ಸದರಿ ನಿಯಮಗಳಿಗೆ ಸೇರಿಸಲಾದ ನಮೂನೆ ಸಿಎಲ್-2 ನಲ್ಲಿ, ಷರತ್ತು ಸಂಖ್ಯೆ 7ರಲ್ಲಿನ ಪರಂತುಕದ ತರುವಾಯ, ಕೊನೆಯಲ್ಲಿ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
“ಮತ್ತು ಪರಂತು, ನಮೂನೆ ಸಿಎಲ್-5 ರಲ್ಲಿ ಸನ್ನದು ಹೊಂದಿರುವ ವ್ಯಕ್ತಿಗೆ ಭಾರತೀಯ ಮದ್ಯ/ವಿದೇಶಿ ಮದ್ಯ/ದೇಶಿ ಬಿಯರ್/ವೈನ್/ಫೋರ್ಟಿಫೈಡ್ ವೈನ್ ಅನ್ನು ಮಾರಾಟ ಮಾಡಬಹುದು ಮತ್ತು ಅದರ ಪ್ರಕಾರ ಬಿಲ್ಗಳನ್ನು ನೀಡಬಹುದು. ಕರ್ನಾಟಕ ಅಬಕಾರಿ (ಮಾದಕ ವಸ್ತುಗಳ ಸ್ವಾಧೀನತೆ, ಸಾಗಾಣಿಕೆ, ಆಮದು ಮತ್ತು ರಫ್ತು) ನಿಯಮಗಳು, 1967 ರ ನಿಯಮ 21 3 ಅಡಿಯಲ್ಲಿ ಈ ಮಾದಕ ಪದಾರ್ಥಗಳನ್ನು ಹೊಂದಲು, ಮಾರಾಟ ಮಾಡಲು ಮತ್ತು ಸಾಗಿಸಲು ಸೂಚಿಸಲಾದ ಗರಿಷ್ಠ ಪ್ರಮಾಣವು ನಮೂನೆ ಸಿಎಲ್-5 ಸನ್ನದು ಹೊಂದಿರುವ ವ್ಯಕ್ತಿಗೆ ಮಾರಾಟದ ಸಂದರ್ಭದಲ್ಲಿ ಅನ್ವಯಿಸುವುದಿಲ್ಲ".