ಕರ್ನಾಟಕ ಸಿವಿಲ್ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1977ರ 19ನೇ ನಿಯಮದ (4)ನೇ ಉಪನಿಯಮಕ್ಕೆ ಒಳಪಟ್ಟು, ಯಾರು ಪ್ರೊಬೇಷನ್ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿರುತ್ತಾನೆಂದು ಘೋಷಿಸಲಾಗಿದೆಯೋ ಆ ಪ್ರೊಬೇಷನರ್ನನ್ನು ಇರಬಹುದಾದ ಅಥವಾ ಉದ್ಭವಿಸಬಹುದಾದ ಯಾವುದೇ ಮೂಲ ಖಾಲಿ ಹುದ್ದೆಯಲ್ಲಿ ಅವಕಾಶ ದೊರೆತ ಕೂಡಲೇ ಸ್ಥಿರೀಕರಿಸತಕ್ಕದ್ದು:
ಪರಂತು, ಅಂಥ ಸ್ಥಿರೀಕರಣಕ್ಕೆ ಒಬ್ಬರಿಗಿಂತ ಹೆಚ್ಚು ಅನುಮೋದಿತ ಪ್ರೊಬೇಷನರ್ರು ಲಭ್ಯವಿರುವಾಗ ಖಾಲಿ ಹುದ್ದೆಯ ದಿನಾಂಕದಂದು ಅತ್ಯಂತ ಹಿರಿಯ ಅನುಮೋದಿತ ಪ್ರೊಬೇಶನರನನ್ನು ಸ್ಥಿರೀಕರಿಸತಕ್ಕದ್ದು.