(1) ಮಂಡಳಿಯು ಕನಿಷ್ಟ ಪ್ರತಿ ಮೂರು ತಿಂಗಳಿಗೆ ಒಮ್ಮೆ ಮತ್ತು ಅವಶ್ಯವಿರಬಹುದಾದಷ್ಟು ಬಾರಿ ಸಭೆ ಸೇರತಕ್ಕದ್ದು.
(2) ಸಭೆಯು ನಡೆಯುವ ದಿನಾಂಕ, ವೇಳೆ ಮತ್ತು ಸ್ಥಳದ ಬಗ್ಗೆ ಮತ್ತು ಸಭೆಯಲ್ಲಿ ನಡೆಸಲಾಗುವ ಕಾರ್ಯಕಲಾಪಗಳನ್ನು ನಿರ್ದಿಷ್ಟಪಡಿಸಿ ಆ ಸಭೆಯ ಪೂರ್ಣ ಏಳು ದಿನಗಳ ನೋಟಿಸನ್ನು ಎಲ್ಲ ಸದಸ್ಯರುಗಳಿಗೆ ನೀಡತಕ್ಕದ್ದು :
ಪರಂತು ತುರ್ತು ಸ್ವರೂಪದ ಕಾರ್ಯಕಲಾಪಗಳನ್ನು ವ್ಯವಹರಿಸಬೇಕಾಗಿದ್ದಲ್ಲಿ ಹಾಗೂ ತದನುಸಾರವಾಗಿ ಆ ಬಗ್ಗೆ ಸದಸ್ಯರುಗಳಿಗೆ ತಿಳಿಸಲಾಗಿದೆ ಎಂದು ಅಧ್ಯಕ್ಷರು ಅಭಿಪ್ರಾಯಪಟ್ಟರೆ ಅಂತಹ ಯಾವುದೇ ನೋಟೀಸು ನೀಡುವ ಅಗತ್ಯವಿರತಕ್ಕದ್ದಲ್ಲ.