ಕರ್ನಾಟಕ ಅಬಕಾರಿ (ದೇಶಿ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು, 1968 (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೆಖಿಸಲಾಗಿದೆ) ರಲ್ಲಿ, 3 ನೇ ನಿಯಮದ 11 ನೇ ಉಪನಿಯಮದಲ್ಲಿ, "ಬ್ರೀವರಿಗಳು”ಎಂಬ ಪದದ ಬದಲಾಗಿ “ಬ್ರೀವರಿಗಳು ಅಥವಾ ಕ್ರಾಫ್ಟ್ ಬ್ರೀವರಿಗಳು” DOW ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.
3.3-ಎ ನಿಯಮದ ತಿದ್ದುಪಡಿ:-ಸದರಿ ನಿಯಮಗಳ 3-ಎ ನಿಯಮದ ಕೊನೆಯಲ್ಲಿ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
"ನಮೂನೆ ಸಿಎಲ್-5ರಲ್ಲಿ ಸನ್ನದು ಹೊಂದಿರುವ ಯಾವುದೇ ವ್ಯಕ್ತಿಯು, ನಮೂನೆ ಸಿಎಲ್-11 (ವಿತರಕ ಸನ್ನದುದಾರ) ಅಥವಾ ನಮೂನೆ ಸಿಎಲ್- 2 ಅಥವಾ ನಮೂನೆ ಸಿಎಲ್-11(ಸಿ) ರಲ್ಲಿ ಸನ್ನದು ಹೊಂದಿರುವ ವ್ಯಕ್ತಿಯಿಂದ ಮದ್ಯವನ್ನು ಖರೀದಿಸಬಹುದು”.