ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,
(ಎ) “ಅಧಿನಿಯಮ” ಎಂದರೆ, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧಿನಿಯಮ, 1995 (1995ರ ಕರ್ನಾಟಕ ಅಧಿನಿಯಮ 17);
(ಬಿ) “ಅಧ್ಯಕ್ಷರು” ಎಂದರೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು;
(ಸಿ) “ಸಮಿತಿ” ಎಂದರೆ ಅಧಿನಿಯಮದ 11ನೇ ಪ್ರಕರಣದ ಮೇರೆಗೆ ನೇಮಕಗೊಂಡ ಸಮಿತಿ ಅಥವಾ ಸಮಿತಿಗಳು;
(ಡಿ) “ಸದಸ್ಯ” ಎಂದರೆ ಆಯೋಗದ ಸದಸ್ಯ ಮತ್ತು ಅದು ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಯನ್ನು ಒಳಗೊಳ್ಳುತ್ತದೆ;
(ಇ) “ಸ್ವಯಂ ಸೇವಾ ಸಂಸ್ಥೆ” ಎಂದರೆ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ, 1960 (1960ರ ಕರ್ನಾಟಕ ಅಧಿನಿಯಮ17)ರ ಮೇರೆಗೆ ನೋಂದಾಯಿತವಾದ ಸ್ವಂತ ಸೇವಾ ಸಂಸ್ಥೆ.