ಸದರಿ ನಿಯಮಗಳ 5ನೇ ನಿಯಮದಲ್ಲಿ, 2ನೇ ಪರಂತುಕದ ತರುವಾಯ, ಕೊನೆಯಲ್ಲಿ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
“ಮತ್ತು ಅಲ್ಲದೆ, ಅಬಕಾರಿ ಉಪ ಆಯುಕ್ತರು ಅವರು ಸೂಕ್ತವೆನಿಸುವ ರೀತಿಯಲ್ಲಿ ವಿಚಾರಣೆ ನಡೆಸಿದ ನಂತರ ಮತ್ತು ಅವರು ತೃಪ್ತರಾದರೆ ನಮೂನೆ ಸಿಎಲ್-5 ರಲ್ಲಿ ಸಾಂದರ್ಭಿಕ ಸನ್ನದು ಮಂಜೂರು ಮಾಡಬಹುದು ಮತ್ತು ಸನ್ನದಿನ ಪ್ರತಿಯನ್ನು ಕಾರ್ಯವ್ಯಾಪ್ತಿ ಆರಕ್ಷಕ ಠಾಣೆಗೆ ಕಳುಹಿಸತಕ್ಕದ್ದು”.