ಮಂಡಳಿಯು ಸಾಲವನ್ನು ಪಡೆದುಕೊಳ್ಳಬಹುದು ಮತ್ತು ಅದರ ಉದ್ದಿಮೆ ಮತ್ತು ಸ್ವತ್ತನ್ನು (ಅದರ ಆದಾಯಗಳನ್ನೂ ಸೇರಿದಂತೆ) ಅಥವಾ ಅದರ ಯಾವುದೇ ಭಾಗವನ್ನು ಅಡಮಾನ ಮಾಡಬಹುದು ಅಥವಾ ಅವುಗಳ ಮೇಲೆ ಚಾರ್ಜ್ ಹೊರಿಸಬಹುದು ಹಾಗೂ ನೇರವಾಗಿ ಮಂಡಳಿಯ ಅಥವಾ ಯಾವೊಬ್ಬ ಮೂರನೇ ಪಕ್ಷಕಾರನ ಋಣ, ಹೊಣೆಗಾರಿಕೆ ಅಥವಾ ಬಾಧ್ಯತೆಗೆ ಭದ್ರತೆಯಾಗಿ ಡಿಬೆಂಚರುಗಳು, ಡಿಬೆಂಚರು ಸ್ಟಾಕ್ಗಳು, ನೋಟುಗಳು ಮತ್ತು ಇತರ ಭದ್ರತೆಗಳನ್ನು ನೀಡಬಹುದು. ಆದರೆ, ಮೇಲೆ ಹೇಳಿದಂತೆ ಪಡೆದ ತಾತ್ಕಾಲಿಕ ಸಾಲಗಳನ್ನು ಹೊರತುಪಡಿಸಿ, ಮಂಡಳಿಯಲ್ಲಿ ಪ್ರಸಕ್ತ ಉಳಿದಿರುವ ಒಟ್ಟು ಮೊಬಲಗು ಮತ್ತು ಮೇಲೆ ಹೇಳಿದಂತೆ ಮಂಡಳಿಯು ತೆಗೆದುಕೊಂಡ ಅಥವಾ ಪಡೆದ ಸಾಲದ ಹಣದ ಮೇಲಿನ ಚಾರ್ಜನ್ನು ಯಾವುದೇ ಕಾಲದಲ್ಲಿ ರಾಜ್ಯ ಸರ್ಕಾರದ ಪೂರ್ವ ಮಂಜೂರಾತಿ ಇಲ್ಲದೆ ಹೊರಿಸತಕ್ಕದ್ದಲ್ಲ.
Loading…