(1) ಪ್ರಾಧಿಕಾರದಲ್ಲಿರುವ ಮಂಜೂರಾದ ಪ್ರತಿಯೊಂದು ಹುದ್ದೆಯನ್ನು ಕರ್ನಾಟಕ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ಭಾರತದ ಇತರ ಯಾವುದೇ ರಾಜ್ಯ ಸರ್ಕಾರದ ನೌಕರರನ್ನು ಅಥವಾ ಯಾವುದೇ ಸ್ವಾಯತ್ತ ಸಂಸ್ಥೆಯ ನೌಕರರನ್ನು ಪ್ರತಿಯೋಜಿಸುವ ಮೂಲಕ ಭರ್ತಿ ಮಾಡತಕ್ಕದ್ದು.
(2) ಆದರೆ, ಪ್ರಾಧಿಕಾರದ ಅಧ್ಯಕ್ಷರ ಆಪ್ತ ಶಾಖೆಗೆ, ಉಪನಿಯಮ (1)ರಲ್ಲಿ ತಿಳಿಸಿರುವಂತೆ ಪ್ರತಿನಿಯೋಜನೆ ಮೇರೆಗೆ ಅಧ್ಯಕ್ಷರ ಅಧಿಕಾರಾವಧಿಯನ್ನು ಮೀರದಂತೆ ನೇಮಿಸಿಕೊಳ್ಳತಕ್ಕದ್ದು ಅಥವಾ ರಾಜ್ಯ ಸರ್ಕಾರವು ಘೋಷಿಸಲಾದ ಸ್ಥಾನಮಾನಗಳಿಗೆ ಅನುಗುಣವಾಗಿ ಸರ್ಕಾರವು ನಿಗಧಿಸಬಹುದಾದ ಮಾದರಿ ಮತ್ತು ಮಿತಿಗೆ ಒಳಪಟ್ಟು ಆಪ್ತ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇರೆಗೆ ಅಧ್ಯಕ್ಷರ ಅಧಿಕಾರಾವಧಿಯನ್ನು ಮೀರದಂತೆ ನೇಮಿಸಿಕೊಳ್ಳತಕ್ಕದ್ದು.