ಅಭ್ಯರ್ಥಿಯು, ಗರಿಷ್ಠ 150 ಅಂಕಗಳ ಒಂದು ಪತ್ರಿಕೆಯನ್ನು ಒಳಗೊಂಡಿರುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಅವನು ಅರ್ಹನಾಗಿದ್ದ ಹೊರತು ಹಾಗೂ ಕನ್ನಡ ಭಾಷಾಜ್ಞಾನಕ್ಕೆ ಸಂಬಂಧಿಸಿದಂತೆ ಸದರಿಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕಗಳನ್ನು ಪಡೆದಿದ್ದ ಹೊರತು ಪಶುವೈದ್ಯಾಧಿಕಾರಿಗಳ ಹುದ್ದೆಗೆಆಯ್ಕೆ ಪಟ್ಟಿಯಲ್ಲಿ ಅವನ ಹೆಸರನ್ನು ಸೇರಿಸಲುಅರ್ಹನಾಗತಕ್ಕದ್ದಲ್ಲ. ಈ ಪತ್ರಿಕೆಯಗುಣಮಟ್ಟವು, ಎಸ್ಎಸ್ಎಲ್ಸಿ ಮಟ್ಟದಕನ್ನಡ ಪ್ರಥಮ ಭಾಷೆಯದ್ದಾಗಿರತಕ್ಕದ್ದು.
ಪರಂತು, ಸಮಿತಿಯು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿಅಥವಾಯಾವುದೇತತ್ಸಮಾನ ಪರೀಕ್ಷೆಯಲ್ಲಿಅಥವಾ ಎಸ್ಎಸ್ಎಲ್ಸಿ ಪರೀಕ್ಷೆಗಿಂತ ಮೇಲ್ಮಟ್ಟದಯಾವುದೇ ಪರೀಕ್ಷೆಯಲ್ಲಿಕನ್ನಡವನ್ನು ಮುಖ್ಯ ಭಾಷೆಯಾಗಿಅಥವಾ ದ್ವಿತೀಯ ಭಾಷೆಯಾಗಿಅಥವಾಐಚ್ಛಿಕ ವಿಷಯವಾಗಿ (ಆದರೆಅದರಲ್ಲಿಒಂದು ವಿಷಯ ಸಂಯುಕ್ತ ಪತ್ರಿಕೆಯಾಗಿರಬಾರದು) ತೆಗೆದುಕೊಂಡುಉತ್ತೀರ್ಣನಾಗಿದ್ದರೆಅಥವಾಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿತೇರ್ಗಡೆಯಾಗಿದ್ದರೆಅಥವಾ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸುವಕನ್ನಡ ಭಾಷಾ ಪರೀಕ್ಷೆಯಲ್ಲಿ ಈ ಮೊದಲೇಉತ್ತೀರ್ಣನಾಗಿದ್ದಲ್ಲಿ ಆ ಅಭ್ಯರ್ಥಿಗೆಕನ್ನಡ ಭಾಷಾ ಪರೀಕ್ಷೆಯಲ್ಲಿಉತ್ತೀರ್ಣರಾಗಿರುವುದರಿಂದ ವಿನಾಯಿತಿ ನೀಡಬಹುದು.