ಗ್ರಾಮ ಸಭೆಯ ಒಂದು ಸಾಮಾನ್ಯ ಸಭೆಯು ಕನಿಷ್ಠ ಪ್ರತಿ ಆರು ತಿಂಗಳಿಗೊಮ್ಮೆ ನಡೆಯತಕ್ಕದ್ದು.
ಗ್ರಾಮ ಸಭೆಯ ಸದಸ್ಯರ ಮೂರನೇ ಒಂದು ಭಾಗದ ಸದಸ್ಯರು ಸದಸ್ಯರ ಲಿಖಿತ ಕೋರಿಕೆ ಮೇಲೆ ಗ್ರಾಮ ಸಭೆಯ ಸಮಾವೇಶಕನು ವ್ಯವಹರಿಸಬೇಕಾದ ವ್ಯವಹಾರದ ಬಗ್ಗೆ ನಿರ್ದಿಷ್ಠಪಡಿಸಿ ವಿಶೇಷ ಸಭೆಯನ್ನು ಕರೆಯತಕ್ಕದ್ದು. ಗ್ರಾಮ ಸಭೆಯ ಸಮಾವೇಶಕನು ಗ್ರಾಮ ಸಭೆಯ ಸಭೆಗಳನ್ನು ಸಮಾವೇಶಗೊಳಿಸಲು ವಿಫಲವಾದಾಗ ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಥವಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯು ಅಂಥ ವಿಶೇಷ ಸಭೆಯನ್ನು ಕರೆಯತಕ್ಕದ್ದು ಮತ್ತು ವಿಶೇಷ ಸಭೆಯನ್ನು ಸಮಾವೇಶಗೊಳಿಸಲು ಅವಶ್ಯಕವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸತಕ್ಕದ್ದು.