(1) ಮಂಡಲಿಯು ರಾಜ್ಯ ಸರ್ಕಾರದ ಪೂರ್ವ ಮಂಜೂರಾತಿ ಪಡೆದು ಅಧಿನಿಯಮದ ಉದ್ದೇಶಗಳಿಗಾಗಿ, ಡಿಬೆಂಚರು ಹೊರಡಿಸುವ ಮೂಲಕ ಹಣ ಸಾಲ ಪಡೆಯಬಹುದು.
(2) ಹೊರಡಿಸಬೇಕಾದ ಡಿಬೆಂಚರ್ಗಳ ಒಟ್ಟು ಮೊಬಲಗು, ನೀಡಿಕೆ ಬೆಲೆ, ಡಿಬೆಂಚರುಗಳ ನಮೂನೆ ಮತ್ತು ವಾಯಿದೆ ದಿನಾಂಕ ಇವುಗಳನ್ನು ಸರ್ಕಾರದ ಪೂರ್ವಾನುಮೋದನೆ ಪಡೆದು ಕಾಲಕಾಲಕ್ಕೆ ಮಂಡಲಿಯು ನಿರ್ಧರಿಸತಕ್ಕದ್ದು.
(3) ಬಡ್ಡಿದರವು, ರಾಜ್ಯ ಸರ್ಕಾರವು ಕಾಲಕಾಲಕ್ಕೆ ನಿಗದಿಪಡಿಸಬಹುದಾದಂಥ ದರವಾಗಿರತಕ್ಕದ್ದು.
(4) ಹೊರಡಿಸಿದ ಡಿಬೆಂಚರುಗಳಿಗೆ ಅಸಲಿನ ಮರುಸಂದಾಯ ಮತ್ತು ಬಡ್ಡಿಯ ಸಂದಾಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಖಾತರಿ ನೀಡತಕ್ಕದ್ದು.
(5) ಡಿಬೆಂಚರುಗಳ ವಿಮೋಚನೆಗಾಗಿ ಋಣತೀರಿಕೆ ನಿಧಿಯೊಂದನ್ನು ರಚಿಸತಕ್ಕದ್ದು.
(6) ಈ ಡಿಬೆಂಚರುಗಳನ್ನು ಹಿಂಬರಹ ಮತ್ತು ಬಟವಾಡೆಯ ಮೂಲಕ ವರ್ಗಾವಣೆ ಮಾಡಬಹುದು.