ಸದರಿ ನಿಯಮಗಳಿಗೆ ಸೇರಿಸಲಾದ ನಮೂನೆ ಸಿಎಲ್-11(ಸಿನಲ್ಲಿ, ಷರತ್ತು ಸಂಖ್ಯೆ 3 ರ ತರುವಾಯ, ಈ ಮುಂದಿನ ಷರತ್ತನ್ನು ಸೇರಿಸತಕ್ಕದ್ದು, ಎಂದರೆ:-
"3-A. ಸನ್ನದು ಗ್ರಾಹಿಯು, ನಮೂನೆ ಸಿಎಲ್-5 ರಲ್ಲಿ ಸನ್ನದು ಹೊಂದಿರುವ ವ್ಯಕ್ತಿಗೆ ಭಾರತೀಯ ಮದ್ಯ/ವಿದೇಶಿ ಮದ್ಯ/ದೇಶಿ ಬಿಯರ್/ವೈನ್/ಫೋರ್ಟಿಫೈಡ್ Bae ಅನ್ನು ಮಾರಾಟ ಮಾಡಬಹುದು ಮತ್ತು ಅದರ ಪ್ರಕಾರ ಬಿಲ್ಗಳನ್ನು ನೀಡಬಹುದು. ಕರ್ನಾಟಕ ಅಬಕಾರಿ (ಮಾದಕ ವಸ್ತುಗಳ ಸ್ವಾಧೀನತೆ, ಸಾಗಾಣಿಕೆ, ಆಮದು ಮತ್ತು ರಫ್ತು) ನಿಯಮಗಳು, 1967ರ ವಿಯಮ 21 ರ ಅಡಿಯಲ್ಲಿ ಈ ಮಾದಕ ವಸ್ತುಗಳನ್ನು ಹೊಂದಲು, ಮಾರಾಟ ಮಾಡಲು ಮತ್ತು ಸಾಗಿಸಲು ಸೂಚಿಸಲಾದ ಗರಿಷ್ಠ ಪ್ರಮಾಣವು ನಮೂನೆ ಸಿಎಲ್-5 ಸನ್ನದು ಹೊಂ೦ದಿರುವ ವ್ಯಕ್ತಿಗೆ ಮಾರಾಟದ ಸಂದರ್ಭದಲ್ಲಿ ಅನ್ವಯಿಸುವುದಿಲ್ಲ".