5ನೇ ಪ್ರಕರಣದ (3)ನೇ ಉಪ-ಪ್ರಕರಣದ ಮೇರೆಗಿನ ಪ್ರತಿಯೊಂದು ಕ್ಲೇಮು ನಮೂನೆ-1ರಲ್ಲಿರತಕ್ಕದ್ದು ಮತ್ತು ಅದು ಈ ಮುಂದಿನ ವಿವರಗಳನ್ನು ಸಹ ಒಳಗೊಂಡಿರತಕ್ಕದ್ದು, ಎಂದರೆ :-
ಕನ್ನಡ ಭಾಷಾಂತರವು ಕರ್ನಾಟಕ ರಾಜ್ಯ ಪತ್ರ ಭಾಗ IV-ಎ ದಿನಾಂಕ 6.4.2000ರಲ್ಲಿ ಪುಟ 1 ರಿಂದ 15ರ ವರೆಗೆ ಪ್ರಕಟಗೊಂಡಿದೆ. (ಜಿ.ಎಸ್.ಆರ್.15).
- ನಿಯಮಗಳು ದಿನಾಂಕ 26.8.1999 ರಿಂದ ಜಾರಿಗೊಂಡಿದೆ. 34 ಮೈಸೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ನಿಯಮಗಳು 1999 [1998 : ಕರ್ನಾಟಕ ಆಕ್ಟ್ 32
(ಎ) ಸ್ವತ್ತಿನ ಅರ್ಜನೆಯ ಮೂಲ ಬೆಲೆ ;
(ಬಿ) ಆದಾಯ ತೆರಿಗೆ ಉದ್ದೇಶಕ್ಕಾಗಿ ಯಾವುದೇ ಇಳಿತಾಯವನ್ನು ಕ್ಲೇಮು ಮಾಡಿದ್ದರೆ ಅದರ ವಿವರಗಳು ;
(ಸಿ) ಸ್ವತ್ತಿಗೆ ಉಂಟಾದ ಯಾವುದೇ ಹಾನಿ ;
(ಡಿ) ಮೊಬಲಗನ್ನು ಕ್ಲೇಮು ಮಾಡಿದ ವ್ಯಕ್ತಿಗಳ ಹೆಸರುಗಳು. 4. 5(4)ನೇ ಪ್ರಕರಣದ ಮೇರೆಗೆ ಮಾಹಿತಿ ನೀಡುವ ವಿಧಾನ.- ಈ ಅಧಿನಿಯಮದ ಮೇರೆಗೆ ರಾಜ್ಯ ಸರ್ಕಾರದಲ್ಲಿ ನಿಹಿತವಾಗಿರುವ ಯಾವುದೇ ಸ್ವತ್ತಿನ ಪ್ರತಿಯೊಂದು ಅಡಮಾನವನ್ನು ಮತ್ತು ಯಾವುದೇ ಚಾರ್ಜ್, ಗುತ್ತಿಗೆ, ಧಾರಣಾಧಿಕಾರ ಅಂತಹ ಸ್ವತ್ತಿನಲ್ಲಿ ಅಥವಾ ಅದಕ್ಕೆ ಸಂಬಂಧಿಸಿದಂತೆ ಅಥವಾ ಇತರ ಹಿತಾಸಕ್ತಿಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ, ಈ ನಿಯಮಗಳು ಪ್ರಾರಂಭವಾಗುವ ದಿನಾಂಕದಿಂದ 60 ದಿನಗಳ ಒಳಗಾಗಿ ನಮೂನೆ 2ರಲ್ಲಿ ಅಂತಹ ಅಡಮಾನ, ಗುತ್ತಿಗೆ, ಧಾರಣಾಧಿಕಾರ, ಚಾರ್ಜ್ ಅಥವಾ ಇತರ ಹಿತಾಸಕ್ತಿಯ ಬಗ್ಗೆ ಕಮೀಷನರಿಗೆ ಮಾಹಿತಿಯನ್ನು ನೀಡತಕ್ಕದ್ದು.