(1) ಡಿಬೆಂಚರುಗಳಿಗೆ ಚಂದಾಗಳನ್ನು, ಮಂಡಲಿಯ ಅಧ್ಯಕ್ಷನ ಹೆಸರಿಗೆ ಬರೆದ ಚೆಕ್ಕುಗಳು ಅಥವಾ ಡಿಮ್ಯಾಂಡ್ ಡ್ರಾಪ್ಟುಗಳ ಮೂಲಕ ನೀಡಬಹುದು. ಬೆಂಗಳೂರು ನಗರವನ್ನು ಹೊರತುಪಡಿಸಿ, ಇತರ ಸ್ಥಳಗಳಲ್ಲಿರುವ ಬ್ಯಾಂಕುಗಳಲ್ಲಿ ಪಡೆದ ಚೆಕ್ಕುಗಳ ಸಂಬಂಧದಲ್ಲಿ, ಮಂಡಲಿಯು ನಿಗದಿಪಡಿಸಬಹುದಾದ ಕವಿೂಷನ್ ಮತ್ತು ಸಂಗ್ರಹಣಾ ಚಾರ್ಜುಗಳನ್ನು ಸಂದಾಯ ಮಾಡತಕ್ಕುದು. ಚಂದಾ ಹಣಗಳು ಪೂರ್ಣವಾಗಿ ಪ್ರಾಪ್ತವಾದ ತರುವಾಯವೇ ಡಿಬೆಂಚರುಗಳನ್ನು ನೀಡತಕ್ಕದ್ದು.
(2) ಚಂದಾ ಹಣಗಳು ನೀಡಬೇಕಾದ ಡಿಬೆಂಚರುಗಳ ಒಟ್ಟು ಮೊಬಲಗಿಗಿಂತ ಹೆಚ್ಚಾಗಿರುವಲ್ಲಿ, ಭಾಗಶಃ ಹಂಚಿಕೆ ಮಾಡಬಹುದು ಮತ್ತು ಅರ್ಜಿ ಸಲ್ಲಿಸುವ ಸಮಯದಲ್ಲಿ ಸಂದಾಯ ಮಾಡಿದ ಮೊತ್ತದ ಶಿಲ್ಕನ್ನು ಸಾಧ್ಯವಾದಷ್ಟು ಬೇಗನೆ ಮರುಪಾವತಿ ಮಾಡತಕ್ಕದ್ದು. ಹಾಗೆ ಮರುಪಾವತಿಯಾದ ಮೊಬಲಗುಗಳಿಗೆ ಯಾವುದೇ ಬಡ್ಡಿಯನ್ನು ಸಂದಾಯ ಮಾಡತಕ್ಕದ್ದಲ್ಲ. ಹೊರಡಿಸಿದ ಮೊತ್ತಕ್ಕಿಂತ ಅಧಿಕವಾಗಿ ಸ್ವೀಕರಿಸಿದ ಚಂದಾಹಣದ ಪೈಕಿ ಶೇಕಡಾ ಹತ್ತರವರೆಗೆ ತನ್ನಲ್ಲಿ ಉಳಿಸಿಕೊಳ್ಳುವ ಹಕ್ಕನ್ನು ಮಂಡಲಿಯು ಕಾಯ್ದಿರಿಸಿಕೊಳ್ಳಬಹುದು.