ಸಭೆಗಾಗಿ ನಿಗದಿಪಡಿಸಿದ ಸಮಯದಲ್ಲಿ ಕೋರಂ ಇಲ್ಲದಿದ್ದರೆ ಅಧ್ಯಕ್ಷತೆ ವಹಿಸಿರುವ ಪ್ರಾಧಿಕಾರಿಯು ಮೂವತ್ತು ನಿಮಿಷಗಳವರೆಗೆ ಕಾಯತಕ್ಕದ್ದು ಮತ್ತು ಆ ಅವಧಿಯೊಳಗೆ 1998 : ಕರ್ನಾಟಕ ಆಕ್ಟ್ 32] ಮೈಸೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ನಿಯಮಗಳು 1999 35 ಕೋರಂ ಇಲ್ಲದಿದ್ದ ಪಕ್ಷದಲ್ಲಿ ಸಭೆಯನ್ನು ಪ್ರಾಧಿಕಾರಿಯು ಸೂಕ್ತವೆಂದು ನಿಗದಿಪಡಿಸುವ ಯಾವುದೇ ತರುವಾಯದ ಇತರ ದಿನದ ಅಂಥ ವೇಳೆಗೆ ಸಭೆಯನ್ನು ಮುಂದೂಡಬಹುದು. ಹಾಗೆ ತರುವಾಯದ ದಿನಕ್ಕೆ ಮುಂದೂಡಿದ ಸಭೆಯ ನೋಟೀಸನ್ನು ಮಂಡಳಿಯ ಪ್ರತಿಯೊಬ್ಬ ಸದಸ್ಯನಿಗೂ ಕಳುಹಿಸತಕ್ಕದ್ದು. ಮೂಲ ಸಭೆಯಲ್ಲಿ ಮಂಡಿಸಬೇಕಾಗಿದ್ದ ಕಾರ್ಯಕಲಾಪಗಳನ್ನು ಮುಂದೂಡಿದ ಸಭೆಯಲ್ಲಿ ಮಂಡಿಸತಕ್ಕದ್ದು ಮತ್ತು ಆ ಸಭೆಯಲ್ಲಿ ಕೋರಂ ಇರಲಿ ಅಥವಾ ಇಲ್ಲದಿರಲಿ ಮಂಡಿಸಲಾದ ಕಾರ್ಯಕಲಾಪಗಳನ್ನು ಇತ್ಯರ್ಥಗೊಳಿಸಬಹುದು.
Loading…