(1) ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು-
(1) “ಅಧಿನಿಯಮ’ ಎಂದರೆ, ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ಅಧಿನಿಯಮ, 1990 (1991 ರ ಕರ್ನಾಟಕ ಅಧಿನಿಯಮ ಸಂಖ್ಯೆ 7);
(2) “ಶೈಕ್ಷಣಿಕ ಸಂಸ್ಥೆ” ಎಂದರೆ, ರಾಜ್ಯ ಸರ್ಕಾರವು ಸ್ಥಾಪಿಸಿದ ಅಥವಾ ನಿರ್ವಹಿಸುತ್ತಿರುವ ಅಥವಾ ಅನುದಾನ ನೀಡಿದ ಶಿಕ್ಷಣ ಸಂಸ್ಥೆ;
(3) ‘ಸಾರ್ವಜನಿಕ ವಲಯ ಸಂಸ್ಥೆಗಳು” ಎಂದರೆ, “ಅಧಿನಿಯಮದಲ್ಲಿ” ಪರಿಭಾಷಿಸಲಾದ ಸಂಸ್ಥೆಗಳು;
(4) “ಜಾತಿ ಪರಿಶೀಲನಾ ಸಮಿತಿ” ಎಂದರೆ, 1 [ನಿಯಮ 4ರ ಅನುಸಾರವಾಗಿ ರಚಿತವಾದ ಒಂದು ಸಮಿತಿ ಮತ್ತು ಒಂದು ಹೆಚ್ಚುವರಿ ಸಮಿತಿ;]
(5) “ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ’ ಎಂದರೆ. 2 [ನಿಯಮ 5ರ ಅನುಸಾರವಾಗಿ ರಚಿತವಾದ ಒಂದು ಸಮಿತಿ ಮತ್ತು ಒಂದು ಹೆಚ್ಚುವರಿ ಸಮಿತಿ;]
(6) “ನಮೂನೆ” ಎಂದರೆ, ಈ ನಿಯಮಗಳಿಗೆ ಸೇರಿಸಲಾದ ನಮೂನೆ;
(7) “ತನಿಖಾಧಿಕಾರಿ” ಎಂದರೆ, ಈ ಅಧಿನಿಯಮದ ಕಲಂ 7 ರ ಉಪ-ಕಲಂ (2) ರನ್ವಯ ಸರ್ಕಾರದಿಂದ ಅಧಿಕೃತಗೊಳಿಸಲ್ಪಟ್ಟ ಅಧಿಕಾರಿ;
(8) “ಸಿಂಧುತ್ವ ಪ್ರಮಾಣ ಪತ್ರ” ಎಂದರೆ, ಜಾತಿ ಪರಿಶೀಲನಾ ಸಮಿತಿ ಅಥವಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯಿಂದ ನೀಡಲ್ಪಟ್ಟ ಪ್ರಮಾಣ ಪತ್ರ;
- ನಿಯಮ” 4ರನ್ವಯ ರಚಿತವಾದ ಸಮಿತಿ”ಎಂಬ ಪದಗಳ ಬದಲಾಗಿ ಅಧಿಸೂಚನೆ ಸಂಖ್ಯೆ : ಎಸ್ಡಬ್ಲ್ಯೂಡಿ 132 ಎಸ್ಎಡಿ 97 ರ ಮೂಲಕ ದಿನಾಂಕ : 08.02.2000 ರನ್ವಯ ಪ್ರತಿಯೋಜಿಸಲಾಗಿದೆ ಮತ್ತು ದಿನಾಂಕ : 28.02.2000ದಿಂದ ಜಾರಿಗೆ ಬಂದಿದೆ.
- “ನಿಯಮ 5 ರನ್ವಯ ರಚಿತವಾದ ಸಮಿತಿ’’ ಎಂಬ ಪದಗಳ ಬದಲಾಗಿ ಅಧಿಸೂಚನೆ ಸಂಖ್ಯೆ : ಎಸ್ಡಬ್ಲ್ಯೂಡಿ 132 ಎಸ್ಎಡಿ 97 ರ ಮೂಲಕ ದಿನಾಂಕ : 08.02.2000 ರನ್ವಯ ಪ್ರತಿಯೋಜಿಸಲಾಗಿದೆ ಮತ್ತು ದಿನಾಂಕ : 28.02.2000ದಿಂದ ಜಾರಿಗೆ ಬಂದಿದೆ. (2) ಈ ನಿಯಮಗಳಲ್ಲಿ ಬಳಸಿದ ಆದರೆ ಪರಿಭಾಷಿಸಿಲ್ಲದ ಇತರ ಪದಗಳು ಮತ್ತು ಅಭಿವ್ಯಕ್ತಿಗಳಿಗೆ ಕರ್ನಾಟಕ ಸಿವಿಲ್ ಸೇವೆಗಳು (ಸಾಮಾನ್ಯ ನೇಮಕಾತಿ ಭರ್ತಿ) ನಿಯಮಗಳು, 1977 ರಲ್ಲಿರುವ ಅರ್ಥವೇ ಇರತಕ್ಕದ್ದು.