ಸಮಾವೇಶಕನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಸಹಾಯದೊಂದಿಗೆ ಗ್ರಾಮ ಸಭೆಯ ಸಾಮಾನ್ಯ ಅಥವಾ ವಿಶೇಷ ಸಭೆಯ ಸಾರ್ವಜನಿಕ ಸೂಚನೆಯನ್ನು, ಸದರಿ ಸಭೆಯ ದಿನಾಂಕದಿಂದ ಕನಿಷ್ಠ ಒಂದು ವಾರ ಮುಂಚಿತವಾಗಿ ಅವಶ್ಯಕತೆ ಬಿದ್ದರೆ ದೂರದರ್ಶನದ ಪ್ರಾದೇಶಿಕ ಚಾನಲ್ಗಳ ಮೂಲಕ ರೇಡಿಯೋ ಹಾಗೂ ವಾರ್ತಾ ಪತ್ರಿಕೆಗಳ ಮೂಲಕ ಕರಪತ್ರಗಳು ಮತ್ತು ಪೋಸ್ಟರ್ಗಳನ್ನು ಮುದ್ರಿಸುವ ಮೂಲಕ ಗ್ರಾಮ ಪಂಚಾಯಿತಿ ಸೂಚನಾ ಫಲಕದಲ್ಲಿ ಪ್ರದರ್ಶಿಸುವ ಮೂಲಕ ಗ್ರಾಮ ಚಾವಡಿ ಮತ್ತು ಇತರೆ ಎದ್ದು ಕಾಣುವ ಪ್ರದೇಶಗಳಲ್ಲಿ ಪ್ರದರ್ಶಿಸುವ ಮೂಲಕ, ಅಂಥಹ ಸಭೆಯು ನಡೆಯುವ ಸ್ಥಳ ಮತ್ತು ಸಮಯವನ್ನು ನಿರ್ದಿಷ್ಠಪಡಿಸುವ ಸಾರ್ವಜನಿಕ ಸೂಚನೆಯನ್ನು ಹೊರಡಿಸತಕ್ಕದ್ದು. ಇಂತಹ ಪರಿಪತ್ರಗಳು ಸಾಧ್ಯವಾಗಬಹುದಾದಷ್ಟರ ಸಭೆಯಲ್ಲಿ ಚರ್ಚಿಸಬಹುದಾದ ವಿಷಯಗಳ ಪಟ್ಟಿಯನ್ನು ಒಳಗೊಂಡಿರುತಕ್ಕದು.
Loading…