(1) ಡಿಬೆಂಚರುಗಳ ಮೇಲಣ ಬಡ್ಡಿಯನ್ನು ಅರ್ಧ ವರ್ಷಕ್ಕೊಮ್ಮೆ ಸಂದಾಯ ಮಾಡತಕ್ಕದ್ದು, ಆ ಬಡ್ಡಿಯು ಆದಾಯ ತೆರಿಗೆ ಸಂದಾಯಕ್ಕೆ ಒಳಪಟ್ಟಿರತಕ್ಕದ್ದು.
(2) ಡಿಬೆಂಚರುಗಳು, ಅವುಗಳಲ್ಲಿ ನಮೂದಿಸಿದ ದಿನಾಂಕದಂದು ಸಮ ಮೌಲ್ಯಕ್ಕೆ ವಿಮೋಚನೀಯವಾಗಿರತಕ್ಕುದು ಮತ್ತು ಅದರ ಧಾರಕನು ಅವಧಿ ಮುಗಿದ ತರುವಾಯ ಒದಗಿಬರುವ ಬಡ್ಡಿಯ ಬಗ್ಗೆ ಮಂಡಲಿಯ ಮೇಲೆ ಯಾವುದೇ ಕ್ಲೇಮನ್ನು ಹೊಂದಿರತಕ್ಕದ್ದಲ್ಲ.
(3) ಹಾನಿಗೊಂಡ ಕಾರಣದಿಂದಾಗಿ ಚಲಾವಣೆಗೆ ಅನರ್ಹವಾದ ಡಿಬೆಂಚರುಗಳನ್ನು ಧಾರಕನು ಹಾನಿಗೊಂಡ ಅಥವಾ ವಿರೂಪಗೊಂಡ ಡಿಬೆಂಚರ್ಗಳನ್ನು ಒಪ್ಪಿಸಿ ಸಲ್ಲಿಸಿದ ಕೋರಿಕೆಯ ಮೇಲೆ ಅವುಗಳನ್ನು ಬದಲಾಯಿಸಿಕೊಡತಕ್ಕದ್ದು. ಪರಂತು, ಸಂಖ್ಯೆ, ಮೊಬಲಗು, ಬಡ್ಡಿಯದರ, ದಿನಾಂಕ ಮತ್ತು ಮಂಡಲಿಯ ಅಧ್ಯಕ್ಷ ಮತ್ತು ಸದಸ್ಯನ ಸಹಿಗಳಂಥ ವಾಸ್ತವಿಕತೆ ಮತ್ತು ಗುರುತಿನ ಅಗತ್ಯ ಚಿಹ್ನೆಗಳು ಇನ್ನೂ ಗುರುತಿಸುವಂತೆ ಇರಬೇಕು. ಡಿಬೆಂಚರು ಕಳೆದು ಹೋಗಿರುವ ಅಥವಾ ನಾಶವಾಗಿರುವ ಸಂಗತಿಯು ಮಂಡಲಿಯ ಅಭಿಪ್ರಾಯದಲ್ಲಿ ಯಾವುದೇ ಸಂದೇಹಕ್ಕೆ ಆಸ್ಪದವಿಲ್ಲದ ರೀತಿಯಲ್ಲಿ ರುಜುವಾತಾಗಿರುವಾಗ ಅವುಗಳಿಗೆ ಬದಲಾಗಿ ಸಹ ಹೊಸ ಡಿಬೆಂಚರುಗಳನ್ನು ನೀಡತಕ್ಕದ್ದು. ಅಂಥ ರುಜುವಾತನ್ನು ಒದಗಿಸದಿದ್ದಾಗ ಅಥವಾ ಹಾನಿಗೊಂಡಿರುವ ಸಂದರ್ಭದಲ್ಲಿ ಡಿಬೆಂಚರುಗಳ ಮೇಲಿನ ಅವಶ್ಯಕ ಚಿಹ್ನೆಗಳನ್ನು ಗುರುತಿಸಲು ಸಾಧ್ಯವಾಗದಿರುವಾಗ ಅಥವಾ ಡಿಬೆಂಚರು ಕಳೆದುಹೋಗಿರುವಾಗ ಅಥವಾ ಅದನ್ನು ಕೈ ತಪ್ಪಿ ಇಟ್ಟಿರುವಾಗ, ಕಳೆದು ಹೋಗಿದೆ ಎಂದು ಅಥವಾ ಗುರುತಿಸಲು ಸಾಧ್ಯವಿಲ್ಲವೆಂದು ಹೇಳಲಾದ ಡಿಬೆಂಚರಿನ ಬಗ್ಗೆ ಕ್ಲೇಮುದಾರನು ಮಂಡಲಿಯು ನಿರ್ದಿಷ್ಟಪಡಿಸಿದ ರೀತಿಯಲ್ಲಿ ಜಾಹೀರಾತು ಕೊಟ್ಟಿರುವಲ್ಲಿ ಮತ್ತು ಅದನ್ನು ಇತರ ಯಾವನೇ ವ್ಯಕ್ತಿಯು ಕ್ಲೇಮು ಮಾಡದಿರುವಲ್ಲಿ ಮಾತ್ರ ಹೊಸ ಡಿಬೆಂಚರನ್ನು ನೀಡಬಹುದು.
(4) ಡಿಬೆಂಚರಿನ ಮರು ನೀಡಿಕೆ ಮಾಡುವಾಗ, ಅದೇ ಸಂಖ್ಯೆಯ ಅಡಿಯಲ್ಲಿ ಅಷ್ಟೇ ಮೊಬಲಗಿಗೆ ಮತ್ತು ಅದರ ಮೇಲೆ ‘‘ನವೀಕರಿಸಲಾಗಿದೆ'' ಎಂಬ ಹೆಚ್ಚಿನ ಪದವನ್ನು ಸೇರಿಸಿ ನೀಡತಕ್ಕದ್ದು. ಹಾಗೆ ನೀಡಲಾದ ಪ್ರತಿಯೊಂದು ನವೀಕೃತ ಡಿಬೆಂಚರಿಗೆ ಒಂದು ರೂಪಾಯಿ ಫೀಜನ್ನು ವಿಧಿಸತಕ್ಕದ್ದು.
ಅರ್ಜಿಯ ನಮೂನೆ (5ನೇ ನಿಯಮ ನೋಡಿ)
ಕರ್ನಾಟಕ ಗೃಹ ನಿರ್ಮಾಣ ಮಂಡಳಿ 20........................20 ....................................................ರ ವರ್ಷಗಳ ಶೇಕಡಾ ..........................ರ ಡಿಬೆಂಚರ್ಗಳನ್ನು ಕೋರಿ ಸಲ್ಲಿಸುವ ಅರ್ಜಿ ಅಧ್ಯಕ್ಷರು, ಕರ್ನಾಟಕ ಗೃಹನಿರ್ಮಾಣ ಮಂಡಲಿ, ಬೆಂಗಳೂರು - ಇವರಿಗೆ ಮಾನ್ಯರೆ, 20.........................20.....................ವರ್ಷಗಳ ಡಿಬೆಂಚರುಗಳ ನೀಡಿಕೆ ಬಡ್ಡಿ ಶೇಕಡಾ .................ನಂತೆ ನೀಡಿಕೆ ಬೆಲೆ................ರೂ...........................
ನಾನು / ನಾವು ಮೇಲೆ ತಿಳಿಸಿರುವ ನೀಡಿಕೆಯ............................ರೂಪಾಯಿಗಳ ಮುಖಬೆಲೆಯ ಡಿಬೆಂಚರುಗಳನ್ನು ಕೋರಿ ಈ ಮೂಲಕ ಅರ್ಜಿ ಸಲ್ಲಿಸುತ್ತಿದ್ದೇನೆ/ವೆ. ಸಲ್ಲಿಸಿದ ಮೊಬಲಗಿಗೆ ಈ ಕೆಳಗೆ ಸೂಚಿಸಿರುವ ವರ್ಗಗಳ ಡಿಬೆಂಚರುಗಳನ್ನು ದಯವಿಟ್ಟು ನೀಡುವುದು.
| ವರ್ಗ | ಬಾಂಡುಗಳ ಸಂಖ್ಯೆ | ಮೊಬಲಗು |
| 100 | ||
| 500 | ||
| 1,000 | ||
| 5,000 | ||
| 10,000 | ||
| 25,000 | ||
| 50,000 | ||
| 1,00,000 |
- ..................................
- ..................................
- ಬೆಂಗಳೂರಿನಲ್ಲಿರುವ ಅಧ್ಯಕ್ಷನ ಕಚೇರಿಯಲ್ಲಿ (ವಾಯಿದೆ ದಿನಾಂಕಗಳಂದು ಬಾಂಡುಗಳನ್ನು ಹಾಜರುಪಡಿಸಿ) ಟಿಪ್ಪಣಿ.- ಅಗತ್ಯವಿಲ್ಲದ ಭಾಗಗಳನ್ನು ಹೊಡೆದುಹಾಕಿ ಪೂರ್ಣ ಹೆಸರು/ಹೆಸರುಗಳು (ಸ್ಪಷ್ಟ ಅಕ್ಷರಗಳಲ್ಲಿ).................................. ಪೂರ್ಣ ವಿಳಾಸ.....................................
....................................................
ತಮ್ಮ ವಿಶ್ವಾಸಿ ಸಹಿ ಟಿಪ್ಪಣಿ.-1. ಯಾರ ಹೆಸರಿನಲ್ಲಿ ಬಾಂಡುಗಳು ಬೇಕಾಗಿವೆಯೋ ಆ ಹೆಸರನ್ನು ಸ್ಪಷ್ಟ ಅಕ್ಷರಗಳಲ್ಲಿ ನಮೂದಿಸಬೇಕು. ಬಾಂಡುಗಳನ್ನು ಜಂಟಿ ಹೆಸರಿನಲ್ಲಿ ಹೊಂದಿರಬೇಕಾಗಿರುವಲ್ಲಿ, ಆ ಹೆಸರುಗಳನ್ನು ಬರೆಯತಕ್ಕ ಕ್ರಮವನ್ನು ನಮೂದಿಸಬೇಕು. ಸಂಸ್ಥೆಯ ಸಂದರ್ಭದಲ್ಲಿ ಬಾಂಡುಗಳನ್ನು ಸಂಸ್ಥೆಯ ಹೆಸರಿನಲ್ಲೇ ನೀಡಲಾಗುವುದು. 2. ಡಿಬೆಂಚರುಗಳ ಮೇಲಣ ಬಡ್ಡಿಯನ್ನು ಯಾವ ಬ್ಯಾಂಕು ಅಥವಾ ಕಚೇರಿ ಮತ್ತು ಸ್ಥಳದಲ್ಲಿ ಪಡೆಯಬೇಕೆಂಬ ಬಗ್ಗೆ ನಿರ್ದಿಷ್ಟವಾಗಿ ನಮೂದಿಸಿರಬೇಕು.