ಮಂಡಳಿಯು, ಸರ್ಕಾರದ ಪೂರ್ವಾನುಮೋದನೆ ಪಡೆಯದೆ, ಯಾವುದೇ ಉದ್ದೇಶಕ್ಕಾಗಿ ಮತ್ತು ಯಾವೊಬ್ಬ ವ್ಯಕ್ತಿಗೆ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಯಾವುದೇ ಜಮೀನನ್ನು ಮಾರಾಟ ಮಾಡತಕ್ಕದ್ದಲ್ಲ.
ಮಂಡಳಿಯ ಎಲ್ಲ ಸದಸ್ಯರು, ಅಧಿಕಾರಿಗಳು ಮತ್ತು ನೌಕರರನ್ನು, ಅವರು. ಈ ಅಧ್ಯಾದೇಶದ ಯಾವುವೇ ಉಪಬಂಧಗಳ ಅನುಸರಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಅಥವಾ ಕಾರ್ಯ ನಿರ್ವಹಿಸುತ್ತಿರುವರೆಂದು ತಾತ್ಸರ್ಯವಾದಾಗ ಅವರನ್ನು ಭಾರತ ದಂಡ ಸಂಹಿತೆಯ 21ನೇ ಪ್ರಕರಣದ ಅರ್ಥವ್ಕಾಪ್ತಿಯೊಳಗೆ ಸಾರ್ವಜನಿಕ ನೌಕರರು ಎಂಬುದಾಗಿ ಭಾವಿಸತಕ್ಕದ್ದು.
(1) ಈ ಅಧ್ಯಾದೇಶದಿಂದ ಅಥವಾ ಅದರ ಅಡಿಯಲ್ಲಿ ವಿಧಿಸಲಾದ ಯಾವುದೇ ಕರ್ತವ್ಯದ ನಿರ್ವಹಣೆಯನ್ನು ಮಂಡಳಿಯು ಮಾಡಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಮನವರಿಕೆಯಾದರೆ, ಆ ಕರ್ತವ್ಯದ ನಿರ್ವಹಣೆಗಾಗಿ ಅದು ಒಂದು ಅವಧಿಯನ್ನು ನಿಗದಿಪಡಿಸತಕ್ಕದ್ದು.
(2) ರಾಜ್ಯ ಸರ್ಕಾರದ ಅಭಿಪ್ರಾಯದಲ್ಲಿ, ಅದರ ಕರ್ತವ್ಯ ನಿರ್ವಹಣೆಗಾಗಿ ಹಾಗೆ ನಿಗದಿಪಡಿಸಿದ ಅವಧಿಯೊಳಗೆ ಅಂಥ ಕರ್ತವ್ಯ ನಿರ್ವಹಣೆ ಮಾಡುವಲ್ಲಿ ಮಂಡಳಿಯು ವಿಫಲವಾದರೆ ಅಥವಾ ನಿರ್ಲಕ್ಷ್ಯ ತೋರಿದರೆ 3ನೇ ಪ್ರಕರಣದಲ್ಲಿ ಏನೇ ಇದ್ದಾಗ್ಯೂ, ಮಂಡಳಿಯನ್ನು ರದ್ದುಗೊಳಿಸುವುದು ಮತ್ತು ಅದನ್ನು ನಿಗದಿತ ರೀತಿಯಲ್ಲಿ ಪುನಃ ರಚಿಸುವುದು ಸರ್ಕಾರಕ್ಕೆ ಕಾನೂನುಸಮತವಾಗಿರತಕ್ಕದ್ದು.
(3) ಮಂಡಳಿಯನ್ನು ರದ್ದುಪಡಿಸಿದ ತರುವಾಯ ಮತ್ತು ಅದನ್ನು ಪುನಾರಚಿಸುವವರೆಗೆ ಈ ಅಧ್ಯಾದೇಶದ ಅಡಿಯಲ್ಲಿನ ಮಂಡಳಿಯ ಅಧಿಕಾರಗಳು, ಕರ್ತವ್ಯಗಳು ಮತ್ತು ಪ್ರಕಾರ್ಯಗಳನ್ನು ರಾಜ್ಯ ಸರ್ಕಾರ ಅಥವಾ ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರವು ನೇಮಕ ಮಾಡಬಹುದಾದಂಥ ಅಧಿಕಾರಿ ಅಥವಾ ಅಧಿಕಾರಿಗಳು ನಿರ್ವಹಿಸತಕ್ಕದ್ದು.