ಈ ನಿಯಮಗಳ ವಿಷಯಕ್ಕೆ ಅಥವಾ ಸಂದರ್ಭಕ್ಕೆ ಬೇರೆ ಅರ್ಥದ ಅಗತ್ಯ ಇರದಿದ್ದರೆ-
(ಎ). ‘‘ಅಧಿನಿಯಮ” ಎಂದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ 14):
(ಬಿ). “ಕ್ಷೇತ್ರ” ಎಂದರೆ ಯಾವ ಕ್ಷೇತ್ರದಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯಿತಿ ಚುನಾವಣೆಯ ಉದ್ದೇಶಕ್ಕಾಗಿ ಗ್ರಾಮದ ಯಾವ ಪ್ರದೇಶ ಒಳಗೊಂಡಿದೆಯೋ, ಅದು:
(ಸಿ). “ಸಮಾವೇಶಕ” ಎಂದರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಆತನ ಗೈರು ಹಾಜರಿಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮತ್ತು ಅಧ್ಯಕ್ಷನು ಗ್ರಾಮ ಸಭೆ ಕರೆಯಲು ತಪ್ಪಿದಲ್ಲಿ ಕಾರ್ಯನಿರ್ವಾಹಣಾಧಿಕಾರಿ ಗ್ರಾಮ ಸಭೆಯ ಸಮಾವೇಶಕರಾಗಿರತಕ್ಕದ್ದು.
(ಡಿ). “ಗ್ರಾಮ ಸಭೆಯ ಸದಸ್ಯರು” ಎಂದರೆ ಸಂಬಂಧಿತ ಗ್ರಾಮ ಪಂಚಾಯಿತಿ ಪ್ರದೇಶದ ಒಳಗೆ ಇರುವ ಗ್ರಾಮಕ್ಕೆ ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ ನೋಂದಾಯಿತ ವ್ಯಕ್ತಿಗಳು.
(ಇ). “ಅಧ್ಯಕ್ಷ” ಎಂದರೆ ಗ್ರಾಮ ಪಂಚಾಯತಿ ಅಧ್ಯಕ್ಷರು ಅಥವಾ ಉಪಾಧ್ಯಕ್ಷರು ಅಥವಾ ಗ್ರಾಮಸಭೆಯ ಅಧ್ಯಕ್ಷತೆಯನ್ನು ಯಾರು ವಹಿಸುತ್ತಾರೋ ಅಂತಹ ಗ್ರಾಮ ಪಂಚಾಯಿತಿಯ ಸದಸ್ಯ;
(ಎಫ್). “ಪ್ರಕರಣ” ಎಂದರೆ ಅಧಿನಿಯಮ ಪ್ರಕರಣ;
(ಜಿ). “ಕಾರ್ಯನಿರ್ವಾಹಕ ಅಧಿಕಾರಿ” ಎಂದರೆ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ.