(1) ಕರ್ನಾಟಕ ಸರ್ಕಾರೀ ನೌಕರರ ಪ್ರೊಬೇಷನ್ ನಿಯಮಗಳು, 1957ನ್ನು ಈ ಮೂಲಕ ನಿರಸನಗೊಳಿಸಲಾಗಿದೆ:
ಪರಂತು, ಸದರಿ ನಿರಸನವು ಸದರಿ ನಿಯಮಗಳ ಹಿಂದಿನ ಕಾರ್ಯಾಚರಣೆಗೆ ಅಥವಾ ಅದರ ಮೇರೆಗೆ ಯಥೋಚಿತವಾಗಿ ಮಾಡಿದ ಅಥವಾ ತೊಂದರೆಗೊಳಗಾದ ಯಾವುದಕ್ಕೇ ಆಗಲಿ ಬಾಧೆ ಉಂಟುಮಾಡತಕ್ಕದ್ದಲ್ಲ ಅಥವಾ ಸದರಿ ನಿಯಮಗಳ ಮೇರೆಗೆ ಆರ್ಜಿಸಿದ, ಪ್ರಾಪ್ತವಾದ ಅಥವಾ ವಹಿಸಿದ ಯಾವುದೇ ಹಕ್ಕು, ಹೊಣೆಗಾರಿಕೆ ಅಥವಾ ಬಾಧ್ಯತೆಗೆ ಬಾಧೆ ಉಂಟುಮಾಡತಕ್ಕದ್ದಲ್ಲ.
(2) (1)ನೇ ಉಪನಿಯಮದ ಮೂಲಕ ನಿರಸನಗೊಳಿಸಿದ ನಿಯಮಗಳಿಗೆ ಯಾವುದೇ ನಿಯಮದಲ್ಲಿ ಅಥವಾ ಆದೇಶದಲ್ಲಿ ಮಾಡಿದ ಯಾವುದೇ ಉಲ್ಲೇಖವನ್ನು ಈ ನಿಯಮಗಳಿಗೆ ಮಾಡಿದ ಉಲ್ಲೇಖವೆಂಬುದಾಗಿ ಅರ್ಥೈಸತಕ್ಕದ್ದು.
(3) (1)ನೇ ಉಪನಿಯಮದ ಮೂಲಕ ನಿರಸನಗೊಳಿಸಲಾದ ನಿಯಮಗಳ ಅಡಿಯಲ್ಲಿ ಪ್ರಾರಂಭಿಸಿದ ಮತ್ತು ಈ ನಿಯಮಗಳು ಪ್ರಾರಂಭವಾದ ದಿನಾಂಕದಂದು ಇತ್ಯರ್ಥದಲ್ಲಿರುವ ಎಲ್ಲಾ ವ್ಯವಹರಣೆಗಳನ್ನು ಈ ನಿಯಮಗಳ ಉಪಬಂಧಗಳಿಗನುಸಾರವಾಗಿ ಮುಂದುವರಿಸತಕ್ಕದ್ದು ಮತ್ತು ವಿಲೇ ಮಾಡತಕ್ಕದ್ದು.
ಕರ್ನಾಟಕ ರಾಜ್ಯಪಾಲರು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಎನ್.ಪಿ. ಜೋಷಿ)
ಸರ್ಕಾರದ ಉಪ ಕಾರ್ಯದರ್ಶಿ,
ಸಚಿವ ಸಂಪುಟ ವ್ಯವಹಾರಗಳ ಇಲಾಖೆ ಮತ್ತು
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವಾ ನಿಯಮಗಳು).
The above translation of the Karnataka Civil Services (Probation) Rules, 1977 shall be authoritative text in the Kannada Language under section 5A of the Karnataka Official Language Act, 1963.
ಪಿ.ಆರ್. 277
Governor of Karnataka ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಜಿ.ಕೆ. ಬೋರೇಗೌಡ ಸರ್ಕಾರದ ಕಾರ್ಯದರ್ಶಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ