(1)ಪ್ರಾಧಿಕಾರದ ನಿಧಿಗೆ ಸಂದಾಯವಾಗತಕ್ಕ ಎಲ್ಲ ಮೊತ್ತವನ್ನು ಪ್ರಾಧಿಕಾರವು ನಿಗಧಿಪಡಿಸಬಹುದಾದ ಅನುಸೂಚಿತ ಬ್ಯಾಂಕಿನಲ್ಲಿ ಪ್ರಾಧಿಕಾರದ ಲೆಕ್ಕಕ್ಕೆ ಜಮಾ ಮಾಡತಕ್ಕದ್ದು.
(2) ವಾರ್ಷಿಕ ಲೆಕ್ಕಗಳೂ ಸೇರಿದಂತೆ ಪ್ರಾಧಿಕಾರದ ನಿಧಿಯ ಆದಾಯ ಮತ್ತು ವೆಚ್ಚಗಳ ಲೆಕ್ಕ ಪತ್ರಗಳನ್ನು ಸರ್ಕಾರವು ನೀಡುವ ಯಾವುದೇ ನಿರ್ದೇಶನಕ್ಕೊಳಪಟ್ಟು, ರಾಜ್ಯ ಲೆಕ್ಕ ಪತ್ರ ಇಲಾಖೆಯವರ ಸಲಹೆ ಮೇರೆಗೆ ಕಾರ್ಯದರ್ಶಿಯವರು ಅಳವಡಿಸಿದಂಥ ರೀತಿಯಲ್ಲಿ ಮತ್ತು ಅಂಥ ನಮೂನೆಯಲ್ಲಿ ಇಡತಕ್ಕದ್ದು.
(3)ಪ್ರಾಧಿಕಾರದ ನಿಧಿಯಿಂದ ವೆಚ್ಚವನ್ನು ಸರ್ಕಾರವು ನಿರ್ದಿಷ್ಟಪಡಿಸಿದ ಸಂಬಂಧಪಟ್ಟ ನಿಯಮಗಳು ಮತ್ತು ಪ್ರಕ್ರಿಯೆಗಳಿಗನುಸಾರವಾಗಿ ಭರಿಸತಕ್ಕದ್ದು.
(4) ಪ್ರಾಧಿಕಾರವು ಸಾಧ್ಯವಾದಷ್ಟು ಮಟ್ಟಿಗೆ ಹಣಕಾಸು ವರ್ಷ ಮುಕ್ತಾಯವಾದ ತರುವಾಯ ನಡೆಯುವ ಮೊದಲನೇ ಸಭೆಯಲ್ಲಿ ಆ ವರ್ಷದ ಲೆಕ್ಕ ಪತ್ರಗಳನ್ನು ಅಂಗೀಕರಿಸತಕ್ಕದ್ದು, ಈ ವಾರ್ಷಿಕ ಲೆಕ್ಕ ಪತ್ರಗಳನ್ನು ಅಳವಡಿಸಿಕೊಂಡ ನಮೂನೆಯಲ್ಲಿ ಪ್ರಾಧಿಕಾರವು ತಯಾರಿಸತಕ್ಕದ್ದು ಮತ್ತು ಅಂಗೀಕರಿಸತಕ್ಕದ್ದು.
(5) ಪ್ರಾಧಿಕಾರವು ತಾನು ಅಂತಿಮವಾಗಿ ವಾರ್ಷಿಕ ಲೆಕ್ಕ ಪತ್ರಗಳನ್ನು ಅಂಗೀಕರಿಸಿದ ಕೂಡಲೇ ವಾರ್ಷಿಕ ಲೆಕ್ಕ ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.