ಪ್ರಕರಣ 3-ಎ ಯ ಉಪ ಪ್ರಕರಣ (2) ರಲ್ಲಿ ಸೂಚಿಸಿರುವ ಪ್ರಕಾರ್ಯಗಳ ಜೊತೆಗೆ ಗ್ರಾಮಸಭೆಯು ಸಾಮಾನ್ಯ ಸಭೆಗಳಲ್ಲಿ ಈ ಕೆಳಗಿನ ವಿಸ್ತೃತ ಪ್ರಕಾರ್ಯಗಳನ್ನು ನೆರವೇರಿಸತಕ್ಕದ್ದು, ಅಂದರೆ.-
(ಎ). ಮೊದಲ ತ್ರೈಮಾಸಿಕ ಸಭೆ/ಹಿಂದಿನ ವರ್ಷದ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಗಣಿಸುವುದು.
(ಬಿ). ಎರಡನೇ ತ್ರೈಮಾಸಿಕ ಸಭೆ/ಈ ಸಭೆಯು ಪಂಚಾಯತ್ ಜಮಾಬಂಧಿ ಸಭೆಯಾಗಿರತಕ್ಕದ್ದು; ಹಿಂದಿನ ವರ್ಷಕ್ಕೆ ಸಂಬಂಧಿಸಿದ ಲೆಕ್ಕ ಪರಿಶೋಧನಾ ವರದಿಯನ್ನು ಪರಿಗಣಿಸತಕ್ಕದ್ದು ಮತ್ತು ಪಂಚಾಯತ್ ಜಮಾಬಂಧಿ ನಿಯಮಗಳಿಗೆ ಅನುಸಾರವಾಗಿ ನಡೆಸತಕ್ಕದ್ದು.
(ಸಿ). ಮೂರನೇ ತ್ರೈಮಾಸಿಕ ಸಭೆ/ ಪಂಚಾಯಿತಿಯು ನಡೆಸುತ್ತಿರುವ ಕಾಮಗಾರಿಗಳ ಪ್ರಗತಿಯ ನಿಗಾವಹಿಸುವುದು ಮತ್ತು ಮುಂದಿನ ವರ್ಷದ ಅಭಿವೃದ್ಧಿ ಯೋಜನೆಯ ಆರಂಭಿಕ ಚರ್ಚೆ;
(ಡಿ). ನಾಲ್ಕನೇ ತ್ರೈಮಾಸಿಕ ಸಭೆ/ ಪಂಚಾಯಿತಿಯ ಚಾಲ್ತಿಯಲ್ಲಿರುವ ಕೆಲಸಗಳ ನಿಗಾ ವಹಿಸುವುದು ಮತ್ತು ಮುಂದಿನ ವರ್ಷದ ಅಭಿವೃದ್ಧಿ ಯೋಜನೆಗಳ ಅಂತಿಮಗೊಳಿಸುವಿಕೆ.