ಈ ಅಧ್ಯಾದೇಶದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) “sobs” ಎಂಬುದರಲ್ಲಿ ರಸ್ತೆಗಳು, ಬೀದಿಗಳು, ಸುರಂಗ ಮಾರ್ಗಗಳು, ದೀಪವ್ಯವಸ್ಥೆ, ಚರಂಡಿ ವ್ಯವಸ್ಥೆ, ನಿರ್ಮಲೀಕರಣ, ವಿದ್ಯುಚ್ಛಕ್ತಿ ಮತ್ತು ನೀರು ಸರಬರಾಜು ಅಥವಾ ಇತರ ಅನುಕೂಲಗಳು; ಲೋಕೋಪಯೋಗಿ ಕಾಮಗಾರಿಗಳು, ಮಾರುಕಟ್ಟೆ ಸ್ಥಳಗಳು, ಅಂಚೆ ಕಚೇರಿ, ಬ್ಯಾಂಕು, ಆಸ್ಪತ್ರೆ, ಚಿಕಿತ್ಸಾಲಯ, ಪೊಲೀಸು ಠಾಣೆ, ನ್ಯಾಯಬೆಲೆ ಅಂಗಡಿ, ಹಾಲಿನ ಕೇಂದ್ರ, ಗ್ರಂಥಾಲಯ, ಮನೋರಂಜನಾ ಕೇಂದ್ರಗಳು, ಮಂಡಳಿಯು ಪ್ರಾಧಿಕೃತಗೊಳಿಸಿದ ಜನೋಪಯೋಗಿ ಸೇವೆಯ ಯಾವುವೇ ಸೇವಾ ಕೇಂದ್ರಗಳು, ಅಥವಾ ಇತರ ಸೌಲಭ್ಯಗಳು; ಮತ್ತು ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಬಹುದಾದಂಥ ಇತರ ಸೌಕರ್ಯಗಳು ಒಳಗೊಳ್ಳುತ್ತವೆ;
(ಬಿ) "ಮಂಡಳಿ' ಎಂದರೆ, 3ನೇ ಪ್ರಕರಣದ ಅಡಿಯಲ್ಲಿ ರಚಿಸಿದ ಬಸವಕಲ್ಕಾಣ ಅಭಿವೃದ್ಧಿ ಮಂಡಳಿ;
(ಸ) "ಬಸವ ಕಲ್ಕಾಣ' ಎಂದರೆ, ಅದು ಬಸವ tons ಪಟ್ಟಣದ ಪುರಸಭಾಸಮಿತಿಯ ಸರಹದ್ದಿನೊಳಗಿನ ಮತ್ತು ಪಟ್ಟಣದಿಂದ ಹನ್ನೆರಡು ಕಿಲೋ ಮೀಟರುಗಳೊಳಗಿನ ಪ್ರದೇಶ ಮತ್ತು ಬಸವಕಲ್ಕಾಣದ ಪರಂಪರೆಯ ತಾಣಗಳ ಅಭಿವೃದ್ಧಿಗಾಗಿ ಕಾಲಕಾಲಕ್ಕೆ ಸರ್ಕಾರವು ಆರ್ಜಿಸಬಹುದಾದ ಭೂ-ಪ್ರದೇಶ ಹಾಗೂ ಅಧಿಸೂಚನೆಯ ಮೂಲಕ ರಾಜ್ಯಸರ್ಕಾರವು ಘೋಷಿಸಬಹುದಾದಂಥ ಇತರೆ ಪ್ರದೇಶಗಳು ಮತ್ತು ಅದು ಅವುಗಳನ್ನು ಒಳಗೊಳ್ಳುತ್ತದೆ.
(ಡಿ) "ಅಧ್ಯಕ್ಷ' ಎಂದರೆ, ಮಂಡಳಿಯ ಅಧ್ಯಕ್ಷ;
(ಇ) "ಆಯುಕ್ತ' ಎಂದರೆ, 10ನೇ ಪ್ರಕರಣದ ಅಡಿಯಲ್ಲಿ ನೇಮಕ ಮಾಡಲಾದ ಮಂಡಳಿಯ ಆಯುಕ್ತ;
(ಎಫ್) ‘AH’ ಎಂದರೆ, ಮಂಡಳಿಯ ನಿಧಿ;
(ಜಿ) “ಪರಂಪರೆಯ sore” ಎಂದರೆ, ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಹಾಗೂ ಅವಶೇಷಗಳ ಅಧಿನಿಯಮ 1958ರ (1958ರ ಕೇಂದ್ರ ಅಧಿನಿಯಮ 24) ಅಡಿಯಲ್ಲಿ ಸಂರಕ್ಷಿತ ಪ್ರದೇಶವೆಂದು ಉಲ್ಲೇಖಿಸಲಾದ ಪ್ರದೇಶವನ್ನು ಹೊರತುಪಡಿಸಿ, ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ತಾಣಗಳನ್ನು ಒಳಗೊಳ್ಳುವ ಸಂಪೂರ್ಣ ಪ್ರದೇಶವಾಗಿದೆ.
(ಎಚ್) "ಸದಸ್ಯ' ಎಂದರೆ, ಮಂಡಳಿಯ ಸದಸ್ಯ;
ಕರ್ನಾಟಕ ರಾಜ್ಯ ಪತ್ರದ ಭಾಗ-!'ಎ ವಿಶೇಷ ಪತ್ರಿಕೆ ಸಂಖ್ಯೆ: 1288 ದಿನಾಂಕ: 12.11.2004 ರಲ್ಲಿ ಪ್ರಕಟಿತ ಕಡತ ಸಂಖ್ಯೆ: ಸಂವ್ಯಶಾಇ 36 ಶಾಸನ 2004
(ಐ) "ವಿನಿಯಮಗಳು' ಎಂದರೆ, 46ನೇ ಪ್ರಕರಣದ ಅಡಿಯಲ್ಲಿ ರಚಿಸಿದ ಮಂಡಳಿಯ ವಿನಿಯಮಗಳು;
(ಜೆ) "ಅನುಸೂಚಿ' ಎಂದರೆ, ಈ ಅಧ್ಯಾದೇಶಕ್ಕೆ ಲಗತ್ತಿಸಲಾದ ಅನುಸೂಚಿ;