ಮಿತಿಮೀರಿದ ಬಡ್ಡಿಯನ್ನು ವಿಧಿಸುತ್ತಿರುವ ಯಾವೊಬ್ಬ ವ್ಯಕ್ತಿಯು, ಈ ಅಧ್ಯಾದೇಶದ ಪ್ರಕಟಣೆಯ ದಿನಾಂಕದಿಂದ ಒಂದು ತಿಂಗಳೊಳಗೆ ಕರ್ನಾಟಕ ಲೇವಾದೇವಿಗಾರರ ಅಧಿನಿಯಮ, 1961ರ 28ನೇ ಪ್ರಕರಣದ ಅಡಿಯಲ್ಲಿ ಸರ್ಕಾರವು ನಿಗದಿ ಮಾಡಿದ ದರದಲ್ಲಿ ಮಾತ್ರವೇ ತಾನು ನೀಡಿದ ಸಾಲದ ಮೇಲೆ ಬಡ್ಡಿಯನ್ನು ವಿಧಿಸುವ ತನ್ನ ಉದ್ದೇಶವನ್ನು ನ್ಯಾಯಾಲಯದ ಮುಂದೆ ಪ್ರಕಟಪಡಿಸುವ ಒಂದು ಅರ್ಜಿಯನ್ನು ದಾಖಲು ಮಾಡಬಹುದು ಮತ್ತು ಹಾಗೆ ಪ್ರಕಟಪಡಿಸಿದ ತರುವಾಯ ಅಂಥ ಸಾಲದ ಸಂಬಂಧದಲ್ಲಿ ಬಡ್ಡಿಯನ್ನು ಕರ್ನಾಟಕ ಲೇವಾದೇವಿಗಾರರ ಅಧಿನಿಯಮ, 1961ರ 28ನೇ ಪ್ರಕರಣದ ಅಡಿಯಲ್ಲಿ ಸರ್ಕಾರವು ನಿಗದಿಪಡಿಸತಕ್ಕದ್ದು ಮತ್ತು ಈ ಅಧ್ಯಾದೇಶದ ಅಡಿಯಲ್ಲಿನ ಅಪರಾಧಗಳಿಗಾಗಿ ಯಾವುದೇ ಅಭಿಯೋಜನೆಯನ್ನು ಅಂಥ ಸಾಲದ ಸಂಬಂಧದಲ್ಲಿ ಹೂಡತಕ್ಕದ್ದಲ್ಲ.
Loading…