(1) ಸಾಲಗಾರನು ಯಾವೊಬ್ಬ ವ್ಯಕ್ತಿಯಿಂದ ತಾನು ಸ್ವೀಕರಿಸಿದ ಸಾಲದ ಸಂಬಂಧದಲ್ಲಿ ಬಾಕಿ ಇರುವ ಹಣವನ್ನು, ಕರ್ನಾಟಕ ಲೇವಾದೇವಿಗಾರರ ಅಧಿನಿಯಮ, 1961ರ 28ನೇ ಪ್ರಕರಣದ ಅಡಿಯಲ್ಲಿ ಸರ್ಕಾರವು. ನಿಗದಿ ಮಾಡಿದ ದರದಲ್ಲಿ ಬಡ್ಡಿಯೊಡನೆ ಅಧಿಕಾರ ವ್ಯಾಪ್ತಿಯನ್ನುಳ್ಳ ನ್ಯಾಯಾಲಯದಲ್ಲಿ ಹಣವನ್ನು, ಪೂರ್ಣವಾಗಿ ಅಥವಾ ಸಂದರ್ಭಾನುಸಾರ ಭಾಗಶಃ ಸಾಲದ ತೀರಿಕೆಗಾಗಿ ಸಾಲ ಮತ್ತು ಬಡ್ಡಿ ಹಣವನ್ನು ಠೇವಣಿ ಇಡಲಾಗಿದೆ ಎಂಬುದನ್ನು ದಾಖಲಿಸುವ ಅರ್ಜಿ ಸಹಿತ ಠೇವಣಿ ಇಡಬಹುದು.
(2) ನ್ಕಾಯಾಲಯವು (1ನೇ ಉಪಪ್ರಕರಣದ ಅಡಿಯಲ್ಲಿನ ಅರ್ಜಿಯನ್ನು ಸ್ವೀಕರಿಸಿದ... ಮೇಲೆ, ಅರ್ಜಿಯಲ್ಲಿ ನಮೂದಿಸಿದ ವ್ಯಕ್ತಿಗೆ, ನ್ಯಾಯಾಲಯವು ನೀಡಬಹುದಾದಂತೆ, ಹದಿನೈದು ದಿನಗಳ ಅವಧಿಯ ಒಳಗೆ ತನ್ನ ಉತ್ತರಗಳನ್ನು ನೀಡುವಂತೆ. ನಿರ್ದೇಶಿಸಿ ಅರ್ಜಿಯ ಒಂದು ಪ್ರತಿಯನ್ನು ಕಳುಹಿಸತಕ್ಕದ್ದು. ನ್ಯಾಯಾಲಯವು ವಿಚಾರಣೆಯ ತರುವಾಯ ಮತ್ತು ಉಭಯ ಪಕ್ಷಗಳ ಹೇಳಿಕೆಗಳನ್ನು ಪರಿಗಣಿಸಿದ ತರುವಾಯ, ಸಾಲ ಮತ್ತು ಅದರ ಬಡ್ಡಿಯು ಪೂರ್ಣವಾಗಿ ಅಥವಾ ಸಂದರ್ಭಾನುಸಾರ ಭಾಗಶಃ ತೀರಿಕೆಯಾಗಿದೆ ಎಂದು ದಾಖಲು ಮಾಡಿ ಆದೇಶಗಳನ್ನು ಹೊರಡಿಸಬಹುದು.