(1) ಮಂಡಳಿಯು, ಅದರ ರಚನೆಯಾದ ಮೇಲೆ, ಆದಷ್ಟು ಬೇಗನೆ ಬಸವಕಲ್ಯಾಣವನ್ನು ಅಂತಾರಾಷ್ಟ್ರೀಯ ಯಾತ್ರಾ ಸ್ಥಳವನ್ನಾಗಿ ಮತ್ತು ಸಾಂಸ್ಕೃತಿಕ ಹಾಗೂ ಪ್ರವಾಸಿ ಕೇಂದ್ರವನ್ನಾಗಿ ಮತ್ತು ಜಗಜ್ಯೋತಿ ಶ್ರೀ ಬಸವೇಶ್ವರರ, ಅವರ ಸಮಕಾಲೀನರ ಮತ್ತು ಶಿಷ್ಕರ ವಚನ-ಸಿದ್ದಾಂತಗಳ ಚಿಂತನ ಹಾಗೂ ಪ್ರಚಾರದ ಕೇಂದ್ರವನ್ನಾಗಿ ಮಾಡಿ ಅಭಿವೃದ್ಧಿಗೊಳಿಸಲು ಯೋಜನೆಯನ್ನು ಸಿದ್ಧಪಡಿಸತಕ್ಕದ್ದು. ಅಭಿವೃದ್ಧಿ ಯೋಜನೆಯು ಈ ಮುಂದಿನವುಗಳನ್ನು ಒಳಗೊಂಡಿರಬಹುದು, ಎಂದರೆ:-
(ಎ) ಯಾವುದೇ ಪರಂಪರೆ ತಾಣದ ಅಥವಾ ನಿರ್ಮಿತಿಯ ಮರುಜೋಡಣೆ ನಿರ್ಮಾಣ ಮತ್ತು ಅದರ ನಿರ್ವಹಣೆಗಾಗಿ ಕಾರ್ಯಕ್ರಮಗಳು;
(ಬಿ) ಮಂಡಳಿಯ ಅಭಿಪ್ರಾಯದಲ್ಲಿ ಅಭಿವೃದ್ಧಿ ಯೋಜನೆಯನ್ನು ಕಾರ್ಯಗತಗೊಳಿಸಲು ಅವಶ್ಯವಾದ ಭೂಮಿಯನ್ನು, ಭೂಸ್ಹಾಧೀನ ಅಥವಾ ಖರೀದಿ ಅಥವಾ ವಿನಿಮಯದ ಮೂಲಕ ಅಥವಾ ಅನ್ಯಥಾ ಆರ್ಜಿಸುವುದಕ್ಕಾಗಿ ಪ್ರಸ್ತಾವಗಳು;
(ಸಿ) ಸಾರ್ವಜನಿಕ ಉದ್ಯಾನವನಗಳು, ಫಲಪುಷ್ಪ ತೋಟಗಳು ಅಥವಾ ಮೃಗಾಲಯಗಳು, ಕಾರಂಜಿ ಬನಗಳು, ಕೃತಕ ಜಲಪಾತಗಳು, ವನ್ಯಮೃಗ ಉದ್ಯಾನವನಗಳು, ದೋಣಿ ವಿಹಾರ ಅಥವಾ ಇತರ ಜಲ ಕ್ರೀಡಾ ಸೌಲಭ್ಯವಿರುವ ಸರೋವರಗಳನ್ನು ಅಥವಾ ಇಂಥವೇ ಪ್ರವಾಸಿಗಳಿಗೆ ಆಕರ್ಷಣೆಯನ್ನುಂಟುಮಾಡುವಂಥ ಇತರ ಕೇಂದ್ರಗಳನ್ನು ನಿರ್ಮಿಸುವುದು;
(ಡಿ) ವಿವಿಧ ವರ್ಗದ ಪ್ರವಾಸಿಗರ ಅವಶ್ಯಕತೆ ಪೂರೈಸಲು ಛತ್ರಗಳು, ವಸತಿ-ಗೃಹಗಳು, ಕುಠೀರಗಳು, ಹೋಟೆಲುಗಳು, ರೆಸ್ಟೋರಾಗಳು ಮತ್ತು ಭೋಜನಾಲಯಗಳನ್ನು ನಿರ್ಮಿಸುವುದು;
(ಇ) ಅವಶ್ಯಕ ಸಾಲು ಅಂಗಡಿಗಳನ್ನು ಅಥವಾ ವಾಣಿಜ್ಯ-ಸಂಕೀರ್ಣಗಳನ್ನು ನಿರ್ಮಿಸುವುದು;
(ಎಫ್) ಅನುಭವ ಮಂಟಪದ ಮಾದರಿಯಲ್ಲಿ ಒಂದು ಸಭಾಂಗಣವನ್ನು ನಿರ್ಮಿಸುವುದು;
(ಜಿ) ಆಯಕಟ್ಟಿನ ಸ್ಥಳಗಳಲ್ಲಿ ಪ್ರಾರ್ಥನಾ ಮಂದಿರಗಳ ಮತ್ತು ಧ್ಯಾನ ಮಂದಿರಗಳ ನಿರ್ಮಾಣ;
(ಎಚ್) We ಪ್ರಕರಣದಲ್ಲಿ ಪರಿಭಾಷಿಸಲಾದಂತೆ ಸೌಕರ್ಯಗಳನ್ನು ಕಲ್ಪಿಸುವುದು;
(ಐ) ಕಟ್ಟಡಗಳ ನಿರ್ಮಾಣ ಹಾಗೂ ಪುನರ್-ನಿರ್ಮಾಣವೂ ಸೇರಿದಂತೆ ಎಲ್ಲಾ ಅಥವಾ ಯಾವುದೇ ಭೂಮಿಯ ವಿನ್ಯಾಸ ಮತ್ತು ಮರು AWA;
(ಜೆ) ಚರಂಡಿ ವ್ಯವಸ್ಥೆ, ವಿದ್ಯುಚ್ಛಕ್ತಿ ಮತ್ತು ನೀರು ಪೂರೈಕೆ ಮತ್ತು ನೈರ್ಮಲ್ಯ ವ್ಯವಸ್ಥೆಯನ್ನು ಒದಗಿಸುವುದು;
(ಕೆ) ಮಂಡಳಿಯು, ಸಾಧಾರಣವಾಗಿ ತನ್ನ ಯೋಜನಾ ಕಾರ್ಯಕ್ಕೆ ಅನುಕೂಲವಾಗುವಂತೆ ಮತ್ತು ಮುಖ್ಯವಾಗಿ ಉತ್ತಮ ನೀರು ಹರಿವಿನ ವ್ಯವಸ್ಥೆಯನ್ನು ಒದಗಿಸಲು, ಯಾವುದೇ ಭೂಮಿಯನ್ನು ಎತ್ತರಿಸುವುದು ಸೂಕ್ತವೆಂದು ಭಾವಿಸಿದರೆ ಅಂಥ ಭೂಮಿಯನ್ನು ಎತ್ತರಿಸುವುದು;
(ಎಲ್) ಬಸವ ಕಲ್ಕಾಣ ಪ್ರದೇಶದಲ್ಲಿ ಅಥವಾ ಅದಕ್ಕೆ ಲಗತ್ತಾಗಿರುವ ಪ್ರದೇಶದಲ್ಲಿ ಉತ್ತಮ ಗಾಳಿ-ಬೆಳಕು ದೊರಕುವಂತೆ ಖಾಲಿ ಜಾಗಗಳನ್ನು ಬಿಡುವುದು;
(ಎಮ್) ಜನರ ವಾಸಕ್ಕೆ ಯೋಗ್ಯವಲ್ಲದ ಹಾಗೂ ಅಭಿವೃದ್ಧಿ ಯೋಜನೆಗೆ ತಕ್ಕದಲ್ಲದ ಎಲ್ಲ ಕಟ್ಟಡಗಳನ್ನು ಕೆಡವುವುದು;
(ಎನ್) ಅಡಚಣೆಯನ್ನುಂಟುಮಾಡುವ ಕಟ್ಟಡಗಳನ್ನು ಅಥವಾ ಕಟ್ಟಡಗಳ ಭಾಗಗಳನ್ನು ಕೆಡವುವುದು;
(ಒ) ಕಟ್ಟಡಗಳ ನಿರ್ಮಾಣ ಮತ್ತು ಪುನರ್ನಿರ್ಮಾಣ, ಅವುಗಳ ನಿರ್ವಹಣೆ ಮತ್ತು ಸಂರಕ್ಷಣೆ;
(ಪ) 26ನೇ ಪ್ರಕರಣದಲ್ಲಿನ ಉಪಬಂಧಗಳಿಗೆ ಒಳಪಟ್ಟು, ಯೋಜನೆಯಲ್ಲಿ ಸೇರಿರುವ ಯಾವುದೇ ಸ್ವತ್ತನ್ನು ಮಾರಾಟ ಮಾಡುವುದು, ಬಾಡಿಗೆಗೆ ಕೊಡುವುದು, ಅಥವಾ ವಿನಿಮಯ ಮಾಡಿಕೊಳ್ಳುವುದು;
(ಕ್ಯು) ಮಂಡಲಿಯ ನೌಕರರಿಗೆ ವಸತಿ ಸೌಲಭ್ಯವನ್ನು ಒದಗಿಸುವುದು;
(ಆರ್) ಸಂಪರ್ಕ ಮತ್ತು ಸಾಗಣೆ ಸೌಲಭ್ಯಗಳನ್ನು ಒದಗಿಸುವುದು;
(ಎಸ್) ಅಭಿವೃದ್ಧಿ ಯೋಜನೆಯ ಭೌಗೋಳಿಕ ಪ್ರದೇಶದಲ್ಲಿ ಈಗಿರುವ ಮತ್ತು ಮುಂದುವರಿಸಲು ಅನುಮತಿಸಬಹುದಾದಂಥ ಮತೀಯ ಸಂಸ್ಥೆಗಳೊಂದಿಗೆ, ಅವು ಅಭಿವೃದ್ಧಿ ಯೋಜನೆಯ ಪರಿಕಲ್ಪನೆಗೆ ಸರಿಹೊಂದುತ್ತಿರುವವರೆಗೆ ಹೊಂದಾಣಿಕೆಗಳು ಮತ್ತು ಒಪ್ಪಂದಗಳನ್ನು ಮಾಡಿಕೊಳ್ಳುವುದು;
(ಟಿ) ಬಸವ ಕಲ್ಕಾಣವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ, ಯಾತ್ರಾಸ್ಥಳವನ್ನಾಗಿ ಮತ್ತು ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಮಾಡುವ ಮತ್ತು ಜಗಜ್ಯೋತಿ (ಶ್ರೀ ಬಸವೇಶ್ವರರ ವಚನ-ಸಿದ್ದಾಂತಗಳ ಚಿಂತನ ಹಾಗೂ ಪ್ರಚಾರದ ಕೇಂದ್ರವನ್ನಾಗಿ ಮತ್ತು ಬಸವ ಧರ್ಮವನ್ನು, ಜಗಜ್ಕೋತಿ ಬಸವೇಶ್ವರರ ವಚನ ಸಾಹಿತ್ಯ ಮಾತ್ರವಲ್ಲದೆ, ಅವರ ಸಮಕಾಲೀನರ ಹಾಗೂ ಶಿಷ್ಕರ ವಚನ ಸಾಹಿತ್ಯವನ್ನು ಪ್ರಚಾರ ಮಾಡುವ ದೃಷ್ಟಿಯಿಂದ ಮತ್ತು ಜಗಜ್ಯೋತಿ (ಶ್ರೀ ಬಸವೇಶ್ವರರ, ಅವರ ಸಮಕಾಲೀನರ ಮತ್ತು ಶಿಷ್ಕರ ಜೀವನ ಮತ್ತು ಧರ್ಮಕ್ಕೆ ಸಂಬಂಧಪಟ್ಟ ಇತರ ಮಹತ್ವದ ಸ್ಥಳಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಹಾಗೂ ಬಸವ ತತ್ವಗಳ ಅಧ್ಯಯನಕ್ಕಾಗಿ ಶೈಕ್ಷಣಿಕ ಮತ್ತು ಸಂಶೋಧನಾ ಕೇಂದ್ರದ ಮತ್ತು ಆ ವಿಷಯಕ್ಕೆ ಸಂಬಂಧಪಟ್ಟಂತೆ ವಿಶಿಷ್ಟ ಗ್ರಂಥಾಲಯದ ಸ್ಥಾಪನೆಗಾಗಿ, ಉಪಬಂಧಕಲ್ಪಿಸುವುದು ಯುಕ್ತ ಹಾಗೂ ಆನುಷಂಗಿಕವೆಂದು ಮಂಡಳಿಯು ಅಭಿಪ್ರಾಯಪಡುವಂಥ ಇತರ ಯಾವುವೇ ವಿಷಯಗಳು;
(ಯು) ಮಂಡಳಿಯ ಪ್ರಾದೇಶಿಕ ಪರಿಮಿತಿಯೊಳಗಿನ ಐತಿಹಾಸಿಕ ಮತ್ತು ಪರಂಪರೆಯ ಯಾವುದೇ ಸ್ಥಳದಲ್ಲಿ ಮಣ್ಣಿನಲ್ಲಿ ಹೂತು ಹೋಗಿವೆ ಎಂದು ನಂಬಲಾದ ಪ್ರಾಚೀನ ಸ್ಮಾರಕಗಳ ಯಾವುವಾದರೂ ಇದ್ದರೆ ಅವನ್ನು ಭೂಮಿಯಿಂದ ಹೊರಗೆ ತೆಗೆಯುವುದಕ್ಕಾಗಿ ಉತ್ಪನನ ಮತ್ತು ಪುರಾತತ್ವ ಸ್ವರೂಪದ ಅನ್ವೇಷಣೆ:
ಪರಂತು, ಈ ಖಂಡದಲ್ಲಿ ಒಳಗೊಂಡಿರುವುದು ಯಾವುದೂ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಅಧಿನಿಯಮ, 1958ರ (1958ರ ಕೇಂದ್ರ ಅಧಿನಿಯಮ, 24) ಉಪಬಂಧಗಳನ್ನು ಅಧ್ಯಾರೋಹಿಸುತ್ತದೆಂದು ಭಾವಿಸತಕ್ಕದ್ದಲ್ಲ.
(2) (1ನೇ ಉಪ-ಪ್ರಕರಣದಡಿ ಸಿದ್ಧಪಡಿಸಲಾದ ಅಭಿವೃದ್ಧಿ ಯೋಜನೆಯನ್ನು ಆಯುಕ್ತರು ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡತಕ್ಕದ್ದು. ರಾಜ್ಯ ಸರ್ಕಾರವು, ಮಾರ್ಪಾಟುಗಳ ಸಹಿತವಾಗಿ ಅಥವಾ ಯಾವುವೇ ಮಾರ್ಪಾಟುಗಳಿಲ್ಲದೆ ಯೋಜನೆಯನ್ನು ಅನುಮೋದಿಸಬಹುದು.
(3) (2ನೇ ಉಪ-ಪ್ರಕರಣದಡಿ ಅಭಿವೃದ್ಧಿ ಯೋಜನೆಯನ್ನು ಅನುಮೋದಿಸಿದ ತರುವಾಯ, ರಾಜ್ಯ ಸರ್ಕಾರವು ಮಂಡಳಿಯ ಶಿಪಾರಸುಗಳ ಮೇಲೆ ಕಾಲ ಕಾಲಕ್ಕೆ ತಾನು ಅವಶ್ಯಕವೆಂದು ಭಾವಿಸುವಂಥ ಮಾರ್ಪಾಟುಗಳನ್ನು ಯೋಜನೆಯಲ್ಲಿ ಮಾಡಬಹುದು.
() ಈ ಪ್ರಕರಣದಡಿ ರಾಜ್ಯ ಸರ್ಕಾರವು ಅನುಮೋದಿಸಿದ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತ ಗೊಳಿಸುವುದಕ್ಕಾಗಿ ಕಾಮಗಾರಿಗಳನ್ನು ಕೈಗೊಳ್ಳುವ ಮತ್ತು ವೆಚ್ಚವನ್ನು ಮಾಡುವ ಅಧಿಕಾರವನ್ನು ಮಂಡಳಿಯು ಹೊಂದಿರತಕ್ಕದ್ದು.