿಲ್ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ 5ನೇ ನಿಯಮದ (5ನೇ ಉಪನಿಯಮದಲ್ಲಿ ಇಲ್ಲದಿರುವುದಾವುದೂ, ಶೈಕ್ಷಣಿಕ ವಿದ್ಯಾರ್ಹತೆಗೆ ಅದು ಸಂಬಂಧಿಸುವಷ್ಟರಮಟ್ಟಿಗೆ, ಯಾವುದೇ ಗ್ರೂಪ್ 'ಡಿ' ಹುದ್ದೆಗೆ ಈ ನಿಯಮಗಳ ಮೇರೆಗೆ ನೇಮಕಾತಿಗಾಗಿ ಅನ್ವಯವಾಗತಕ್ಕದ್ದು] 714) ನೇಮಕಾತಿಯು ಹುದ್ದೆಗಾಗಿ ನಿರ್ದಿಷ್ಟಪಡಿಸಲಾದ ವಿದ್ಯಾರ್ಹತೆಯನ್ನು ಅವಲಂಬಿಸಿ ಗ್ರೂಪ್-"ಸಿ” ಅಥವಾ “ಗ್ರೂಪ್” ಡಿಯಲ್ಲಿನ ಯಾವುದೇ ಹುದ್ದಗೆ ಸೀಮಿತಗೊಳಿಸತಕ್ಕದ್ದು. ಆದರೆ ಕಾಲಕಾಲಕ್ಕೆ ಪರಿಷ್ಕತವಾಗಬಹುದಾದಂಂಥ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಸಹಾಯಕ ಹುದ್ದೆಯ ವೇತನ ಶ್ರೇಣಿಗಿಂತ ಹೆಚ್ಚಿನ ವೇತನ ಶ್ರೇಣಿಗಳನ್ನು ಹೊಂದಿರುವ ಹುದ್ದೆಗಳನ್ನು ಮತ್ತು ಕಾಲಕಾಲಕ್ಕೆ ಸರ್ಕಾರವು ವಿರ್ದಿಷ್ಟಪಡಿಸಬಹುದಾದಂಂಥ ಸಮೂಹಗಳಲ್ಲಿನ ಯಾವುದೇ ಇತರ ಹುದ್ದೆಯನ್ನು ಹೊರತುಪಡಿಸಿ ಸೀಮಿತಗೊಳಿಸತಕ್ಕದ್ದು”.]‘
(5) ನೇಮಕಾತಿಯನ್ನು ನೇರ ನೇಮಕಾತಿಯ ಖಾಲಿಹುದ್ದೆಗೆ ಪ್ರತಿಯಾಗಿ ಮಾತ್ರ ಮಾಡತಕ್ಕದ್ದು. ತ [000೦೦೦೦೦೦೦0] 1. ಅಧಿಸೂಚನೆ ಸಂಖ್ಯೆ. ಡಿಪಿಎಆರ್ 11 ಎಸ್ಸಿಎ 97, ದಿನಾಂಕ: 31.03.1999ರ ಮೂಲಕ ಪ್ರತ್ಯಾಯೋಜಿಸಲಾಗಿದೆ. 2. ಅಧಿಸೂಚನೆ ಸಂಖ್ಯೆ. ಡಿಪಿಎಆರ್. 19 ಎಸ್ಸಿಎ 99, ದಿನಾಂಕ: 24.11.2000ರ ಮೂಲಕ ಪ್ರತ್ಯಾಯೋಜಿಸಲಾಗಿದೆ. 3. ಅಧಿಸೂಚನೆ ಸಂಖ್ಯೆ. ಡಿಪಿಎಆರ್ 11 ಎಸ್ಸಿಐ 97, ದಿನಾಂಕ: 31.03.1999ರ ಮೂಲಕ ಬಿಟ್ಟುಬಿಡಲಾಗಿದೆ. (6 ನೇಮಕಾತಿಯನ್ನು ಮೃತ ಸರ್ಕಾರಿ ನೌಕರನು ಕಾರ್ಯನಿರ್ವಹಿಸುತ್ತಿದ್ದ ಇಲಾಖೆಯಲ್ಲಿಯೇ ಮಾಡತಕ್ಕದ್ದು;
ಪರಂತು, ಆ ಇಲಾಖೆಯಲ್ಲಿ ಯಾವುದೇ ಖಾಲಿ. ಹುದ್ದೆಯು ಲಭ್ಯವಿಲ್ಲದಿದ್ದರೆ, . ಸರ್ಕಾರವು ಹೊರಡಿಸಿರಬಹುದಾದಂಥ ಯಾವುದೇ ಸಾಮಾನ್ಯ ಆದೇಶಕ್ಕೆ ಒಳಪಟ್ಟು, ಖಾಲಿಹುದ್ದೆಯು ಲಭ್ಯವಿರುವಂಥ ಸರ್ಕಾರದ ಯಾವುದೇ ಇತರ ಇಲಾಖೆಯಲ್ಲಿ ನೇಮಕಾತಿಯನ್ನು ಮಾಡಬಹುದು. 15. ನೇಮಕಾತಿಗಾಗಿ ಅರ್ಜಿ:- ಈ ನಿಯಮಗಳ ಮೇರೆಗೆ ನೇಮಕಾತಿಯನ್ನು ಕೋರುವ, ಮೃತ ಸರ್ಕಾರಿ ನೌಕರನ ಪ್ರತಿಯೊಬ್ಬ ಅವಲಂ೦ಬಿತನು ಸರ್ಕಾರಿ ನೌಕರನ ಮರಣದ ದಿನಾಂಕದಿಂದ ಒಂದು ವರ್ಷದೊಳಗೆ, ಕಾಲಕಾಲಕ್ಕೆ ಸರ್ಕಾರವು ಅಧಿಸೂಚಿಸಬಹುದಾದಂಥ ನಮೂನೆಯಲ್ಲಿ ಮೃತ ಸರ್ಕಾರಿ ನೌಕರನು ಕಾರ್ಯನಿರ್ವಹಿಸುತ್ತಿದ್ದಂಥ ಇಲಾಖೆಯ ಮುಖ್ಯಸ್ಮರಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು.
BOOS, ಅಪ್ರಾಪ್ತ ವಯಸ್ಸಿನ ಸಂದರ್ಭದಲ್ಲಿ ಸರ್ಕಾರಿ ನೌಕರನ ಮರಣದ ದಿನಾಂಕದಿಂದ ಎರಡು ವರ್ಷಗಳೊಳಗೆ ಅವನು ಹದಿನೆಂಟು ವರ್ಷಗಳ ವಯಸ್ಸನ್ನು ಹೊಂದಿರತಕ್ಕದ್ದು ಮತ್ತು ಅವನು, ತದನಂತರ ಎರಡು ವರ್ಷಗಳೊಳಗಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು]'