(1) ಸದಸ್ಯ ಕಾರ್ಯದರ್ಶಿಯು ಆಯೋಗದ ಸಭೆಗಳಿಗೆ ಕಾರ್ಯಸೂಚಿಯನ್ನು ಸಿದ್ಧಪಡಿಸತಕ್ಕದ್ದು. ಸದಸ್ಯರು ತರುವಾಯದ ಸಭೆಯ ಕಾರ್ಯಸೂಚಿಯಲ್ಲಿ ಯಾವುದೇ ನಿರ್ದಿಷ್ಟ ವಿಷಯವನ್ನು ಸೇರುಸುವಂತೆ ಸಲಹೆ ನೀಡಬಹುದು. ಕಾರ್ಯಸೂಚಿಗೆ ಸಂಬಂಧಪಟ್ಟ ಟಿಪ್ಪಣಿಗಳನ್ನು ಆಯೋಗದ ಕಛೇರಿಯು ಸಿದ್ದಪಡಿಸುವುದು.
(2) ಸಾಮಾನ್ಯವಾಗಿ, ಕಾರ್ಯಸೂಚಿಯ ಮೇಲಿನ ಟಿಪ್ಪಣಿಗಳೊಂದಿಗೆ ಸಭೆಯ ನೋಟೀಸನ್ನು ಮತ್ತು ಈ ಹಿಂದಿನ ಸಭೆಯ ನಡವಳಿಗಳ ಪ್ರತಿಗಳನ್ನು ಹತ್ತು ದಿನಗಳಿಗಿಂತ ಮುಂಚಿತವಾಗಿ ಸದಸ್ಯರಿಗೆ ಕಳುಹಿಸಿಕೊಡತಕ್ಕದ್ದು.