ಇತರ ಹಿಂದುಳಿದ ವರ್ಗಗಳ ಸಂಬಂಧದಲ್ಲಿ ನೀಡಲಾದ ಜಾತಿ ಮತ್ತು ಪರಿಶೀಲನೆಗೆ ಪ್ರತಿಯೊಂದು ಜಿಲ್ಲೆಯಲ್ಲೂ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಎಂಬ ಸಮತಿಯು ಇರತಕ್ಕದ್ದು. ಈ ಸಮಿತಿಯು ಮುಂದಿನ ಸದಸ್ಯರುಗಳನ್ನು ಒಳಗೊಂಡಿರತಕ್ಕದ್ದು, ಎಂದರೆ:-
-
ಜಿಲ್ಲೆಯ ಜಿಲ್ಲಾಧಿಕಾರಿಯು ಅಧ್ಯಕ್ಷರಾಗಿರತಕ್ಕದ್ದು;
-
ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿ (ಆಡಳಿತ);
-
ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರ್;
-
ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿರತಕ್ಕದ್ದು;]
ಪರಂತು, ರಾಜ್ಯ ಸರ್ಕಾರವು, ಇತರ ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಗಳಿಗೆ ನೀಡಲಾದ ಆದಾಯ ಮತ್ತು ಜಾತಿ ಪ್ರಮಾಣ ಪತ್ರದ ಸತ್ಯಾಪನೆಗಾಗಿ ಯಾವುದೇ ಜಿಲ್ಲೆಗೆ ಈ ಮುಂದಿನ ಸದಸ್ಯರುಗಳನ್ನು ಒಳಗೊಂಡ ಹೆಚ್ಚುವರಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪರಿಶೀಲನಾ ಸಮಿತಿಯೊಂದನ್ನು ರಚಿಸಬಹುದು, ಎಂದರೆ :-
(i) ಸ್ಪೆಷಲ್ ಡೆಪ್ಯುಟಿ ಕಮೀಷನರ್ ದರ್ಜೆಗೆ ಕಡಿಮೆಯಿಲ್ಲದ ರಾಜ್ಯ ಸರ್ಕಾರವು ನೇಮಕ ಮಾಡಿದ ಒಬ್ಬ ಅಧಿಕಾರಿ ಅಧ್ಯಕ್ಷರು 1. ನಿಯಮಗಳು 4 ಮತ್ತು 5 ಅನ್ನು ಅಧಿಸೂಚನೆ ಸಂಖ್ಯೆ : ಸಕಸ 137 ಬಿಸಿಎ 93 ರ ಮೂಲಕ ದಿನಾಂಕ : 11-11-1993 ರನ್ವಯ ಪ್ರತಿಯೋಜಿಸಲಾಗಿದೆ. 2. ಪರಂತುಕವನ್ನು ಅಧಿಸೂಚನೆ ಸಂಖ್ಯೆಃ : ಎಸ್ಡಬ್ಲ್ಯೂಡಿ 132 ಎಸ್ಎಡಿ 97 ಮೂಲಕ ದಿ ಃ 08-02-2000 ರನ್ವಯ ಸೇರಿಸಲಾಗಿದೆ ಮತ್ತು ದಿನಾಂಕ : 05.02.2000 ದಿಂದ ಜಾರಿಗೆ ಬಂದಿರುತ್ತದೆ. 3. ಪರಂತುಕವನ್ನು ಅಧಿಸೂಚನೆ ಸಂಖ್ಯೆಃ : ಎಸ್ಡಬ್ಲ್ಯೂಡಿ 132 ಎಸ್ಎಡಿ 97 ಮೂಲಕ ದಿ ಃ 08-02-2000 ರನ್ವಯ ಸೇರಿಸಲಾಗಿದೆ ಮತ್ತು ದಿನಾಂಕ : 05.02.2000 ದಿಂದ ಜಾರಿಗೆ ಬಂದಿರುತ್ತದೆ. (ii) ಉಪ ವಿಭಾಗದ ಅಸಿಸ್ಟೆಂಟ್ ಕಮೀಷನರ್ ಸದಸ್ಯರು
(iii) ತಾಲ್ಲೂಕಿನ ತಹಶೀಲ್ದಾರ್
(iii) ತಾಲ್ಲೂಕಿನ ತಹಶೀಲ್ದಾರ್ ಸದಸ್ಯರು
(iv) ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಧಿಕಾರಿ ಸದಸ್ಯ ಕಾರ್ಯದರ್ಶಿ] 1 [5-ಎ. ಜಾತಿ ಪರಿಶೀಲನಾ ಸಮಿತಿಯು ನೀಡಿದ ಪ್ರಮಾಣ ಪತ್ರದ ಸಿಂಧುತ್ವ :- (1) ಅನುಸೂಚಿತ ಜಾತಿ ಅಥವಾ ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ವ್ಯಕ್ತಿಯ ಹೆಸರಿನಲ್ಲಿ ಜಾತಿ ಪರಿಶೀಲನಾ ಸಮಿತಿಯು 2 [ಥxx] ಉದ್ಯೋಗದ ಉದ್ದೇಶಕ್ಕಾಗಿ ನೀಡಿದ ಜಾತಿ ಪ್ರಮಾಣ ಪತ್ರದ ಸಿಂಧುತ್ವವು, ಅದನ್ನು ರದ್ದುಗೊಳಿಸುವವರೆಗೆ ಅಥವಾ ಅರ್ಜಿದಾರನು ತನ್ನ ಧಾರ್ಮಿಕ ನಿಷ್ಟೆಯನ್ನು ಬದಲಾಯಿಸುವವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ, ಜಾರಿಯಲ್ಲಿರತಕ್ಕದ್ದು.
(2) ಹಿಂದುಳಿದ ವರ್ಗಗಳ ಪ್ರವರ್ಗ -Iಕ್ಕೆ ಸೇರಿದ ವ್ಯಕ್ತಿಯ ಹೆಸರಿನಲ್ಲಿ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯು ನೀಡಿದ ಪ್ರಮಾಣ ಪತ್ರದ ಸಿಂಧುತ್ವವು 3 [ಥxx] ಉದ್ಯೋಗದ ಉದ್ದೇಶಕ್ಕಾಗಿ, ಆತನ ಜಾತಿಗೆ ಮೇಲು ಸ್ಥರದ (ಕ್ರೀಮಿಲೇಯರ್) ಮಾನದಂಡಗಳನ್ನು ಅನ್ವಯಿಸದೇ ಜಾತಿಗೆ ಮೀಸಲಾತಿ ಸೌಲಭ್ಯ ಲಭ್ಯವಿರುವವರೆಗೆ ಅಥವಾ ಅದನ್ನು ರದ್ದುಗೊಳಿಸುವವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ, ಜಾರಿಯಲ್ಲಿರತಕ್ಕದ್ದು.]