(1) ಈ ನಿಯಮಗಳಲ್ಲಿ ಸಂದರ್ಭವು, ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) “ನೇಮಕಾತಿ ಪ್ರಾಧಿಕಾರ” ಎಂದರೆ, ಈ ನಿಯಮಗಳ ಮೇರೆಗೆ ಪಶುವೈದ್ಯಾಧಿಕಾರಿಗಳನ್ನು ನೇಮಕ ಮಾಡುವರಾಜ್ಯ ಸರ್ಕಾರ;
(ಬಿ) “ಕಲ್ಯಾಣ-ಕರ್ನಾಟಕ ಪ್ರಾದೇಶಿಕ ಸ್ಥಳೀಯ ವೃಂದಗಳು” ಎಂದರೆ, ನೇರನೇಮಕಾತಿ ಮೂಲಕ ಭರ್ತಿ ಮಾಡಬೇಕಾದ ಪಶುವೈದ್ಯಾಧಿಕಾರಿಗಳು ಕರ್ನಾಟಕ ಸಾರ್ವಜನಿಕಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶದ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013ರ ಮೇರೆಗೆರಚಿಸಲಾದ ಸ್ಥಳೀಯ ವೃಂದ;
(ಸಿ) “ಅರ್ಹತಾ ಪರೀಕ್ಷೆ” ಎಂದರೆ, ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಪಶುವೈದ್ಯಾಧಿಕಾರಿಗಳು ಹುದ್ದೆಗಳ ನೇಮಕಾತಿಗಾಗಿ ನಿರ್ದಿಷ್ಟಪಡಿಸಿರುವ ಕನಿಷ್ಠ ವಿದ್ಯಾರ್ಹತೆ; ಮತ್ತು
(ಡಿ) “ಅನುಸೂಚಿ” ಎಂದರೆ, ಈ ನಿಯಮಗಳಿಗೆ ಅನುಬಂಧಿಸಿದ ಅನುಸೂಚಿ;
(ಇ) “ಆಯ್ಕೆ ಸಮಿತಿ” ಎಂದರೆ, 3ನೇ ನಿಯಮದ ಮೇರೆಗೆರಚಿಸಲಾದರಾಜ್ಯಮಟ್ಟದಆಯ್ಕೆ ಸಮಿತಿ;
(ಎಫ್)“ಖಾಲಿ ಹುದ್ದೆಗಳು” ಎಂದರೆ, ಈ ನಿಯಮಗಳ ಮೇರೆಗೆ ಭರ್ತಿ ಮಾಡಬೇಕಾಗಿರುವ ಖಾಲಿ ಹುದ್ದೆಗಳ ಸಂಖ್ಯೆ.
(2) ಈ ನಿಯಮಗಳಲ್ಲಿ ಬಳಸಲಾಗಿರುವ ಆದರೆ ಪರಿಭಾಷಿಸಿಲ್ಲದಇತರೆಪದಗಳು ಮತ್ತುವ್ಯಾಖ್ಯಾನಗಳುಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರಲ್ಲಿ ಅವುಗಳಿಗೆ ಕೊಟ್ಟಿರುವಅರ್ಥವನ್ನೇ ಹೊಂದಿರತಕ್ಕದ್ದು.