(1) ಆಯ್ಕೆ ಸಮಿತಿಯು, ಕನ್ನಡ ಭಾಷಾ ಪರೀಕ್ಷೆಯಲ್ಲಿಅರ್ಹರಾಗಿರುವ ಅಭ್ಯರ್ಥಿಗಳ ಪೈಕಿಯಿಂದ, ಅರ್ಹತಾ ಪರೀಕ್ಷೆಯಲ್ಲಿ ಗಳಿಸಲಾದ ಅಂಕಗಳ ಒಟ್ಟು ಶೇಕಡಾವಾರು ಹಾಗೂ ತತ್ಕಾಲದಲ್ಲಿಜಾರಿಯಲ್ಲಿರುವಯಾವುದೇ ಕಾನೂನು ಅಥವಾಯಾವುದೇಆದೇಶದ ಮೂಲಕ ಅಥವಾಅದರ ಮೇರೆಗೆ ಉಪಬಂಧಿಸಿದ ಹುದ್ದೆಗಳ ಮೀಸಲಾತಿಯಎಲ್ಲಾ ಹಂತದ(Vertical)ಮತ್ತುಒಂದೇ ಹಂತದ(Horizontal)ಆಧಾರದಮೇಲೆ ಈ ನಿಯಮಗಳ ಮೇರೆಗೆ ನೇಮಕಾತಿಗಾಗಿಅರ್ಹತಾಕ್ರಮದಲ್ಲಿಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು.
(2) (1)ನೇ ಉಪ-ನಿಯಮದ ಮೇರೆಗೆಆಯ್ಕೆ ಮಾಡಬಹುದಾದ ಅಭ್ಯರ್ಥಿಗಳ ಸಂಖ್ಯೆಯು ಅಧಿಸೂಚಿಸಿರುವ ಖಾಲಿ ಹುದ್ದೆಗಳ ಸಂಖ್ಯೆಗೆ ಸಮನಾಗಿರತಕ್ಕದ್ದು.
(3) ಇಬ್ಬರುಅಥವಾಇಬ್ಬರಿಗಿಂತ ಹೆಚ್ಚಿನ ಅಭ್ಯರ್ಥಿಗಳು ಸಮಾನ ಅಂಕಗಳನ್ನು ಪಡೆದುಕೊಂಡಿದ್ದರೆ, ಅಂಥ ಅಭ್ಯರ್ಥಿಗಳ ಸಂಬಂಧದಲ್ಲಿಅವರ ವಯಸ್ಸಿನ ಆಧಾರದ ಮೇಲೆ, ಹಿರಿಯ ವಯಸ್ಸಿನವನನ್ನು, ಕಿರಿಯ ವಯಸ್ಸಿನವನಿಗಿಂತ ಮೇಲಿನ ಸ್ಥಾನಕ್ಕೆ ಅರ್ಹತಾಕ್ರಮದಲ್ಲಿ ನಿಗದಿಪಡಿಸತಕ್ಕದ್ದು. ಅಂಥಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿಸಬಹುದಾದ ಅಭ್ಯರ್ಥಿಗಳ ಸಂಖ್ಯೆಯು, ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಖಾಲಿ ಹುದ್ದೆಗಳ ಸಂಖ್ಯೆಗೆ ಸಮನಾಗಿರತಕ್ಕದ್ದು.
(4) ಆಯ್ಕೆ ಸಮಿತಿಯು, (1)ನೇ ಉಪ-ನಿಯಮದ ಮೇರೆಗೆ ಸಿದ್ಧಪಡಿಸಿರುವ ಮುಖ್ಯ ಪಟ್ಟಿಯಲ್ಲಿ ಒಳಗೊಳ್ಳದಿರುವಂಥ ಅಭ್ಯರ್ಥಿಗಳ ಹೆಚ್ಚುವರಿ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು. ಹೆಚ್ಚುವರಿ ಪಟ್ಟಿಯಲ್ಲಿ ಸೇರಿಸಬೇಕಾದ ಅಭ್ಯರ್ಥಿಗಳ ಸಂಖ್ಯೆಯು, (1)ನೇ ಉಪ-ನಿಯಮದ ಮೇರೆಗೆ ಸಿದ್ಧಪಡಿಸಿರುವ ಪಟ್ಟಿಯಲ್ಲಿ [ಒಂದೇ ಹಂತದ(Horizontal) ಮತ್ತುಎಲ್ಲಾ ಹಂತದ(Vertical)]ಪ್ರತಿಯೊಂದು ಮೀಸಲು ಪ್ರವರ್ಗಗಳಲ್ಲಿನ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಶೇಕಡಾ 20 ರಷ್ಟಿರತಕ್ಕದ್ದು. (1)ನೇ ಉಪ-ನಿಯಮದ ಮೇರೆಗೆ ಹೆಚ್ಚುವರಿ ಪಟ್ಟಿಯಲ್ಲಿ ಪ್ರತಿಯೊಂದು ಮೀಸಲಾತಿ ಪ್ರವರ್ಗ [ಒಂದೇ ಹಂತದ(Horizontal) ಮತ್ತುಎಲ್ಲಾ ಹಂತದ(Vertical)] ಗಳಿಗೆ ಸೇರಿದ ಕನಿಷ್ಠಪಕ್ಷಒಬ್ಬಅಭ್ಯರ್ಥಿಯುಇರತಕ್ಕದ್ದು. (1)ನೇ ಉಪ-ನಿಯಮದ ಮೇರೆಗೆ ಪಟ್ಟಿಯಲ್ಲಿ ಹೆಸರನ್ನು ಸೇರಿಸಿರುವ ಅಭ್ಯರ್ಥಿಯು ಗೊತ್ತುಪಡಿಸಿರುವ ಅವಧಿಯೊಳಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ವಿಫಲನಾದಲ್ಲಿ, ಕರ್ತವ್ಯಕ್ಕೆ ವರದಿಯನ್ನು ಮಾಡಿಕೊಳ್ಳಲು ವಿಫಲನಾದಅಭ್ಯರ್ಥಿಯ ಸ್ಥಾನಕ್ಕೆ ಹೆಚ್ಚುವರಿ ಪಟ್ಟಿಯಲ್ಲಿರುವಅದೇ ಮೀಸಲಾತಿ ಪ್ರವರ್ಗಕ್ಕೆ ಸೇರಿದಅಭ್ಯರ್ಥಿಯನ್ನು ನೇಮಕ ಮಾಡತಕ್ಕದ್ದು.
(5) (1) ಮತ್ತು (4)ನೇ ಉಪ-ನಿಯಮಗಳ ಮೇರೆಗೆ, ಹಾಗೆ ಸಿದ್ಧಪಡಿಸಿರುವ ಪಟ್ಟಿಗಳನ್ನು ಅಧಿಕೃತರಾಜ್ಯಪತ್ರದಲ್ಲಿ ಮತ್ತುಆಯುಕ್ತರಕಚೇರಿಯ ಸೂಚನಾ ಫಲಕದಲ್ಲಿಯೂ ಸಹ ಪ್ರಕಟಿಸತಕ್ಕದ್ದು.
(6) ವಿಶೇಷ ಆಯ್ಕೆ ಸಮಿತಿಯುಆಯ್ಕೆ ಮಾಡಿದ ಹಾಗೂ ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಲಾದ ಅಭ್ಯರ್ಥಿಗಳ ಪಟ್ಟಿಯು, ಎಲ್ಲಾಅಧಿಸೂಚಿತ ಖಾಲಿ ಸ್ಥಾನಗಳನ್ನು ಭರ್ತಿ ಮಾಡುವವರೆಗೆಅಥವಾಆಯ್ಕೆ ಪಟ್ಟಿಯನ್ನು ಪ್ರಕಟಿಸಿದ ದಿನಾಂಕದಿಂದಒಂದು ವರ್ಷ ಪೂರ್ಣಗೊಳ್ಳುವವರೆಗೆ ಇದರಲ್ಲಿಯಾವುದು ಮೊದಲೋಅಲ್ಲಿಯವರೆಗೆ ಸಿಂಧುವಾಗಿರತಕ್ಕದ್ದು.