ಯಾವೊಬ್ಬ ವ್ಯಕ್ತಿಯೂ ತಾನು ನೀಡಿದ ಯಾವುದೇ ಸಾಲದ ಮೇಲೆ ಮಿತಿಮೀರಿದ ಬಡ್ಡಿಯನ್ನು ವಿಧಿಸತಕ್ಕದ್ದಲ್ಲ.
4, ದಂಡ.- ಕರ್ನಾಟಕ ಲೇವಾದೇವಿಗಾರರ ಅಧಿನಿಯಮ, 1961ರಲ್ಲಿ ಏನೇ ಒಳಗೊಂಡಿದ್ದರೂ, 3ನೇ ಪ್ರಕರಣದ ಉಪಬಂಧವನ್ನು ಉಲ್ಲಂಘಿಸುವ ಅಥವಾ ಯಾವುದೇ ಸಾಲದ ವಸೂಲಿಗಾಗಿ ಯಾವೊಬ್ಬ ಸಾಲಗಾರನನ್ನು ಪೀಡಿಸುವ ಅಥವಾ ಪೀಡಿಸುವುದಕ್ಕಾಗಿ ದುಷ್ಟೇರಿಸುವ ಯಾವೊಬ್ಬ ವ್ಯಕ್ತಿಯು, ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಕಾರಾವಾಸದಿಂದ ಮತ್ತು ಮೂವತ್ತು ಸಾವಿರ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ಸಹ ದಂಡಿತನಾಗತಕ್ಕದ್ದು.