(1) ಯಾವುದೇ ಪದ್ಧತಿ, ಸಂಪ್ರದಾಯ, ರೂಢಿಯಲ್ಲಿ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಸೃಜಿಸಲಾದ ಮತ್ತು ಅಸ್ತಿತ್ವದಲ್ಲಿರುವ MAB ನಿಬಂಧನೆಗಳಲ್ಲಿ ಏನೇ ಇದ್ದರೂ, ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಬಸವಕಲ್ಕಾಣದಲ್ಲಿರುವ ಎಲ್ಲಾ ಅಥವಾ ಯಾವುವೇ ಪರಂಪರೆಯ ತಾಣಗಳ ಸಂಪೂರ್ಣ ನಿಯಂತ್ರಣ, ಆಡಳಿತ ವ್ಯವಸ್ಥೆ ಮತ್ತು ಮೇಲ್ವಿಚಾರಣೆಯು ರಾಜ್ಯ ಸರ್ಕಾರದಲ್ಲಿ ನಿಹಿತವಾಗತಕ್ಕದ್ದು ಮತ್ತು ಆ ತರುವಾಯ ರಾಜ್ಯಸರ್ಕಾರವು ಅಧಿಸೂಚಿಸಿದ ದಿನಾಂಕದಿಂದ ಅದು ಮಂಡಳಿಗೆ ವರ್ಗಾವಣೆಯಾಗತಕ್ಕದ್ದು.
Q) ರಾಜ್ಯ ಸರ್ಕಾರವು ತಾತ್ಕಾಲಿಕ ಉಪಬಂಧಗಳನ್ನು ಕಲ್ಪಿಸುವುದು ಅವಶ್ಯವೆಂದು ಭಾವಿಸಿದರೆ, ಅದು ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ತಾತ್ಕಾಲಿಕ ಉಪಬಂಧಗಳನ್ನು ರಚಿಸಬಹುದು.