ಈ ಅಧ್ಯಾದೇಶದ ಉಪಬಂಧಗಳಿಗೆ ಒಳಪಟ್ಟು, ಕರ್ನಾಟಕ ಲೇವಾದೇವಿಗಾರರ ಅಧಿನಿಯಮ, 1961ರ ಉಪಬಂಧಗಳು, ಅವು ಲೇವಾದೇವಿಗಾರರಿಗೆ ಅನ್ವಯವಾಗುವಷ್ಟರ ಮಟ್ಟಿಗೆ, ಈ ಅಧ್ಯಾದೇಶದ 3ನೇ ಪ್ರಕರಣದಲ್ಲಿ ಉಲ್ಲೇಖಿಸಿದ ಒಬ್ಬ ವ್ಯಕ್ತಿಗೆ ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ಹಯವಾಗತಕ್ಕದ್ದು.
ವಿವರಣೆ:- ಒಬ್ಬ ವ್ಯಕ್ತಿಯ ಕೃತ್ಯವು ಈ ಅಧ್ಯಾದೇಶದ ಅಡಿಯಲ್ಲಿ ಅಥವಾ ಕರ್ನಾಟಕ ಲೇವಾದೇವಿಗಾರರ ಅಧಿನಿಯಮ, 1961ರ ಅಡಿಯಲ್ಲಿ ಒಂದು ಅಪರಾಧವಾಗಿದ್ದರೆ, ಈ ಅಧ್ಯಾದೇಶದ ಅಡಿಯಲ್ಲಿ ಅವನ ವಿರುದ್ಧ ಅಭಿಯೋಜನೆಯನ್ನು ಪ್ರಾರಂಭಿಸತಕ್ಕದ್ದು.