(1) ಈ ನಿಯಮವನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿಯಮಗಳು 2011 ಎಂದು ಕರೆಯತಕ್ಕದ್ದು.
(2) ಇವು ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುತ್ತದೆ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿಯಮಗಳು 2011, Kannada, Culture, Information & Tourism Department
2011 · PDF page 1
Hover any section to copy its link or text, ask Copilot about it, or bookmark it.
(1) ಈ ನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯ ಪಡಿಸಿದ ಹೊರತು,
(i) ‘ಅಧಿನಿಯಮ’ ಎಂದರೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 2010;
(ii) ‘ಪ್ರಕರಣ’ ಎಂದರೆ ಅಧಿನಿಯಮದ ಪ್ರಕರಣ;
(iii) ‘ನಮೂನೆ’ ಎಂದರೆ ನಿಯಮಗಳಿಗೆ ಲಗತ್ತಿಸಲಾದ ನಮೂನೆ;
(iv) ‘ಹಣಕಾಸು ವರ್ಷ ಅಥವಾ ವರ್ಷ’ ಎಂದರೆ ಪ್ರತಿವರ್ಷ ಏಪ್ರಿಲ್ 1ನೇ ದಿನಾಂಕದಿಂದ ಪ್ರಾರಂಭವಾಗಿ ಮಾರ್ಚ್ 31ನೇ ದಿನಾಂಕಕ್ಕೆ ಕೊನೆಗೊಳ್ಳುವ ಒಂದು ವರ್ಷದ ಅವಧಿ;
(v) ‘ಸಭೆ’ ಎಂದರೆ ಪ್ರಾಧಿಕಾರದ ಸಭೆ ಅಥವಾ ಪ್ರಾಧಿಕಾರದ ಉಪ ಸಮಿತಿಯ ಸಭೆ.
(2) ಈ ನಿಯಮಗಳಲ್ಲಿ ಉಪಯೋಗಿಸಿದ, ಆದರೆ ಅರ್ಥ ವಿವರಣೆ ನೀಡಿರದ ಪದಗಳು ಹಾಗೂ ಪದಾವಳಿಗಳು ಅವುಗಳಿಗೆ ಅಧಿನಿಯಮದಲ್ಲಿ ಅನುಕ್ರಮವಾಗಿ ಕೊಟ್ಟ ಅರ್ಥವನ್ನೇ ಹೊಂದಿರತಕ್ಕದ್ದು.