(1) ಮಂಡಳಿಯ ಪ್ರತಿ ಸಭೆಯ ನಡವಳಿಗಳ ಸಂಕ್ಷಿಪ್ತ ದಾಖಲೆಗಳನ್ನು ಮಂಡಳಿಯು ಇಡತಕ್ಕದ್ದು ಮತ್ತು ಹಾಜರಿದ್ದ ಸದಸ್ಯರುಗಳ ಹೆಸರನ್ನು ಅವುಗಳಲ್ಲಿ ಸೇರಿಸತಕ್ಕದ್ದು.
(2) ಅಂತಹ ನಡವಳಿಗಳ ಸಂಕ್ಷಿಪ್ತ ದಾಖಲೆಗಳನ್ನು ಮಂಡಳಿಯು ದೃಢೀಕರಿಸಿದ ಕೂಡಲೇ ಅವುಗಳ ಒಂದು ಪ್ರತಿಯನ್ನು ಮಂಡಳಿಯು ರಾಜ್ಯ ಸರ್ಕಾರಕ್ಕೆ ಸಲ್ಲಿಸತಕ್ಕದ್ದು.