(1) ಈ ಅಧ್ಯಾದೇಶದ ಪ್ರಾರಂಭದ ತರುವಾಯ ಆದಷ್ಟು ಬೇಗನೇ, ಈ ಅಧ್ಯಾದೇಶದ ಉದ್ದೇಶಗಳಿಗಾಗಿ, "ಬಸವಕಲ್ಯಾಣ ಅಭಿವೃದ್ಧಿ ಮಂಡಳಿ' ಎಂದು ಕರೆಯಲಾಗುವ ಒಂದು ಮಂಡಳಿಯನ್ನು ಸ್ಥಾಪಿಸತಕ್ಕದ್ದು.
(2) ಮಂಡಳಿಯು ಕಾಲಕಾಲಕ್ಕೆ ನಿರ್ಧರಿಸಬಹುದಾದಂಥ ಸ್ಥಳದಲ್ಲಿ ತನ್ನ ಕೇಂದ್ರ ಕಾರ್ಯಸ್ಥಾನವನ್ನು ಹೊಂದಿರತಕ್ಕದ್ದು.
(3) ಮಂಡಳಿಯು, ಶಾಶ್ವತ ಉತ್ತರಾಧಿಕಾರ ಮತ್ತು ಸಾಮಾನ್ಯ ಮೊಹರನ್ನು ಹೊಂದಿರುವ, ಚರ ಮತ್ತು ಸ್ಥಿರ ಸ್ಪತ್ತುಗಳೆರಡನ್ನು ಆರ್ಜಿಸುವ, ಧಾರಣ ಮಾಡುವ ಹಾಗೂ ವಿಲೆ ಮಾಡುವ ಮತ್ತು ಕರಾರು ಮಾಡಿಕೊಳ್ಳುವ ಅಧಿಕಾರವನ್ನು ಹೊಂದಿರುವ, ಮೇಲೆ ಹೇಳಿದ ಹೆಸರಿನ ಒಂದು ನಿಗಮಿತ ನಿಕಾಯವಾಗಿರತಕ್ಕದ್ದು ಮತ್ತು ಸದರಿ ಹೆಸರಿನಿಂದ ದಾವೆ ಹೂಡತಕ್ಕದ್ದು ಮತ್ತು ದಾವೆಗೆ ಗುರಿಯಾಗತಕ್ಕದ್ದು.
(4) ಮಂಡಳಿಯು ಈ ಮುಂದಿನ ಸದಸ್ಯರನ್ನು ಒಳಗೊಂಡಿರತಕ್ಕದ್ದು, ಎಂದರೆ:-
(ಎ) ಮುಖ್ಯಮಂತ್ರಿಗಳು, ಇವರು ಮಂಡಳಿಯ ಪದನಿಮಿತ್ತ ಅಧ್ಯಕ್ಷರಾಗಿರತಕ್ಕದ್ದು;
(ಬಿ) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರದಲ್ಲಿರುವ ಸಚಿವರು;
(8) ಕಂದಾಯ ಇಲಾಖೆಯ ಪ್ರಭಾರದಲ್ಲಿರುವ ಸಚಿವರು;
(ಡ) ಬಸವಕಲ್ಯಾಣ ಕ್ಷೇತ್ರವನ್ನು ಭಾಗಶಃ ಅಥವಾ ಪೂರ್ಣವಾಗಿ ಪ್ರತಿನಿಧಿಸುವ ಹಾಗೂ ಅದರ ಎಲ್ಲೆಗಳೊಳಗೆ ತಮ್ಮ ಚುನಾವಣಾ ಕ್ಷೇತ್ರವನ್ನು ಹೊಂದಿರುವ ಸಂಸತ್ ಸದಸ್ಯರು ಮತ್ತು ರಾಜ್ಯ ವಿಧಾನಮಂಡಲದ ಸದಸ್ಯರು;
(ಇ) ಅಧ್ಯಕ್ಷರು, ಬಸವಸಮಿತಿ, ಬಸವಭವನ, ಬೆಂಗಳೂರು;
(ಎಫ್) ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾ, ಬೆಂಗಳೂರು;
(ಜಿ) ಶರಣ ಬಸವೇಶ್ವರರು ಅಂಗೀಕರಿಸಿ ಸಾರಿದ ತತ್ವಗಳ ಅನುಷ್ಠಾನಕ್ಕಾಗಿ ದುಡಿದಂಥ, ರಾಜ್ಯಸರ್ಕಾರವು ನಾಮನಿರ್ದೆಶಿಸಿದ ಐವರಿಗೆ ಮೀರದ ಸದಸ್ಕರು, ಅವರುಗಳಲ್ಲಿ ಒಬ್ಬರು ಮುಖ್ಯ ಇಂಜಿನಿಯರ್, ಸಿವಿಲ್ ಹುದ್ದೆಯನ್ನು ಹೊಂದಿದ್ದ ವ್ಯಕ್ತಿಯಾಗಿರತಕ್ಕದ್ದು;
(ಎಚ್) ಸರ್ಕಾರದ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ;
(ಐ) ಸರ್ಕಾರದ ಕಾರ್ಯದರ್ಶಿ, ಕಂದಾಯ ಇಲಾಖೆ;
(ಜಿ) ಸರ್ಕಾರದ ಕಾರ್ಯದರ್ಶಿ, ಹಣಕಾಸು ಇಲಾಖೆ;
(ಕೆ) ಸರ್ಕಾರದ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ/ಪೌರಾಡಳಿತ ಇಲಾಖೆ;
(ಎಲ್) ನಿರ್ದೇಶಕರು, ಪೌರಾಡಳಿತ ಇಲಾಖೆ;
(ಎಂ) ನಿರ್ದೇಶಕರು, ಪಟ್ಟಣ ಮತ್ತು ಗ್ರಾಮಾಂತರ ಯೋಜನೆ;
(ಎನ್) ಜಿಲ್ಲಾಧಿಕಾರಿಗಳು, ಬೀದರ್ ಜಿಲ್ಲೆ;
(ಓ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಬೀದರ್;
(ಪಿ) ಅಧ್ಯಕ್ಷರು, ಪುರಸಭಾ ಪರಿಷತ್, ಬಸವಕಲ್ಯಾಣ;
(ಕ್ಕೂ) ನಿರ್ದೇಶಕರು, ಕರ್ನಾಟಕ ಪ್ರಾಚ್ಯವಸ್ತು ಮತ್ತು ವಸ್ತು ಸಂಗ್ರಹಾಲಯ ಇಲಾಖೆ;
(ಆರ್) ರಾಜ್ಯಸರ್ಕಾರದಿಂದ ನಾಮ ನಿರ್ದೇಶಿತರಾದ ಐವರನ್ನು ಮೀರದಂಥ ಇತರ ಪದನಿಮಿತ್ತ ಸದಸ್ಯರು;
(ಎಸ್) ಮಂಡಳಿಯ ಆಯುಕ್ತರು, ಇವರು ಸದಸ್ಯ-ಕಾರ್ಯದರ್ಶಿಯಾಗಿರತಕ್ಕದ್ದು.