ಈ ಅಧ್ಯಾದೇಶದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು, ಕರ್ನಾಟಕ ರಾಜ್ಯ ಪತ್ರದ ಭಾಗ!'ಎ ವಿಶೇಷ ಪತ್ರಿಕೆ ಸಂಖ್ಯೆ: 1059 ದಿನಾಂಕ: 5.9.2003 ರಲ್ಲಿ ಪ್ರಕಟಿತ ಕಡತ ಸಂಖ್ಯೆ: ಸಂವ್ಯಶಾಇ 53 ಶಾಸನ 2003
(ಎ) “ಸಾಲಗಾರ” ಎಂದರೆ, ಮಿತಿಮೀರಿದ ಬಡ್ಡಿಯ ಮೇಲೆ ಸಾಲವನ್ನು ತೆಗೆದುಕೊಂಡ ಒಬ್ಬ ವ್ಯಕ್ತಿ.
(ಬಿ) “ಮಿತಿಮೀರಿದ ಬಡ್ಡಿ”. ಎಂದರೆ. ಲೆಕ್ಕಹಾಕಿದಾಗ ಕರ್ನಾಟಕ ಲೇವಾದೇವಿಗಾರರ ಅಧಿನಿಯಮ, 1961ರ 28ನೇ ಪ್ರಕರಣದ ಅಡಿಯಲ್ಲಿ ಸರ್ಕಾರವು ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ದರದ ಬಡ್ಡಿ ಆಗುವಂತೆ ಗಂಟೆಗಳ ಆಧಾರ, ದಿನದ ಆಧಾರ, ಕಂತುಗಳ ಆಧಾರ, ಮಾಸಿಕ ಆಧಾರದ ಮೇಲೆ ಅಥವಾ ಯಾವುದೇ ಇತರ ರೀತಿಯಲ್ಲಿ ಬಡ್ಡಿ ವಿಧಿಸುವುದು ಮತ್ತು ಅದು ಅವುಗಳನ್ನು ಒಳಗೊಳ್ಳುತ್ತದೆ.
(ಸ) “ಕರ್ನಾಟಕ ಲೇವಾದೇವಿಗಾರರ ಅಧಿನಿಯಮ, 1961” ಎಂದರೆ ಕರ್ನಾಟಕ ಲೇವಾದೇವಿಗಾರರ ಅಧಿನಿಯಮ, 1961 (1961ರ ಕರ್ನಾಟಕ ಅಧಿನಿಯಮ 12).
(ಡಿ) “ಸಾಲ ಎಂದರೆ ಮಿತಿಮೀರಿದ ಬಡ್ಡಿಯ ಮೇಲೆ ಸಾಲಗಾರನಿಗೆ ಮುಂಗಡವಾಗಿ ನೀಡಿದ ಹಣ.
Q) ಈ ಅಧ್ಯಾದೇಶದಲ್ಲಿ ಬಳಸಿದ ಆದರೆ ಪರಿಭಾಷಿಸಿರದ ಪದಗಳು ಮತ್ತು ಪದಾವಳಿಗಳು ಕರ್ನಾಟಕ ಲೇವಾದೇವಿಗಾರರ ಅಧಿನಿಯಮ, 1961 ರಲ್ಲಿ ಅವುಗಳಿಗೆ ಕೊಡಲಾದ ಅರ್ಥವನ್ನೇ ಹೊಂದಿರತಕ್ಕದ್ದು.