ಸಿಂಧುತ್ವ ಪ್ರಮಾಣ ಪತ್ರ ಪಡೆಯದ ಯಾವುದೇ ವ್ಯಕ್ತಿಯನ್ನು ಸರ್ಕಾರದ ಸೇವೆಗಾಗಲಿ ಅಥವಾ ಹುದ್ದೆಗಾಗಲಿ ಇಲ್ಲವೆ ಸಾರ್ವಜನಿಕ ಕ್ಷೇತ್ರದ ಕಾರ್ಯ ಸಂಸ್ಥೆಗಾಗಲಿ ನೇಮಕ ಮಾಡತಕ್ಕದ್ದಲ್ಲ.
3 [9-ಎ. ಪರಿಶೀಲನಾ ಸಮಿತಿ ಃ- [ಥxx].
4 [10. ಅಧಿನಿಯಮದ ಉಪಬಂಧಗಳ ಉಲ್ಲಂಘನೆಗಾಗಿ ಕ್ರಮ ಕೈಗೊಳ್ಳಲು ಅಧಿಕಾರ ಇತ್ಯಾದಿ-(1) ಅಧಿನಿಯಮ ಮತ್ತು ನಿಯಮಗಳ ವಿವಿಧ ಉಪಬಂಧಗಳ ಉಲ್ಲಂಘನೆಗಾಗಿ ಕ್ರಮ ಕೈಗೊಳ್ಳಲು ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಸಂಬಂಧದಲ್ಲಿ [ಸಮಾಜ ಕಲ್ಯಾಣದ ನಿರ್ದೇಶಕರು,] ಬುಡಕಟ್ಟು ಕಲ್ಯಾಣ ನಿರ್ದೇಶಕರು ಅಥವಾ ಅವರಿಂದ ಪ್ರಾಧಿಕೃತನಾದ ಅಧಿಕಾರಿ ಮತ್ತು ಹಿಂದುಳಿದ ವರ್ಗಗಳ ಸಂಬಂಧದಲ್ಲಿ ಹಿಂದುಳಿದ ವರ್ಗಗಳ ನಿರ್ದೇಶಕರು ಅಥವಾ ಅವರಿಂದ ಪ್ರಾಧಿಕೃತನಾದ ಅಧಿಕಾರಿ (ಇಲ್ಲಿ ಇನ್ನು ಮುಂದೆ ಪ್ರಾಧಿಕೃತ ಅಧಿಕಾರಿಯೆಂದು ಉಲ್ಲೇಖಿಸಲಾಗಿದೆ) ಇವರು ಪ್ರಾಧಿಕಾರಿಗಳಾಗಿರುತ್ತಾರೆ. (2) ಪ್ರಾಧಿಕೃತ ಅಧಿಕಾರಿಯು, ಪ್ರವೇಶಗಳು ಅಥವಾ ನೇಮಕಾತಿಗಳ ವಿಷಯದಲ್ಲಿ ಅಧಿನಿಯಮ, ನಿಯಮಗಳ ಅಥವಾ ರಾಜ್ಯದ ಮೀಸಲಾತಿ ನೀತಿಯ ಯಾವುದೇ ಉಪಬಂಧಗಳ ಉಲ್ಲಂಘನೆಯಾಗಿದೆಯೆಂದು ನಂಬಲು ಕಾರಣಗಳಿದ್ದರೆ ಅವನು, ಪ್ರವೇಶ ನೀಡುವ, ಪ್ರಾಧಿಕಾರಿಗೆ ಅಥವಾ ನೇಮಕಾತಿ ಪ್ರಾಧಿಕಾರಿಗೆ ಅಂಥ ಉಲ್ಲಂಘನೆಯನ್ನು ಸರಿಪಡಿಸಲು ಮೂವತ್ತು ದಿನಗಳ ಅವಧಿಯನ್ನು ನೀಡಿ ಒಂದು ವರದಿಯನ್ನು ಸಲ್ಲಿಸತಕ್ಕದ್ದು.
1 ನಿಯಮಗಳು 7-ಎ ಮತ್ತು 7-ಬಿ ಗಳನ್ನು ಅಧಿಸೂಚನೆ ಸಂಖ್ಯೆಃ ಎಸ್ಡಬ್ಲ್ಯೂಡಿ 132 ಎಸ್ಎಡಿ 97 ರ ಮೂಲಕ ದಿ ಃ 08-02- 2000 ರನ್ವಯ ಸೇರಿಸಲಾಗಿದೆ ಮತ್ತು ದಿನಾಂಕ : 08.02.2000 ರಿಂದ ಜಾರಿಗೆ ಬಂದಿರುತ್ತದೆ.
2 ನಿಯಮ 8 ನ್ನು ಅದಿಸೂಚನೆ ಸಂಖ್ಯೆ : ಎಸ್ಡಬ್ಲ್ಯೂಡಿ 132 ಎಸ್ಎಡಿ 97 ರ ಮೂಲಕ ದಿ ಃ 15-02-2002 ರನ್ವಯ ಬಿಟ್ಟುಬಿಡಲಾಗಿದೆ ಮತ್ತು ದಿನಾಂಕ : 15.02.2002 ರಿಂದ ಜಾರಿಗೆ ಬಂದಿರುತ್ತದೆ.
3 ನಿಯಮ 9-ಎ ನ್ನು ಅಧಿಸೂಚನೆ ಸಂಖ್ಯೆ : ಜಿಎಸ್ಆರ್ 177 ರ ಮೂಲಕ ದಿ ಃ 08.09.95 ರನ್ವಯ ಸೇರಿಸಿ ಮತ್ತು ಅದಿಸೂಚನೆ ಸಂಖ್ಯೆ :ಎಸ್ಡಬ್ಲ್ಯೂಡಿ 132 ಎಸ್ಎಡಿ 97 ರನ್ವಯ ಬಿಟ್ಟುಬಿಡಲಾಗಿದೆ ಮತ್ತು ದಿನಾಂಕ : 08.02.2000 ರಿಂದ ಜಾರಿಗೆ ಬಂದಿರುತ್ತದೆ.
4 ನಿಯಮ 10 ಅನ್ನು ಅಧಿಸೂಚನೆ ಸಂಖ್ಯೆಃ ಎಸ್ಡಬ್ಲ್ಯೂಡಿ 132 ಎಸ್ಎಡಿ 97 ರ ಮೂಲಕ ದಿ ಃ 08-02-2000 ರನ್ವಯ ಪ್ರತಿಯೋಜಿಸಲಾಗಿದೆ ಮತ್ತು ದಿನಾಂಕ : 08.02.2000 ರಿಂದ ಜಾರಿಗೆ ಬಂದಿರುತ್ತದೆ.
(3) ಪ್ರವೇಶ ನೀಡುವ ಪ್ರಾಧಿಕಾರಿ ಅಥವಾ ನೇಮಕಾತಿ ಪ್ರಾಧಿಕಾರಿಯು ಉಲ್ಲಂಘನೆಯನ್ನು ಸರಿಪಡಿಸುವಲ್ಲಿ ಅಥವಾ ಮನವರಿಕೆಯಾಗುವಂತೆ ಸಮರ್ಥನೆ ನೀಡಲು ವಿಫಲನಾದಲ್ಲಿ, ಪ್ರಾಧಿಕೃತ ಅಧಿಕಾರಿಯು, ಅಧಿನಿಯಮ ಮತ್ತು ನಿಯಮಗಳ ಉಪಬಂಧಗಳನ್ನು ಉಲ್ಲಂಘಿಸಿ ಮಾಡಿದ ನೇಮಕಾತಿ ಅಥವಾ ಪ್ರವೇಶವು ಶೂನ್ಯವೆಂದು ಘೋಷಿಸತಕ್ಕದ್ದು;
ಪರಂತು, ಅಂಥ ಘೋಷಣೆಯನ್ನು ಮಾಡುವ ಮೊದಲು, ಅದರಿಂದ ಬಾಧಿತರಾಗುವ ಸಂಭವವಿರುವ ವ್ಯಕ್ತಿಗಳಿಗೆ ಸೂಕ್ತ ಅವಕಾಶವನ್ನು ನೀಡತಕ್ಕದ್ದು.
(4) ಪ್ರವೇಶ ನೀಡುವ ಪ್ರಾಧಿಕಾರಿ ಅಥವಾ ನೇಮಕಾತಿ ಪ್ರಾಧಿಕಾರಿಯು, ತೃಪ್ತಿಕರ ಸಮರ್ಥನೆ ನೀಡುವಲ್ಲಿ ವಿಫಲನಾದಾಗ, ಪ್ರಾಧಿಕೃತ ಅಧಿಕಾರಿಯು, ಅಂಥ ಪ್ರವೇಶ ನೀಡುವ ಪ್ರಾಧಿಕಾರಿ ಅಥವಾ ನೇಮಕಾತಿ ಪ್ರಾಧಿಕಾರಿಯನ್ನು ಕಾನೂನು ಕ್ರಮಕ್ಕೆ (ಪ್ರಾಸಿಕ್ಯೂಷನ್ಗೆ) ಗುರಿಪಡಿಸಲು ಕ್ರಮ ಕೈಗೊಳ್ಳತಕ್ಕದ್ಧು.]