(1) ಮಂಡಳಿಯು ರಾಜ್ಯ ಸರ್ಕಾರದ ಮಂಜೂರಾತಿ ಪಡೆದು ಯಾವುದೇ ನಿರ್ದಿಷ್ಟ ಬ್ಯಾಂಕು ಅಥವಾ ಬ್ಯಾಂಕರ್ಗೆ ನೀಡುವುದಕ್ಕಾಗಿ ಡಿಬೆಂಚರ್ ಬಾಂಡುಗಳನ್ನು ಕಾಯ್ದಿರಿಸಬಹುದು.
(2) ಮಂಡಲಿಯು ಕಾಲಕಾಲಕ್ಕೆ ನಿಗದಿಪಡಿಸಬಹುದಾದಂಥ ದರದಲ್ಲಿ ಬ್ಯಾಂಕು, ಬ್ರೋಕರಗಳು ಮತ್ತು ಅವರ ಅಧಿಕೃತ ಏಜೆಂಟರಿಗೆ ಅವರು ಅರ್ಜಿ ಸಲ್ಲಿಸಿದ ಮೇಲೆ ಮತ್ತು ಅವರ ಮೂಲಕ ಅವರ ಮೊಹರು ಇರುವ ಅರ್ಜಿಗಳನ್ನು ಸ್ವೀಕರಿಸಿದ ಮೇಲೆ ದಲಾಲಿಯನ್ನು ಸಂದಾಯಮಾಡತಕ್ಕದ್ದು. ಪರಂತು, ಅವರಿಂದ ಸ್ವೀಕರಿಸಲಾದ ಒಟ್ಟು ಚಂದಾ ಹಣವು ಮಂಡಳಿಯು ನಿರ್ಧರಿಸಬಹುದಾದಂಥ ಮೊತ್ತಕ್ಕಿಂತ ಕಡಿಮೆಯಾಗಿರಕೂಡದು.
(3) ಮಂಡಲಿಯು ನಿರ್ಧರಿಸಬಹುದಾದಂಥ ದರಗಳಲ್ಲಿ ಒಪ್ಪಂದ ಮಾಡಿಕೊಂಡ ಕವಿೂಷನನ್ನು ಮಂಡಲಿಯು ನಿಗದಿಪಡಿಸಬಹುದಾದ ಕನಿಷ್ಠ ಮೊಬಲಗಿಗೆ ಕಡಿಮೆಯಿಲ್ಲದ ಮೊತ್ತಗಳನ್ನು ಹೂಡಿರುವ ಬ್ಯಾಂಕುಗಳಿಗೆ ಮತ್ತು ದಲ್ಲಾಳಿಗಳಿಗೆ ಸಂದಾಯ ಮಾಡತಕ್ಕದ್ದು.