ಉದ್ಯೋಗಕ್ಕಾಗಲಿ ಅಥವಾ ಪ್ರವೇಶಕ್ಕಾಗಲಿ ಮೀಸಲಾತಿ ಪಡೆಯುವ ಪ್ರತಿಯೊಬ್ಬ ವ್ಯಕ್ತಿಯು ನಮೂನೆ – I ರಲ್ಲಿ ನಿಗದಿಪಡಿಸಿರುವ ಜಾತಿ ಅಥವಾ ಜಾತಿ ಮತ್ತು ಆದಾಯದ ಕೋರಿಕೆ (ಕ್ಲೇಮು) ಪರಿಶೀಲನೆಗಾಗಿ ;-
- ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗಕ್ಕೆ ಸೇರಿದವರೆಂದು ಕೋರಿದ್ದಲ್ಲಿ ಪರಿಶೀಲನಾ ಸಮಿತಿಗೂ;
- ಹಿಂದುಳಿದ ಬುಡಕಟ್ಟು ಅಥವಾ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರೆಂದು ಕೋರಿದ್ದಲ್ಲಿ ಜಾತಿ ಆದಾಯ ಪರಿಶೀಲನಾ ಸಮಿತಿಗೂ ಸಲ್ಲಿಸತಕ್ಕದ್ದು. 4 [6-ಎ. ಜಾತಿ ಹಾಗೂ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯಿಂದ ಪರಿಶೀಲನೆ :– ಜಾತಿ ಪರಿಶೀಲನಾ ಸಮಿತಿ ಅಥವಾ ಸಂದರ್ಭಾನುಸಾರ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯು, ಸಿಂಧುತ್ವ ಪ್ರಮಾಣ ಪತ್ರದ ನೀಡಿಕೆಗಾಗಿ ಅರ್ಜಿಯನ್ನು ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ವ್ಯಕ್ತಿಗಳ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಂಬಂಧಪಟ್ಟ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗೆ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಗಳ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಸಂಬಂಧಪಟ್ಟ ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿಗೆ, ಸತ್ಯಾಪನೆಗಾಗಿ ಮತ್ತು ಸ್ಥಳೀಯ ವಿಚಾರಣೆ ನಡೆಸಿದ ನಂತರ ವರದಿ ಸಲ್ಲಿಸುವುದಕ್ಕಾಗಿ ಕಳುಹಿಸತಕ್ಕದ್ದು.] 1. 2012 ರ ಅಧಿನಿಯಮ ಸಂಖ್ಯೆ : 7 ರ ಮೂಲಕ ನಿಯಮ 5-ಎ ಅನ್ನು ದಿನಾಂಕ : 22.06.2012 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
- “ವಿದ್ಯಾಭ್ಯಾಸ ಮತ್ತು” ಎಂಬ ಪದಗಳನ್ನು ಅಧಿಸೂಚನೆ ಸಂಖ್ಯೆ : ಎಸ್ಡಬ್ಲ್ಯೂಡಿ 3 ಎಸ್ಟಿಸಿ 2002 ರ ಮೂಲಕ ದಿನಾಂಕ : 15.02.2002 ರನ್ವಯ ಬಿಟ್ಟುಬಿಡಲಾಗಿದೆ ಮತ್ತು ದಿನಾಂಕ : 15.03.2002 ರಿಂದ ಜಾರಿಗೆ ಬಂದಿರುತ್ತದೆ.
- ನಿಯಮ 6-ಎ ಅನ್ನು ಅಧಿಸೂಚನೆ ಸಂಖ್ಯೆ : : ಎಸ್ಡಬ್ಲ್ಯೂಡಿ 132 ಎಸ್ಎಡಿ 97 ಮೂಲಕ ದಿ ಃ 08-02-2000 ರನ್ವಯ ಸೇರಿಸಲಾಗಿದೆ ಮತ್ತು ದಿನಾಂಕ : 05.02.2000 ದಿಂದ ಜಾರಿಗೆ ಬಂದಿರುತ್ತದೆ. 1 [7. ಸಿಂಧುತ್ವ ಪ್ರಮಾಣ ಪತ್ರ ನೀಡಿಕೆ :–(1) 6-ಎ ನಿಯಮದ ಅಡಿಯಲ್ಲಿ ಕಳುಹಿಸಿದ ಅರ್ಜಿಯ ಸಂಬಂಧದಲ್ಲಿ ವರದಿಯನ್ನು ಪಡೆದ ತರುವಾಯ, ಜಾತಿ ಪರಿಶೀಲನಾ ಸಮಿತಿ ಹಾಗೂ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯು, ಸಂಬಂಧಪಟ್ಟ ಪಕ್ಷಕಾರರಿಗೆ ಅವಕಾಶವನ್ನು ನೀಡಿದ ತರುವಾಯ ವಿಚಾರಣೆಯನ್ನು ನಡೆಸತಕ್ಕದ್ಧು.
(2) ಸಮಿತಿಯು, ಶಾಲಾ ದಾಖಲೆಗಳನ್ನು ಜನನ ನೊಂದಣಿ ಪ್ರಮಾಣ ಪತ್ರ ಯಾವುದಾದರು ಇದ್ದರೆ ಅದನ್ನು ಮತ್ತು ಇತರೆ ಅಂಥ ಸಂಬಂಧಿಸಿದ ವಿಷಯಗಳನ್ನು ಪರೀಕ್ಷಿಸಬಹುದು ಮತ್ತು ಅರ್ಜಿದಾರನ ಸಮುದಾಯದ ಬಗ್ಗೆ ತಿಳಿದಿರುವ ಇತರೆ ಯಾಮೊಬ್ಬ ವ್ಯಕ್ತಿಯನ್ನು ಸಹ ಪರೀಕ್ಷಿಸಿಬಹುದು:
ಪರಂತು, ಅರ್ಜಿದಾರನು ಅನುಸೂಚಿತ ಬುಡಕಟ್ಟಿಗೆ ಸೇರಿದ್ದರೆ, ಸಮಿತಿಯು, ಮಾನವ ಶಾಸ್ತ್ರ ಹಾಗೂ ಜನಾಂಗಕ್ಕೆ ಸಂಬಂಧಿಸಿದ ಗುಣಲಕ್ಷಣಗಳು, ದೇವತೆಗಳು, ಆಚರಣೆಗಳು, ಸಂಪ್ರದಾಯಗಳು, ವಿವಾಹ ಪದ್ದತಿಗಳು, ಉತ್ತರ ಕ್ರಿಯೆಗಳು, ಶವಗಳನ್ನು ಹೂಳುವ ಪದ್ದತಿಗಳು ಮತ್ತು ಅಂಥ ಇತರೆ ವಿಷಯಗಳನ್ನು ಕೂಡ ಪರೀಕ್ಷಿಸಬಹುದು.
(3) ಅಂಥ ವಿಚಾರಣೆಯ ತರುವಾಯ ಅರ್ಜಿದಾರನ ಕ್ಲೇಮು ನಿಜವೆಂದು ಸಮಿತಿಗೆ ಕಂಡುಬಂದರೆ, ಅದು ಕೋರಲಾಗಿದ್ದ ಪ್ರಮಾಣ ಪತ್ರವನ್ನು 1-ಎ ನಮೂನೆಯಲ್ಲಿ ನೀಡಬಹುದು. ಆದರೆ, ಅರ್ಜಿದಾರನು ಸುಳ್ಳು ಮನವಿಯನ್ನು ಸಲ್ಲಿಸುವ ಮೂಲಕ ಜಾತಿ ಪ್ರಮಾಣ ಪತ್ರ ಅಥವಾ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡಿರುವನೆಂದು ಸಮಿತಿಗೆ ತಿಳಿದುಬಂದರೆ, ಹಾಗೆ ತಿರಸ್ಕರಿಸುವುದಕ್ಕೆ ಇದ್ದ ಕಾರಣಗಳನ್ನು ತಿಳಿಸಿ ಅರ್ಜಿಯನ್ನು ತಿರಸ್ಕರಿಸುವ ಆದೇಶವನ್ನು ಹೊರಡಿಸತಕ್ಕದ್ದು. ಈ ಉಪ-ನಿಯಮದ ಅಡಿಯಲ್ಲಿ ಆದೇಶವನ್ನು ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ ಒಂದು ತಿಂಗಳೊಳಗಾಗಿ ಹೊರಡಿಸತಕ್ಕದ್ದು.
(4) (2) ಮತ್ತು (3) ನೇ ಉಪ-ನಿಯಮಗಳಲ್ಲಿ ಉಲ್ಲೇಖಿಸಿದ ವಿಚಾರಣೆಯನ್ನು ನಡೆಸಿದ ನಂತರವೂ ಕ್ಲೇಮು ಅನುಮಾನಾಸ್ಪದವೆಂದು ಸಮಿತಿಗೆ ಕಂಡು ಬಂದಲ್ಲಿ ಮತ್ತು ಒಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲದ ಪರಿಸ್ಥಿತಿಯಿದ್ದಲ್ಲಿ, ಅದು ವಿಷಯವನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ವಿವರವಾದ ತನಿಖೆ ಮತ್ತು ವರದಿಗಾಗಿ ಕಳುಹಿಸತಕ್ಕದ್ದು. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಿಂದ ವರದಿಯನ್ನು ಸ್ವೀಕರಿಸಿದ ನಂತರ ಸಮಿತಿಯು, ತಾನು ಸೂಕ್ತವೆಂದು ಭಾವಿಸಬಹುದಾದಂತೆ ವಿಚಾರಣೆಯನ್ನು ನಡೆಸಿದ ತರುವಾಯ ಮತ್ತು ಅರ್ಜಿದಾರನಿಗೆ ಸುನಾವಣೆಗಾಗಿ ಅವಕಾಶವನ್ನು ನೀಡಿದ ತರುವಾಯ, ಪ್ರಕರಣವನ್ನು ಗುಣದೋಷಗಳ ಆಧಾರದ ಮೇಲೆ ವಿಲೆ ಮಾಡತಕ್ಕದ್ದು. ಈ ಉಪನಿಯಮದ ಅಡಿಯಲ್ಲಿ ಆದೇಶವನ್ನು ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ ಒಂದು ತಿಂಗಳ ಅವಧಿಯೊಳಗೆ ಹೊರಡಿಸತಕ್ಕದ್ದು.
(5) ಜಾತಿ ಪರಿಶೀಲನಾ ಸಮಿತಿ ಅಥವಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯ ಆದೇಶದಿಂದ ಬಾಧಿತವಾದ ಯಾಮೊಬ್ಬ ವ್ಯಕ್ತಿಯು, ಡಿವಿಜನಲ್ ಕಮಿಷನರನಿಗೆ ಅಫೀಲನ್ನು ಸಲ್ಲಿಸಬಹುದು. ಅಂಥ ಅಫೀಲನ್ನು ಸಲ್ಲಿಸಿದ ದಿನಾಂಕದಿಂದ ನಲವತ್ತೈದು ದಿನಗಳೊಳಗೆ, ಡಿವಿಜನಲ್ ಕಮಿಷನರ್ ಅವರು, ಉಭಯ ಪಕ್ಷಕಾರರಿಗೆ ಸುನಾವಣೆಗಾಗಿ ಅವಕಾಶವನ್ನು ನೀಡಿದ ತರುವಾಯ, ತಾನು ಸೂಕ್ತವೆಂದು ಭಾವಿಸಬಹುದಾದಂತೆ ಅಂಥ ಆದೇಶವನ್ನು ಹೊರಡಿಸತಕ್ಕದ್ಧು.] 1. ನಿಯಮ 7ನ್ನು ಅಧಿಸೂಚನೆ ಸಂಖ್ಯೆ : ಎಸ್ಡಬ್ಲ್ಯೂಡಿ 132 ಎಸ್ಎಡಿ 97 ನ್ನು ದಿ ಃ 08-02-2000 ರನ್ವಯ ಸೇರಿಸಲಾಗಿದೆ ಮತ್ತು ದಿನಾಂಕ : 05.02.2000 ದಿಂದ ಜಾರಿಗೆ ಬಂದಿರುತ್ತದೆ.
1 [7-ಎ. ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದಿದ್ದಕ್ಕಾಗಿ ಪ್ರಾಸಿಕ್ಯೂಷನ್ ನಡೆಸುವುದು-(1) ಸಂದರ್ಭಾನುಸಾರ ಜಾತಿ ಪರಿಶೀಲನಾ ಸಮಿತಿ ಅಥವಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯು ಮತ್ತು ಡಿವಿಜನಲ್ ಕಮೀಷನರು, ಸಿಂಧುತ್ವ ಪ್ರಮಾಣ ಪತ್ರದ ನೀಡಿಕೆಗಾಗಿನ ಅರ್ಜಿದಾರನ ಕ್ಲೇಮನ್ನು ತಿರಸ್ಕರಿಸಿ ಹೊರಡಿಸಿದ ಆದೇಶದ ಪ್ರತಿಯನ್ನು ಸಂದರ್ಭಾನುಸಾರ ಅಂಥ ಕ್ಲೇಮನ್ನು ತಿರಸ್ಕರಿಸಿದ ಬಗ್ಗೆ ಅಫೀಲಿನ ಮೇಲೆ ಆದೇಶದ ಪ್ರತಿಯನ್ನು ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ಕಳುಹಿಸತಕ್ಕದ್ದು.
(2) ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯವು ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದಿರುವ ಅಂಥ ಕ್ಲೇಮುದಾರನ ಮೇಲೆ ಪ್ರಾಸಿಕ್ಯೂಷನ್ ನಡೆಸತಕ್ಕದ್ದು.
7-ಬಿ. ಸುಳ್ಳು ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಪಡೆದುಕೊಂಡ ಆರ್ಥಿಕ ಪ್ರಯೋಜನಗಳನ್ನು ಹಿಂದಕ್ಕೆ ಪಡೆಯುವುದು- ಸರ್ಕಾರವು ಅಥವಾ ಇತರ ಯಾವುದೇ ಏಜನ್ಸಿಯು ಸುಳ್ಳು ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ವಿದ್ಯಾರ್ಥಿ ವೇತನದ, ಅನುದಾನದ, ಭತ್ಯೆಗಳ ಅಥವಾ ಇತರೆ ಆರ್ಥಿಕ ಪ್ರಯೋಜನಗಳ ರೂಪದಲ್ಲಿ ಯಾಮೊಬ್ಬ ವ್ಯಕ್ತಿಗೆ ಯಾವುದೇ ಮೊಬಲಗನ್ನು ಸಂದಾಯ ಮಾಡಿದ್ದರೆ, ಯಾವುದೇ ಇತರ ಕ್ರಮಕ್ಕೆ ಬಾಧಕವಾದಂತೆ, ಅಂಥ ವ್ಯಕ್ತಿಯಿಂದ ಅದನ್ನು ವಸೂಲು ಮಾಡಿಕೊಳ್ಳಲು ಅವನು ಬದ್ಧನಾಗಿರತಕ್ಕದ್ದು.] 2 [8. ಶೈಕ್ಷಣಿಕ ಸಂಸ್ಥೆಗಳಿಗೆ ಪ್ರವೇಶಾವಕಾಶ- [ಥxx].