(1) ಪ್ರತಿಯೊಂದು ಹಣಕಾಸು ವರ್ಷದ ಆಯವ್ಯಯ ಅಂದಾಜುಗಳನ್ನು ಅನುಬಂಧದಲ್ಲಿ ಸೂಚಿಸಲಾದ ನಮೂನೆಯಲ್ಲಿ ತಯಾರಿಸಿ ಅವುಗಳನ್ನು ಸರ್ಕಾರದಿಂದ ನೇಮಿಸಲಾದ ಲೆಕ್ಕ ಪರಿಶೋಧಕರಿಂದ ಪರಿಶೋಧಿಸಿ ಅವುಗಳನ್ನು ಪ್ರಾಧಿಕಾರದ ಮುಂದೆ ಮಂಡಿಸತಕ್ಕದ್ದು, ಪ್ರಾಧಿಕಾರವು ಅದನ್ನು ಅನುಮೋದಿಸಿದ ತರುವಾಯ ಅವುಗಳನ್ನು ರಾಜ್ಯ ಸರ್ಕಾರ ನಿಗಧಿಪಡಿಸಿದ ದಿನಾಂಕದೊಳಗೆ ರಾಜ್ಯ ಸರ್ಕಾರಕ್ಕೆ ಅನುಮೋದನೆಗಾಗಿ ಕಳುಹಿಸಿಕೊಡತಕ್ಕದ್ದು. ಲೆಕ್ಕ ಪರಿಶೋಧಕರ ಹುದ್ದೆಗೆ ತಕ್ಕಂತೆ ಪರಿಶೋಧನಾ ಶುಲ್ಕವನ್ನು ನೀಡತಕ್ಕದದು.
(2) ಸರ್ಕಾರ ಅನುಮೋದಿಸಿದ ಆಯವ್ಯಯ ಆ ಹಣಕಾಸು ವರ್ಷಕ್ಕಾಗಿ ಪ್ರಾಧಿಕಾರದ ಆಯವ್ಯಯವಾಗಿರತಕ್ಕದ್ದು ಮತ್ತು ಅದನ್ನು ಪ್ರಾಧಿಕಾರದ ಮೊಹರಿನೊಂದಿಗೆ ಮತ್ತು ಈ ಬಗ್ಗೆ ಕ್ರಮಬದ್ಧವಾಗಿ ಅಧಿಕೃತಗೊಳಿಸಿದ ಪ್ರಾಧಿಕಾರದ ಅಧಿಕಾರಿಗಳ ರುಜುವಿನೊಂದಿಗೆ ಹೊರಡಿಸತಕ್ಕದ್ದು.
(3) ಅನುಮೋದಿಸಿದ ಆಯವ್ಯಯದಲ್ಲಿ ಒದಗಿಸಿರುವ ಮೊತ್ತಕ್ಕಿಂತ ಹೆಚ್ಚಿನ ವೆಚ್ಚವನ್ನು ವ್ಯಯಿಸುವುದು ಅವಶ್ಯವಾದರೆ ಪ್ರಾಧಿಕಾರವು ಪ್ರಸ್ತಾವಿತ ವೆಚ್ಚದ ವಿವರಗಳನ್ನು ಕೂಡಲೇ ರಾಜ್ಯ ಸರ್ಕಾರಕ್ಕೆ ಒಪ್ಪಿಸತಕ್ಕದ್ದು.