ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ, ನಿಯಮಿಸಬಹುದಾದಂಥ ಕಾರ್ಯವಿಧಾನವನ್ನು ಅನುಸರಿಸಿದ ತರುವಾಯ ಅನುಸೂಚಿಯಲ್ಲಿ ಯಾವುದೇ ನಮೂದನ್ನು ಸೇರಿಸಿ ಅಥವಾ ಮಾರ್ಪಡಿಸಿ ಅದನ್ನು ತಿದ್ದುಪಡಿಮಾಡಬಹುದು.
(1) ಮಂಡಳಿಯು, ಅದರ ರಚನೆಯಾದ ಮೇಲೆ, ಆದಷ್ಟು ಬೇಗನೆ ಬಸವಕಲ್ಯಾಣವನ್ನು ಅಂತಾರಾಷ್ಟ್ರೀಯ ಯಾತ್ರಾ ಸ್ಥಳವನ್ನಾಗಿ ಮತ್ತು ಸಾಂಸ್ಕೃತಿಕ ಹಾಗೂ ಪ್ರವಾಸಿ ಕೇಂದ್ರವನ್ನಾಗಿ ಮತ್ತು ಜಗಜ್ಯೋತಿ ಶ್ರೀ ಬಸವೇಶ್ವರರ, ಅವರ ಸಮಕಾಲೀನರ ಮತ್ತು ಶಿಷ್ಕರ ವಚನ-ಸಿದ್ದಾಂತಗಳ ಚಿಂತನ ಹಾಗೂ ಪ್ರಚಾರದ ಕೇಂದ್ರವನ್ನಾಗಿ ಮಾಡಿ ಅಭಿವೃದ್ಧಿಗೊಳಿಸಲು ಯೋಜನೆಯನ್ನು ಸಿದ್ಧಪಡಿಸತಕ್ಕದ್ದು. ಅಭಿವೃದ್ಧಿ ಯೋಜನೆಯು ಈ ಮುಂದಿನವುಗಳನ್ನು ಒಳಗೊಂಡಿರಬಹುದು, ಎಂದರೆ:-
(ಎ) ಯಾವುದೇ ಪರಂಪರೆ ತಾಣದ ಅಥವಾ ನಿರ್ಮಿತಿಯ ಮರುಜೋಡಣೆ ನಿರ್ಮಾಣ ಮತ್ತು ಅದರ ನಿರ್ವಹಣೆಗಾಗಿ ಕಾರ್ಯಕ್ರಮಗಳು;
(ಬಿ) ಮಂಡಳಿಯ ಅಭಿಪ್ರಾಯದಲ್ಲಿ ಅಭಿವೃದ್ಧಿ ಯೋಜನೆಯನ್ನು ಕಾರ್ಯಗತಗೊಳಿಸಲು ಅವಶ್ಯವಾದ ಭೂಮಿಯನ್ನು, ಭೂಸ್ಹಾಧೀನ ಅಥವಾ ಖರೀದಿ ಅಥವಾ ವಿನಿಮಯದ ಮೂಲಕ ಅಥವಾ ಅನ್ಯಥಾ ಆರ್ಜಿಸುವುದಕ್ಕಾಗಿ ಪ್ರಸ್ತಾವಗಳು;
(ಸಿ) ಸಾರ್ವಜನಿಕ ಉದ್ಯಾನವನಗಳು, ಫಲಪುಷ್ಪ ತೋಟಗಳು ಅಥವಾ ಮೃಗಾಲಯಗಳು, ಕಾರಂಜಿ ಬನಗಳು, ಕೃತಕ ಜಲಪಾತಗಳು, ವನ್ಯಮೃಗ ಉದ್ಯಾನವನಗಳು, ದೋಣಿ ವಿಹಾರ ಅಥವಾ ಇತರ ಜಲ ಕ್ರೀಡಾ ಸೌಲಭ್ಯವಿರುವ ಸರೋವರಗಳನ್ನು ಅಥವಾ ಇಂಥವೇ ಪ್ರವಾಸಿಗಳಿಗೆ ಆಕರ್ಷಣೆಯನ್ನುಂಟುಮಾಡುವಂಥ ಇತರ ಕೇಂದ್ರಗಳನ್ನು ನಿರ್ಮಿಸುವುದು;
(ಡಿ) ವಿವಿಧ ವರ್ಗದ ಪ್ರವಾಸಿಗರ ಅವಶ್ಯಕತೆ ಪೂರೈಸಲು ಛತ್ರಗಳು, ವಸತಿ-ಗೃಹಗಳು, ಕುಠೀರಗಳು, ಹೋಟೆಲುಗಳು, ರೆಸ್ಟೋರಾಗಳು ಮತ್ತು ಭೋಜನಾಲಯಗಳನ್ನು ನಿರ್ಮಿಸುವುದು;
(ಇ) ಅವಶ್ಯಕ ಸಾಲು ಅಂಗಡಿಗಳನ್ನು ಅಥವಾ ವಾಣಿಜ್ಯ-ಸಂಕೀರ್ಣಗಳನ್ನು ನಿರ್ಮಿಸುವುದು;
(ಎಫ್) ಅನುಭವ ಮಂಟಪದ ಮಾದರಿಯಲ್ಲಿ ಒಂದು ಸಭಾಂಗಣವನ್ನು ನಿರ್ಮಿಸುವುದು;
(ಜಿ) ಆಯಕಟ್ಟಿನ ಸ್ಥಳಗಳಲ್ಲಿ ಪ್ರಾರ್ಥನಾ ಮಂದಿರಗಳ ಮತ್ತು ಧ್ಯಾನ ಮಂದಿರಗಳ ನಿರ್ಮಾಣ;
(ಎಚ್) We ಪ್ರಕರಣದಲ್ಲಿ ಪರಿಭಾಷಿಸಲಾದಂತೆ ಸೌಕರ್ಯಗಳನ್ನು ಕಲ್ಪಿಸುವುದು;
(ಐ) ಕಟ್ಟಡಗಳ ನಿರ್ಮಾಣ ಹಾಗೂ ಪುನರ್-ನಿರ್ಮಾಣವೂ ಸೇರಿದಂತೆ ಎಲ್ಲಾ ಅಥವಾ ಯಾವುದೇ ಭೂಮಿಯ ವಿನ್ಯಾಸ ಮತ್ತು ಮರು AWA;
(ಜೆ) ಚರಂಡಿ ವ್ಯವಸ್ಥೆ, ವಿದ್ಯುಚ್ಛಕ್ತಿ ಮತ್ತು ನೀರು ಪೂರೈಕೆ ಮತ್ತು ನೈರ್ಮಲ್ಯ ವ್ಯವಸ್ಥೆಯನ್ನು ಒದಗಿಸುವುದು;
(ಕೆ) ಮಂಡಳಿಯು, ಸಾಧಾರಣವಾಗಿ ತನ್ನ ಯೋಜನಾ ಕಾರ್ಯಕ್ಕೆ ಅನುಕೂಲವಾಗುವಂತೆ ಮತ್ತು ಮುಖ್ಯವಾಗಿ ಉತ್ತಮ ನೀರು ಹರಿವಿನ ವ್ಯವಸ್ಥೆಯನ್ನು ಒದಗಿಸಲು, ಯಾವುದೇ ಭೂಮಿಯನ್ನು ಎತ್ತರಿಸುವುದು ಸೂಕ್ತವೆಂದು ಭಾವಿಸಿದರೆ ಅಂಥ ಭೂಮಿಯನ್ನು ಎತ್ತರಿಸುವುದು;
(ಎಲ್) ಬಸವ ಕಲ್ಕಾಣ ಪ್ರದೇಶದಲ್ಲಿ ಅಥವಾ ಅದಕ್ಕೆ ಲಗತ್ತಾಗಿರುವ ಪ್ರದೇಶದಲ್ಲಿ ಉತ್ತಮ ಗಾಳಿ-ಬೆಳಕು ದೊರಕುವಂತೆ ಖಾಲಿ ಜಾಗಗಳನ್ನು ಬಿಡುವುದು;
(ಎಮ್) ಜನರ ವಾಸಕ್ಕೆ ಯೋಗ್ಯವಲ್ಲದ ಹಾಗೂ ಅಭಿವೃದ್ಧಿ ಯೋಜನೆಗೆ ತಕ್ಕದಲ್ಲದ ಎಲ್ಲ ಕಟ್ಟಡಗಳನ್ನು ಕೆಡವುವುದು;
(ಎನ್) ಅಡಚಣೆಯನ್ನುಂಟುಮಾಡುವ ಕಟ್ಟಡಗಳನ್ನು ಅಥವಾ ಕಟ್ಟಡಗಳ ಭಾಗಗಳನ್ನು ಕೆಡವುವುದು;
(ಒ) ಕಟ್ಟಡಗಳ ನಿರ್ಮಾಣ ಮತ್ತು ಪುನರ್ನಿರ್ಮಾಣ, ಅವುಗಳ ನಿರ್ವಹಣೆ ಮತ್ತು ಸಂರಕ್ಷಣೆ;
(ಪ) 26ನೇ ಪ್ರಕರಣದಲ್ಲಿನ ಉಪಬಂಧಗಳಿಗೆ ಒಳಪಟ್ಟು, ಯೋಜನೆಯಲ್ಲಿ ಸೇರಿರುವ ಯಾವುದೇ ಸ್ವತ್ತನ್ನು ಮಾರಾಟ ಮಾಡುವುದು, ಬಾಡಿಗೆಗೆ ಕೊಡುವುದು, ಅಥವಾ ವಿನಿಮಯ ಮಾಡಿಕೊಳ್ಳುವುದು;
(ಕ್ಯು) ಮಂಡಲಿಯ ನೌಕರರಿಗೆ ವಸತಿ ಸೌಲಭ್ಯವನ್ನು ಒದಗಿಸುವುದು;
(ಆರ್) ಸಂಪರ್ಕ ಮತ್ತು ಸಾಗಣೆ ಸೌಲಭ್ಯಗಳನ್ನು ಒದಗಿಸುವುದು;
(ಎಸ್) ಅಭಿವೃದ್ಧಿ ಯೋಜನೆಯ ಭೌಗೋಳಿಕ ಪ್ರದೇಶದಲ್ಲಿ ಈಗಿರುವ ಮತ್ತು ಮುಂದುವರಿಸಲು ಅನುಮತಿಸಬಹುದಾದಂಥ ಮತೀಯ ಸಂಸ್ಥೆಗಳೊಂದಿಗೆ, ಅವು ಅಭಿವೃದ್ಧಿ ಯೋಜನೆಯ ಪರಿಕಲ್ಪನೆಗೆ ಸರಿಹೊಂದುತ್ತಿರುವವರೆಗೆ ಹೊಂದಾಣಿಕೆಗಳು ಮತ್ತು ಒಪ್ಪಂದಗಳನ್ನು ಮಾಡಿಕೊಳ್ಳುವುದು;
(ಟಿ) ಬಸವ ಕಲ್ಕಾಣವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ, ಯಾತ್ರಾಸ್ಥಳವನ್ನಾಗಿ ಮತ್ತು ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಮಾಡುವ ಮತ್ತು ಜಗಜ್ಯೋತಿ (ಶ್ರೀ ಬಸವೇಶ್ವರರ ವಚನ-ಸಿದ್ದಾಂತಗಳ ಚಿಂತನ ಹಾಗೂ ಪ್ರಚಾರದ ಕೇಂದ್ರವನ್ನಾಗಿ ಮತ್ತು ಬಸವ ಧರ್ಮವನ್ನು, ಜಗಜ್ಕೋತಿ ಬಸವೇಶ್ವರರ ವಚನ ಸಾಹಿತ್ಯ ಮಾತ್ರವಲ್ಲದೆ, ಅವರ ಸಮಕಾಲೀನರ ಹಾಗೂ ಶಿಷ್ಕರ ವಚನ ಸಾಹಿತ್ಯವನ್ನು ಪ್ರಚಾರ ಮಾಡುವ ದೃಷ್ಟಿಯಿಂದ ಮತ್ತು ಜಗಜ್ಯೋತಿ (ಶ್ರೀ ಬಸವೇಶ್ವರರ, ಅವರ ಸಮಕಾಲೀನರ ಮತ್ತು ಶಿಷ್ಕರ ಜೀವನ ಮತ್ತು ಧರ್ಮಕ್ಕೆ ಸಂಬಂಧಪಟ್ಟ ಇತರ ಮಹತ್ವದ ಸ್ಥಳಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಹಾಗೂ ಬಸವ ತತ್ವಗಳ ಅಧ್ಯಯನಕ್ಕಾಗಿ ಶೈಕ್ಷಣಿಕ ಮತ್ತು ಸಂಶೋಧನಾ ಕೇಂದ್ರದ ಮತ್ತು ಆ ವಿಷಯಕ್ಕೆ ಸಂಬಂಧಪಟ್ಟಂತೆ ವಿಶಿಷ್ಟ ಗ್ರಂಥಾಲಯದ ಸ್ಥಾಪನೆಗಾಗಿ, ಉಪಬಂಧಕಲ್ಪಿಸುವುದು ಯುಕ್ತ ಹಾಗೂ ಆನುಷಂಗಿಕವೆಂದು ಮಂಡಳಿಯು ಅಭಿಪ್ರಾಯಪಡುವಂಥ ಇತರ ಯಾವುವೇ ವಿಷಯಗಳು;
(ಯು) ಮಂಡಳಿಯ ಪ್ರಾದೇಶಿಕ ಪರಿಮಿತಿಯೊಳಗಿನ ಐತಿಹಾಸಿಕ ಮತ್ತು ಪರಂಪರೆಯ ಯಾವುದೇ ಸ್ಥಳದಲ್ಲಿ ಮಣ್ಣಿನಲ್ಲಿ ಹೂತು ಹೋಗಿವೆ ಎಂದು ನಂಬಲಾದ ಪ್ರಾಚೀನ ಸ್ಮಾರಕಗಳ ಯಾವುವಾದರೂ ಇದ್ದರೆ ಅವನ್ನು ಭೂಮಿಯಿಂದ ಹೊರಗೆ ತೆಗೆಯುವುದಕ್ಕಾಗಿ ಉತ್ಪನನ ಮತ್ತು ಪುರಾತತ್ವ ಸ್ವರೂಪದ ಅನ್ವೇಷಣೆ:
ಪರಂತು, ಈ ಖಂಡದಲ್ಲಿ ಒಳಗೊಂಡಿರುವುದು ಯಾವುದೂ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಅಧಿನಿಯಮ, 1958ರ (1958ರ ಕೇಂದ್ರ ಅಧಿನಿಯಮ, 24) ಉಪಬಂಧಗಳನ್ನು ಅಧ್ಯಾರೋಹಿಸುತ್ತದೆಂದು ಭಾವಿಸತಕ್ಕದ್ದಲ್ಲ.
(2) (1ನೇ ಉಪ-ಪ್ರಕರಣದಡಿ ಸಿದ್ಧಪಡಿಸಲಾದ ಅಭಿವೃದ್ಧಿ ಯೋಜನೆಯನ್ನು ಆಯುಕ್ತರು ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡತಕ್ಕದ್ದು. ರಾಜ್ಯ ಸರ್ಕಾರವು, ಮಾರ್ಪಾಟುಗಳ ಸಹಿತವಾಗಿ ಅಥವಾ ಯಾವುವೇ ಮಾರ್ಪಾಟುಗಳಿಲ್ಲದೆ ಯೋಜನೆಯನ್ನು ಅನುಮೋದಿಸಬಹುದು.
(3) (2ನೇ ಉಪ-ಪ್ರಕರಣದಡಿ ಅಭಿವೃದ್ಧಿ ಯೋಜನೆಯನ್ನು ಅನುಮೋದಿಸಿದ ತರುವಾಯ, ರಾಜ್ಯ ಸರ್ಕಾರವು ಮಂಡಳಿಯ ಶಿಪಾರಸುಗಳ ಮೇಲೆ ಕಾಲ ಕಾಲಕ್ಕೆ ತಾನು ಅವಶ್ಯಕವೆಂದು ಭಾವಿಸುವಂಥ ಮಾರ್ಪಾಟುಗಳನ್ನು ಯೋಜನೆಯಲ್ಲಿ ಮಾಡಬಹುದು.
() ಈ ಪ್ರಕರಣದಡಿ ರಾಜ್ಯ ಸರ್ಕಾರವು ಅನುಮೋದಿಸಿದ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತ ಗೊಳಿಸುವುದಕ್ಕಾಗಿ ಕಾಮಗಾರಿಗಳನ್ನು ಕೈಗೊಳ್ಳುವ ಮತ್ತು ವೆಚ್ಚವನ್ನು ಮಾಡುವ ಅಧಿಕಾರವನ್ನು ಮಂಡಳಿಯು ಹೊಂದಿರತಕ್ಕದ್ದು.
(1) ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ, 1961 ರಲ್ಲಿ (1963ರ ಕರ್ನಾಟಕ ಅಧಿನಿಯಮ 11) ಮತ್ತು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿನಿಯಮ, 1987 ರಲ್ಲಿ (1987ರ ಕರ್ನಾಟಕ ಅಧಿನಿಯಮ 31) ಏನೇ ಒಳಗೊಂಡಿದ್ದರೂ, ಮಂಡಳಿಯ ರಚನೆಯ ದಿನಾಂಕದಂದು ಮತ್ತು ಆ ದಿನಾಂಕದಿಂದ, ಮಂಡಳಿಯನ್ನು ಬಸವ ಕಲ್ಯಾಣದ ನಗರಾಭಿವೃದ್ಧಿ ಪ್ರಾಧಿಕಾರವೆಂದು ಭಾವಿಸತಕ್ಕದ್ದು ಮತ್ತು ಮಂಡಳಿಯು, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿನಿಯಮ, 1987ರ (1987ರ ಕರ್ನಾಟಕ ಅಧಿನಿಯಮ 34) 3ನೇ ಪ್ರಕರಣದ ಅಡಿಯಲ್ಲಿ ರಚಿಸಿದ ಪ್ರಾಧಿಕಾರವಾಗಿದ್ದರೆ ಹೇಗೋ ಹಾಗೆ ನಗರಾಭಿವೃದ್ಧಿ ಪ್ರಾಧಿಕಾರದ ಎಲ್ಲಾ ಅಧಿಕಾರಗಳನ್ನು ಹೊಂದಿರತಕ್ಕದ್ದು ಮತ್ತು ಎಲ್ಲಾ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು.
(2) ಬಸವ ಕಲ್ಕಾಣ ಪಟ್ಟಣ ಯೋಜನೆ ಪ್ರಾಧಿಕಾರದ ಸಿಬ್ಬಂದಿ, ಆಸ್ತಿ ಮತ್ತು ಹೊಣೆಗಾರಿಕೆಗಳು ಬಸವ ಕಲ್ಕಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗವಾಗತಕ್ಕದ್ದು.
ರಾಜ್ಯ ಸರ್ಕಾರವು ಮಂಡಳಿಯ ಶಿಫಾರಸ್ಸಿನ ಮೇಲೆ ಅಥವಾ ಅನ್ಯಥಾ, ಬಸವ ಕಲ್ಯಾಣದ ನಿರ್ವಹಣೆಗಾಗಿ ಉಪಬಂಧಗಳನ್ನು ರಚಿಸತಕ್ಕದ್ದು, ಈ ಉಪಬಂಧಗಳಲ್ಲಿ ಅದರ ಪರಂಪರೆ ತಾಣಗಳೂ ಸೇರಿದಂತೆ ಮಂಡಳಿಯ ಸ್ವತ್ತನ್ನು ಬಳಸಿಕೊಳ್ಳಬಹುದಾದ ರೀತಿ, ಪಟ್ಟಣಕ್ಕೆ ಬರುವ ಭಕ್ತರು, ಯಾತ್ರಿಕರು, ಪ್ರವಾಸಿಗರು ಮತ್ತು ಇತರ ಸಂದರ್ಶಕರು ಬಳಸಿಕೊಳ್ಳಬಹುದಾದ ವಿವಿಧ ಸೌಲಭ್ಯಗಳಿಗಾಗಿ ಅವರಿಂದ ವಸೂಲು ಮಾಡಬಹುದಾದ ದರಗಳು, ಶುಲ್ಕಗಳು ಅಥವಾ ಇತರ ವೆಚ್ಚಗಳು ಮತ್ತು ಪರಂಪರೆ ತಾಣಗಳ ಆವರಣಕ್ಕೆ ಸಂಬಂಧಿಸಿದ ಯುಕ್ತವಾದಂಥ ಇತರ ವಿಷಯಗಳು; ಭೂ ಕಂದಾಯದ ಬಾಕಿ ಎಂಬಂತೆ ಬಾಡಿಗೆ ಅಥವಾ ನಷ್ಟಪರಿಹಾರವನ್ನು ವಸೂಲು ಮಾಡುವ ಅಧಿಕಾರ ಮುಂತಾದ ಇತರ ವಿಷಯಗಳು ಒಳಗೊಂಡಿರತಕ್ಕದ್ದು.
(1) ಯಾವುದೇ ಪದ್ಧತಿ, ಸಂಪ್ರದಾಯ, ರೂಢಿಯಲ್ಲಿ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಸೃಜಿಸಲಾದ ಮತ್ತು ಅಸ್ತಿತ್ವದಲ್ಲಿರುವ MAB ನಿಬಂಧನೆಗಳಲ್ಲಿ ಏನೇ ಇದ್ದರೂ, ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಬಸವಕಲ್ಕಾಣದಲ್ಲಿರುವ ಎಲ್ಲಾ ಅಥವಾ ಯಾವುವೇ ಪರಂಪರೆಯ ತಾಣಗಳ ಸಂಪೂರ್ಣ ನಿಯಂತ್ರಣ, ಆಡಳಿತ ವ್ಯವಸ್ಥೆ ಮತ್ತು ಮೇಲ್ವಿಚಾರಣೆಯು ರಾಜ್ಯ ಸರ್ಕಾರದಲ್ಲಿ ನಿಹಿತವಾಗತಕ್ಕದ್ದು ಮತ್ತು ಆ ತರುವಾಯ ರಾಜ್ಯಸರ್ಕಾರವು ಅಧಿಸೂಚಿಸಿದ ದಿನಾಂಕದಿಂದ ಅದು ಮಂಡಳಿಗೆ ವರ್ಗಾವಣೆಯಾಗತಕ್ಕದ್ದು.
Q) ರಾಜ್ಯ ಸರ್ಕಾರವು ತಾತ್ಕಾಲಿಕ ಉಪಬಂಧಗಳನ್ನು ಕಲ್ಪಿಸುವುದು ಅವಶ್ಯವೆಂದು ಭಾವಿಸಿದರೆ, ಅದು ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ತಾತ್ಕಾಲಿಕ ಉಪಬಂಧಗಳನ್ನು ರಚಿಸಬಹುದು.
(1) ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದಾಗ್ಕೂ, ಮಂಡಳಿಯ ಪೂರ್ವಾನುಮತಿಯೊಂದಿಗೆ ಹೊರತು, ಬಸವಕಲ್ಕಾಣದೊಳಗೆ, ಮಂಡಳಿಯು ಕಾಲಕಾಲಕ್ಕೆ ಅಧಿಸೂಚನೆಯ ಮೂಲಕ ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯ ಮೂಲಕ ನಿರ್ದಿಷ್ಟಪಡಿಸಬಹುದಾದಂಥ ಮಾದರಿಗಳ ಯಾವುದೇ ಅಭಿವೃದ್ಧಿಯನ್ನು ಯಾವುದೇ ಪ್ರಾಧಿಕಾರ ಅಥವಾ ವ್ಯಕ್ತಿಯು ಕೈಗೊಳ್ಳತಕ್ಕದ್ದಲ್ಲ.
() ಬಸವಕಲ್ಕಾಣದೊಳಗೆ, (1ನೇ ಉಪ ಪ್ರಕರಣದಲ್ಲಿ ಉಲ್ಲೇಖಿಸಿದ ಯಾವುದೇ ಅಭಿವೃದ್ಧಿ ಕೈಗೊಳ್ಳಲು, ಅಂಥ ಅಭಿವೃದ್ಧಿಗಾಗಿ ಮಂಡಳಿಯು ಅನುಮತಿಯನ್ನು ನೀಡಿದ್ದ ಹೊರತು, ಯಾವುದೇ ಸ್ಥಳೀಯ ಪ್ರಾಧಿಕಾರವು ಅನುಮತಿಯನ್ನು ನೀಡತಕ್ಕದ್ದಲ್ಲ.
(3) (1ನೇ ಉಪಪ್ರಕರಣದಲ್ಲಿ ಉಲ್ಲೇಖಿಸಿದ ಅಭಿವೃದ್ಧಿಯನ್ನು ಕೈಗೊಳ್ಳಲು ಇಚ್ಛಿಸುವ ಯಾವುದೇ ಪ್ರಾಧಿಕಾರ ಅಥವಾ ವ್ಯಕ್ತಿಯು ಅಂಥ ಅಭಿವೃದ್ಧಿಯನ್ನು ಕೈಗೊಳ್ಳಲು ಅನುಮತಿಯನ್ನು ಕೋರಿ ಲಿಖಿತಅರ್ಜಿಯನ್ನು ಮಂಡಳಿಗೆ ಸಲ್ಲಿಸತಕ್ಕದ್ದು.
(4) ಮಂಡಳಿಯು, ತಾನು ಅವಶ್ಯವೆಂದು ಭಾವಿಸುವಂಥ ವಿಚಾರಣೆಯನ್ನು ನಡೆಸಿದ ತರುವಾಯ, ತಾನು ವಿಧಿಸುವುದು ಸೂಕ್ತವೆಂದು ಭಾವಿಸಬಹುದಾದಂಥ ಷರತ್ತುಗಳೊಡನೆ ಅಥವಾ ಷರತ್ತುಗಳಿಲ್ಲದೆ ಅಂಥ ಅನುಮತಿಯನ್ನು ನೀಡಬಹುದು ಅಥವಾ ಅಂಥ ಅನುಮತಿಯನ್ನು ನೀಡಲು ನಿರಾಕರಿಸಬಹುದು.
(5) (4ನೇ ಉಪ ಪ್ರಕರಣದ ಅಡಿಯಲ್ಲಿಯ ಮಂಡಳಿಯ ತೀರ್ಮಾನದಿಂದ ಬಾಧಿತವಾದ ಯಾವುದೇ ಪ್ರಾಧಿಕಾರ ಅಥವಾ ವ್ಯಕ್ತಿಯು, ತೀರ್ಮಾನದ ದಿನಾಂಕದಿಂದ ಮೂವತ್ತು ದಿನಗಳೊಳಗೆ ಅಂಥ ತೀರ್ಮಾನದ ವಿರುದ್ಧ ರಾಜ್ಯ ಸರ್ಕಾರಕ್ಕೆ ಅಪೀಲನ್ನು ಸಲ್ಲಿಸಬಹುದು, ಅದರ ತೀರ್ಮಾನವು ಅಂತಿಮವಾಗಿರತಕ್ಕದ್ದು:
ಪರಂತು, ಅಂಥ ಅಪೀಲನ್ನು ಸಲ್ಲಿಸುವ ಬಾಧಿತವಾದ ಪ್ರಾಧಿಕಾರವು, ಕೇಂದ್ರ ಸರ್ಕಾರದ ಆಡಳಿತ ನಿಯಂತ್ರಣದಲ್ಲಿದ್ದರೆ, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದೊಡನೆ ಸಮಾಲೋಚನೆ ನಡೆಸಿದ ತರುವಾಯ ಅಪೀಲನ್ನು ತೀರ್ಮಾನಿಸತಕ್ಕದ್ದು.
(6) ಯಾವೊಬ್ಬ ವ್ಯಕ್ತಿ ಅಥವಾ ಪ್ರಾಧಿಕಾರವು (5ನೇ ಉಪ ಪ್ರಕರಣದಲ್ಲಿ ಮಾರ್ಪಡಿಸಲಾದಂತೆ (4ನೇ ಉಪ ಪ್ರಕರಣದ ಅಡಿಯಲ್ಲಿ ನೀಡಿದ ತೀರ್ಮಾನಕ್ಕೆ ವಿರುದ್ಧವಾಗಿ ಯಾವುದೇ ಕಾರ್ಯವನ್ನು ಕೈಗೊಂಡಿದ್ದರೆ, ಅಂಥ ತೀರ್ಮಾನಕ್ಕೆ ವಿರುದ್ಧವಾಗಿ ಕೈಗೊಂಡ ಯಾವುದೇ ಅಭಿವೃದ್ಧಿಯನ್ನು ಕೆಡಹುವ, ನಾಶಪಡಿಸುವ ಅಥವಾ ತೆಗೆದುಹಾಕುವ ಅಧಿಕಾರವನ್ನು ಮತ್ತು ಅಂಥ ಕೆಡಹುವ, ನಾಶಪಡಿಸುವ ಅಥವಾ ತೆಗೆದುಹಾಕುವ ವೆಚ್ಚವನ್ನು ಸಂಬಂಧಪಟ್ಟ ವ್ಯಕ್ತಿಯಿಂದ ಅಥವಾ ಪ್ರಾಧಿಕಾರದಿಂದ ವಸೂಲ್ಮಾಡುವ ಅಧಿಕಾರವನ್ನು ಮಂಡಳಿಯು ಹೊಂದಿರತಕ್ಕದ್ದು.
24, ಪ್ರವೇಶಕ್ಕೆ ಅಧಿಕಾರ.- ಮಂಡಳಿಯು, ಯಾವುದೇ ಭೂಮಿ ಅಥವಾ ಕಟ್ಟಡವನ್ನು, ಕೆಲಸಗಾರರ ಸಹಾಯಪಡೆದು ಅಥವಾ ಸಹಾಯವನ್ನು ಪಡೆಯದೆ,
(ಎ) ಅಂಥ ಭೂಮಿ ಅಥವಾ ಕಟ್ಟಡಕ್ಕಾಗಿ ಯಾವುದೇ ವಿಚಾರಣೆ, ತಪಾಸಣೆ, ಅಳತೆ ಅಥವಾ ಸಮೀಕ್ಷೆ ಅಥವಾ ಮಟ್ಟ ತೆಗೆದುಕೊಳ್ಳುವ;
(ಬಿ) ನಿರ್ಮಾಣದಲ್ಲಿರುವ ಕಾಮಗಾರಿಗಳನ್ನು ಪರೀಕ್ಷಿಸುವ ಮತ್ತು ಒಳಚರಂಡಿ ಹಾಗೂ ಚರಂಡಿಗಳ ಮಾರ್ಗವನ್ನು ಖಚಿತಪಡಿಸಿಕೊಳ್ಳುವ;
(ಸಿ) ಕೆಳ ಮಣ್ಣಿನಲ್ಲಿ ತೋಡುವ ಅಥವಾ ಕೊರೆಯುವ;
(ಡಿ) ಕಾಮಗಾರಿಯ ಗಡಿಗಳನ್ನು ಮತ್ತು ಉದ್ದೇಶಿತ ರೇಖೆಗಳನ್ನು ಹಾಕುವ;
(ಇ) ಗುರುತುಗಳನ್ನು ಇರಿಸುವ ಹಾಗೂ ಕಂದಕಗಳನ್ನು ತೋಡುವ ಮೂಲಕ ಅಂಥ ಮಟ್ಟಗಳನ್ನು, ಗಡಿಗಳನ್ನು ಮತ್ತು ರೇಖೆಗಳನ್ನು ಹಾಕುವ;
(ಎಫ್) ಯಾವುದೇ ಯೋಜನೆಯನ್ನು ಉಲ್ಲಂಘಿಸಿ ಅಥವಾ ಯಾವ ಷರತ್ತುಗಳಿಗೆ ಒಳಪಟ್ಟು ಅಂಥ ಅನುಮತಿಯನ್ನು ನೀಡಲಾಗಿತ್ತೋ ಆ ಷರತ್ತುಗಳನ್ನು ಉಲ್ಲಂಘಿಸಿ ಯಾವುದೇ ಭೂಮಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆಯೇ ಅಥವಾ ಅಭಿವೃದ್ಧಿಪಡಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ; ಅಥವಾ
(ಜ) ಈ ಅಧಿನಿಯಮದ ದಕ್ಷ ಆಡಳಿತಕ್ಕಾಗಿ ಅವಶ್ಯಕವಾದ ಇತರ ಯಾವುದೇ ಕಾರ್ಯಗಳನ್ನು ಮಾಡುವ,-
(i) ಸೂರ್ಯೋದಯ ಮತ್ತು ಸೂರ್ಯಾಸ್ತದೊಳಗಿನ ಅವಧಿಯ ಹೊರತಾಗಿ ಮತ್ತು ಅಧಿಭೋಗದಾರನಿಗೆ ಅಥವಾ ಅಲ್ಲಿ ಯಾವೊಬ್ಬ ಅಧಿಭೋಗದಾರನು ಇರದಿದ್ದರೆ ಭೂಮಿಯ ಅಥವಾ ಕಟ್ಟಡದ ಮಾಲೀಕನಿಗೆ ಸೂಕ್ತ ನೋಟೀಸನ್ನು ಕೊಡದೆ ಹಾಗೆ ಪ್ರವೇಶಿಸತಕ್ಕದ್ದಲ್ಲ;
(ii) ಮಹಿಳೆಯರು ಅಥವಾ ಮಕ್ಕಳು, ಯಾರಾದರೂ ಇದ್ದರೆ ಅವರು, ಅಂಥ ಭೂಮಿ ಅಥವಾ ಕಟ್ಟಡದಿಂದ ಹೊರ ಹೋಗಲು ಸಾಕಷ್ಟು ಅವಕಾಶವನ್ನು ಪ್ರತಿ ಸಂಧರ್ಭದಲ್ಲಿಯೂ ನೀಡತಕ್ಕದ್ದು;
(11) ಪ್ರವೇಶ ಮಾಡಿದ ಉದ್ದೇಶದ ಜರೂರು ಅವಶ್ಯಕತೆಗೆ ಸರಿಹೊಂದುವಷ್ಟರ ಮಟ್ಟಿಗೆ ಪ್ರವೇಶಿಸಿದ ಭೂಮಿ ಅಥವಾ ಕಟ್ಟಡದ ಅಧಿಭೋಗದಾರನ ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗೆ ಯಾವಾಗಲೂ ಸೂಕ್ತ ಗೌರವ ನೀಡತಕ್ಕದ್ದು.
ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಹಾಗೂ ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಅಧಿನಿಯಮ, 1961 ರಲ್ಲಿ (1962ರ ಕರ್ನಾಟಕ ಅಧಿನಿಯಮ ಸಂಖ್ಯೆ 7) ಏನೇ ಇದ್ದರೂ, ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ತಾನು ಚಲಾಯಿಸಬಹುದಾದ ಯಾವುವೇ ಅಧಿಕಾರಗಳನ್ನು ಮಂಡಳಿಗೆ ಪ್ರತ್ಕ್ಯಾಯೋಜಿಸಬಹುದು ಮತ್ತು ಅಂಥ ಅಧಿಸೂಚನೆಯನ್ನು ಹೊರಡಿಸಿದ ತರುವಾಯ ಮಂಡಳಿಯು ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಅಧಿಕಾರಗಳನ್ನು ಹೊಂದಿರತಕ್ಕದ್ದು ಮತ್ತು ಅಂಥ ಪ್ರಕಾರ್ಯಗಳನ್ನು ನೆರವೇರಿಸತಕ್ಕದ್ದು. 21. ಬೀದಿ ಮುಂತಾದವುಗಳ ನಿರ್ವಹಣೆ ಕರ್ತವ್ಯ.- ಕರ್ನಾಟಕ ಪೌರಸಭೆ ಅಧಿನಿಯಮ, 1964 ರಲ್ಲಿ (1964ರ ಕರ್ನಾಟಕ ಅಧಿನಿಯಮ 22) ಏನೇ ಇದ್ದರೂ, ಈ ಮುಂದಿನ ವಿಷಯಗಳಿಗೆ ಸಂಬಂಧಿಸಿದಂತೆ ತಾನು ಕಾನೂನು ಬದ್ಧವಾಗಿ ಬಳಸಬಹುದಾದ ಯಾವುದೇ ಸಾಧನ ಅಥವಾ ತೆಗೆದುಕೊಳ್ಳಬಹುದಾದ ಯಾವುದೇ ಕ್ರಮದ ಮೂಲಕ ಸಮಂಜಸವಾದ ಮತ್ತು ಸಮರ್ಪಕವಾದ ಉಪಬಂಧಗಳನ್ನು ರಚಿಸುವುದು ಮಂಡಳಿಯ ಕರ್ತವ್ಯವಾಗಿರತಕ್ಕದ್ದು; ಎಂದರೆ:- (ಎ) ಬಸವಕಲ್ಮಾಣ ಪ್ರದೇಶದಲ್ಲಿ ಬೀದಿಗಳ ನಿರ್ವಹಣೆ, ದುರಸ್ತಿ ಮಾಡಿಸುವುದು, ದೀಪ ವ್ಯವಸ್ಥೆ ಮತ್ತು ಸ್ವಚ್ಛಗೊಳಿಸುವುದು; ಮತ್ತು
(ಬಿ) ಬಸವಕಲ್ಯಾಣ ಪ್ರದೇಶದಲ್ಲಿಯ ಬೀದಿಗಳ ಸಂಬಂಧದಲ್ಲಿ ಚರಂಡಿ, ನೈರ್ಮಲ್ಯ ವ್ಯವಸ್ಥೆ ಮತ್ತು ನೀರು ಸರಬರಾಜು. 28. 19748 ಕರ್ನಾಟಕ ಅಧಿನಿಯಮ 32ನ್ನು ಮಂಡಳಿಯ ಆವರಣಕ್ಕೆ ಅನ್ವಯಿಸುವುದು.- (1) ರಾಜ್ಯ ಸರ್ಕಾರವು, (2ನೇ ಉಪಪ್ರಕರಣದ ಉಪಬಂಧಗಳಿಗೆ ಒಳಪಟ್ಟು ಅಧಿಸೂಚನೆಯ ಮೂಲಕ, ಅಂಥ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದಂಥ ದಿನಾಂಕದಿಂದ, ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ) ಅಧಿನಿಯಮ, 1974 ಆ ಅಧಿನಿಯಮವು ಸಾರ್ವಜನಿಕ ಆವರಣಗಳಿಗೆ ಸಂಬಂಧಿಸಿ ಅನ್ಹಯಿಸುವಂತೆ ಮಂಡಳಿಗೆ ಸೇರಿದ, ಅದರಲ್ಲಿ ನಿಹಿತವಾದ ಅಥವಾ ಅದು ಗುತ್ತಿಗೆಗೆ ತೆಗೆದುಕೊಂಡ ಆವರಣಕ್ಕೆ, ಅನ್ವ್ಹಯಿಸತಕ್ಕದ್ದೆಂದು ಉಪಬಂಧ ಕಲ್ಪಿಸಬಹುದು. (2) (1ನೇ ಉಪ ಪ್ರಕರಣದ ಅಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಿದ ತರುವಾಯ, ಮೇಲ್ಕಂಡ ಅಧ್ಯಾದೇಶವು ಮತ್ತು ಅದರಡಿ ರಚಿಸಿದ ನಿಯಮಗಳು ಈ ಮುಂದಿನ ಮಾರ್ಪಾಡುಗಳೊಡನೆ ಮಂಡಳಿಗೆ ಸೇರಿದ ಆವರಣಗಳಿಗೆ ಅನ್ವಯವಾಗತಕ್ಕದ್ದು, ಎಂದರೆ,-
(ಎ) ರಾಜ್ಯ ಸರ್ಕಾರವು, ತಾನು ಸೂಕ್ತವೆಂದು ಭಾವಿಸುವಂತೆ ರಾಜ್ಯ ಸರ್ಕಾರದ ಅಥವಾ ಮಂಡಳಿಯ ಒಬ್ಬ ಅಧಿಕಾರಿಯನ್ನು ಮೇಲ್ಕಂಡ ಅಧ್ಯಾದೇಶದ ಉದ್ದೇಶಗಳಿಗಾಗಿ ಸಕ್ಷಮ ಅಧಿಕಾರಿ ಎಂದು ನೇಮಿಸಬಹುದು;
(ಬಿ) ಆ ಅಧಿನಿಯಮದಲ್ಲಿ ಮತ್ತು ಆ ನಿಯಮಗಳಲ್ಲಿ “ಸಾರ್ವಜನಿಕ ಆವರಣ?” ಕ್ಕೆ ಮಾಡಿದ ಉಲ್ಲೇಖಗಳು ಮಂಡಳಿಯ ಆವರಣಗಳಿಗೆ ಮಾಡಿದ ಉಲ್ಲೇಖಗಳೆಂದು ಭಾವಿಸತಕ್ಕದ್ದು ಮತ್ತು ಆ ಅಧಿನಿಯಮದ 6, 1, 8, 14, 15, 16 ಮತ್ತು 17ನೇ ಪ್ರಕರಣಗಳಲ್ಲಿ “ರಾಜ್ಯ ಸರ್ಕಾರ” ಕ್ಕೆ, ಮಾಡಿದ ಉಲ್ಲೇಖಗಳನ್ನು, ಮಂಡಳಿಗೆ ಮಾಡಿದ ಉಲ್ಲೇಖಗಳೆಂದು ಭಾವಿಸತಕ್ಕದ್ದು.
ಈ ಪಾರಂಪರಿಕ ತಾಣಗಳಿಗೆ ಸಾಕಷ್ಟು ಪ್ರಚಾರವನ್ನು ನೀಡಲು ಸಾಂಸ್ಕೃತಿಕ, ಚಾರಿತ್ರಿಕ ಮತ್ತು ಯಾತ್ರಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕಾಗಿ ಮಂಡಳಿಯು ಕಾರ್ಯಕ್ರಮಗಳನ್ನು ಮತ್ತು ಕಾರ್ಯಚಟುವಟಿಕೆಗಳನ್ನು ವ್ಯವಸ್ಥೆ ಮಾಡಬಹುದು. ಅಂಥ ಕಾರ್ಯಕ್ರಮಗಳು ಈ ಮುಂದಿನವುಗಳನ್ನು ಒಳಗೊಂಡಿರತಕ್ಕದ್ದು:-
(ಎ) ಬಸವಕಲ್ಯಾಣ ಉತ್ಸವ
(ಬಿ) ಶರಣ ಸಾಹಿತ್ಕೋತ್ಸವ
(ಸಿ) ಕಲಾ ಪ್ರದರ್ಶನಗಳು ಮತ್ತು ಮಾರಾಟ
(ಡಿ) ಸಮ್ಮೇಳನಗಳು, ವಿಚಾರಗೋಷ್ಠಿಗಳು, ಕಾರ್ಯಾಗಾರಗಳು
(ಇ) ವಾರ್ಷಿಕ ಜಾತ್ರೆಗಳು ಮತ್ತು ವಿಶೇಷ ಸ್ವರೂಪದ ಹಬ್ಬಗಳು
(1) 45ನೇ ಪ್ರಕರಣದಡಿ ನಿಯಮಗಳನ್ನು ರಚಿಸುವ ಅಧಿಕಾರವನ್ನು ಹೊರತುಪಡಿಸಿ ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಈ ಅಧ್ಯಾದೇಶದಡಿ ಅಥವಾ ಅಧ್ಯಾದೇಶದ ಮೂಲಕ ಅದಕ್ಕೆ ಪ್ರದತ್ತವಾದ ಯಾವುವೇ ಅಧಿಕಾರಗಳನ್ನು, ಯಾವುದೇ ಪ್ರಾಧಿಕಾರಕ್ಕೆ ಪ್ರತ್ಯಾಯೋಜಿಸಬಹುದು.
(Q2) 46ನೇ ಪ್ರಕರಣದಡಿಯ ವಿನಿಯಮ ರಚನಾಧಿಕಾರವನ್ನು ಹೊರತುಪಡಿಸಿ, ಮಂಡಳಿಯು ವಿನಿಯಮಗಳ ಮೂಲಕ, ಈ ಅಧ್ಯಾದೇಶದಡಿ ಅಥವಾ ಅಧ್ಯಾದೇಶದ ಮೂಲಕ ಅದಕ್ಕೆ ಪ್ರದತ್ತವಾದ ಯಾವುವೇ ಅಧಿಕಾರಗಳನ್ನು ಆಯುಕ್ತರಿಗೆ ಅಥವಾ ಮಂಡಳಿಯ ಇತರ ಅಧಿಕಾರಿಗಳಿಗೆ ಪ್ರತ್ಕಾಯೋಜಿಸಬಹುದು.
ಅಧ್ಕಾಯ IV ಹಣಕಾಸು ಮತ್ತು ಸ್ವತ್ತು
(1) ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ನಿಧಿಯೆಂದು ಕರೆಯಲಾಗುವ ಒಂದು ನಿಧಿಯು ಇರತಕ್ಕದ್ದು.
(2) ಸದರಿ ನಿಧಿಗೆ,-
() ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಯಾವುದೇ ಸ್ಥಳೀಯ ಪ್ರಾಧಿಕಾರ ಅಥವಾ ನಿಗಮಿತವಾದ ಇಲ್ಲವೇ ನಿಗಮಿತವಲ್ಲದ ಯಾವುದೇ ನಿಕಾಯ ಅಥವಾ ಯಾವೊಬ್ಬ ವ್ಯಕ್ತಿಯು ನೀಡಿದ ಎಲ್ಲ ಅನುದಾನಗಳು, ಧನ ಸಹಾಯ, ದೇಣಿಗೆಗಳು ಮತ್ತು ದಾನಗಳನ್ನು;
(11) ಮಂಡಳಿಯು ಸಾಲ ಪಡೆದ ಮೊಬಲಗನ್ನು; ಮತ್ತು
(iii) ಯಾವುದೇ ಮೂಲದಿಂದಾಗಲೀ, ಮಂಡಳಿಯು ಅಥವಾ ಮಂಡಳಿಯ ಪರವಾಗಿ ಪಡೆದುಕೊಂಡ ಇತರ ಎಲ್ಲ ಮೊತ್ತಗಳನ್ನು, -ಜಮೆ ಮಾಡತಕ್ಕದ್ದು. “QQ.
(3) ರಾಜ್ಯ ಸರ್ಕಾರವು ಅನ್ಯಥಾ ನಿರ್ದೇಶಿಸಿದ ಹೊರತು, ನಿಧಿಗೆ ಜಮೆಮಾಡಲಾದ ಎಲ್ಲ ಹಣವನ್ನು ಯಾವುದೇ ಅನುಸೂಚಿತ ಬ್ಯಾಂಕಿನಲ್ಲಿ ಅಥವಾ ರಾಜ್ಯ ಸರ್ಕಾರದ ಖಜಾನೆಯಲ್ಲಿ ಇರಿಸತಕ್ಕದ್ದು.
(4) ಮಂಡಳಿಯ ಆಯುಕ್ತರಿಗೆ ಮತ್ತು ಇತರ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಸಂದಾಯ ಮಾಡಬೇಕಾದ ವೇತನಗಳು ಮತ್ತು ಭತ್ಯೆಗಳು ಮತ್ತು ನಿವೃತ್ತಿವೇತನವೇನಾದರೂ ಇದ್ದಲ್ಲಿ, ಅದನ್ನೂ ಒಳಗೊಂಡಂತೆ ಮಂಡಳಿಯ ಆಡಳಿತಾತಕ್ರ ವೆಚ್ಚಗಳನ್ನು ಮಂಡಳಿಯ ನಿಧಿಯಿಂದ ಭರಿಸತಕ್ಕದ್ದು.