(1) ಈ ನಿಯಮಗಳನ್ನು ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳು (ಕಲ್ಯಾಣ-ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದಗಳಲ್ಲಿನ ಪಶುವೈದ್ಯಾಧಿಕಾರಿಗಳ ನೇಮಕಾತಿ) (ವಿಶೇಷ) ನಿಯಮಗಳು, 2019ಎಂದುಕರೆಯತಕ್ಕದ್ದು.
(2) ಅವು, ಅಧಿಕೃತರಾಜ್ಯಪತ್ರದಲ್ಲಿ ಅವುಗಳ ಅಂತಿಮಪ್ರಕಟಣೆಗೊಂಡ ದಿನಾಂಕದಿಂದಜಾರಿಗೆ ಬರತಕ್ಕದ್ದು.
(3) ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ಅಥವಾಕರ್ನಾಟಕ ಸಿವಿಲ್ ಸೇವಾ (ಸ್ಪರ್ಧಾತ್ಮಕ ಪರೀಕ್ಷೆ ಮತ್ತುಆಯ್ಕೆಯ ಮೂಲಕ ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2006 ಅಥವಾಕರ್ನಾಟಕ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ (ನೇಮಕಾತಿ) ನಿಯಮಗಳು, 1965 ಅಥವಾಕರ್ನಾಟಕರಾಜ್ಯ ಸಿವಿಲ್ ಸೇವಾ ಅಧಿನಿಯಮ, 1978 (1990ರಕರ್ನಾಟಕಅಧಿನಿಯಮ 14)ರ ಮೇರೆಗೆಅನುಸೂಚಿಯಲ್ಲಿ ನಿರ್ದಿಷ್ಟಪಡಿಸಲಾದ ಹುದ್ದೆಗಳ ಪ್ರವರ್ಗಗಳಿಗೆ ಸಂಬಂಧಿಸಿದಂತೆ ರಚಿಸಲಾದಅಥವಾರಚಿಸಲಾಗಿದೆಎಂದು ಭಾವಿಸಲಾದಯಾವುದೇಇತರ ನೇಮಕಾತಿ ನಿಯಮಗಳಲ್ಲಿ ಏನೇ ಒಳಗೊಂಡಿದ್ದಾಗ್ಯೂ, ಈ ನಿಯಮಗಳ ಉಪಬಂಧಗಳು, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಯಲ್ಲಿಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಕಲ್ಯಾಣ-ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದಗಳಲ್ಲಿರುವ ಪಶುವೈದ್ಯಾಧಿಕಾರಿ ಹುದ್ದೆಗಳ ಪ್ರವರ್ಗಗಳಲ್ಲಿ ಖಾಲಿ ಇರುವ 61 ಹುದ್ದೆಗಳ ನೇರನೇಮಕಾತಿಗೆಅನ್ವಯವಾಗತಕ್ಕದ್ದು.
ಪರಂತು, ಈ ನಿಯಮಗಳಲ್ಲಿರುವುದು ಯಾವುದೂ, ಒಂದಕ್ಕಿಂತ ಹೆಚ್ಚಿನ ನೇಮಕಾತಿಗೆಅನ್ವಯವಾಗತಕ್ಕದ್ದಲ್ಲ.