(1) ರಾಜ್ಯ ಸರ್ಕಾರವು, ಅಧಿಸೂಚನೆಯ ಮೂಲಕ, ಆ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಬಹುದಾದ ದಿನಾಂಕದಿಂದ ಜಾರಿಗೆ ಬರುವಂತೆ, ಮಂಡಳಿಯು ವಿಘಟಿತವಾಗತಕ್ಕದ್ದೆಂದು ಘೋಷಿಸಬಹುದು:
ಪರಂತು, ಅಂಥ ಯಾವುದೇ ಘೋಷಣೆಯನ್ನು, ಆ ಅಭಿಪ್ರಾಯದ ಒಂದು ನಿರ್ಣಯವನ್ನು ರಾಜ್ಯ ವಿಧಾನಮಂಡಲದ ಉಭಯ ಸದನಗಳ ಮುಂದೆ ಮಂಡಿಸಿ ಅವುಗಳು ಅದನ್ನು ಅನುಮೋದಿಸಿದ ಹೊರತು, ರಾಜ್ಯ ಸರ್ಕಾರವು ಮಾಡತಕ್ಕದ್ದಲ್ಲ.
(2) (se ಉಪ-ಪ್ರಕರಣದ ಅಡಿಯಲ್ಲಿನ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ದಿನಾಂಕದಿಂದ ಪರಿಣಾಮಕಾರಿಯಾಗುವಂತೆ,-
(ಎ) ಮಂಡಳಿಯಲ್ಲಿ ನಿಹಿತವಾದ ಮತ್ತು ಅದರಿಂದ ವಸೂಲಾಗತಕ್ಕೆ ಎಲ್ಲ ಸ್ವತ್ತುಗಳು, ನಿಧಿಗಳು ಮತ್ತು ಬಾಕಿಗಳು ರಾಜ್ಯ ಸರ್ಕಾರದಲ್ಲಿ ನಿಹಿತವಾಗತಕ್ಕದ್ದು ಮತ್ತು ಅದು ವಸೂಲಿ ಮಾಡಬಹುದಾಗಿರತಕ್ಕದ್ದು.
(ಬಿ) ಮಂಡಳಿಯ ವಿರುದ್ಧ ಅಮಲು ಜಾರಿಮಾಡಬಹುದಾದ ಎಲ್ಲ ಹೊಣೆಗಳು, ರಾಜ್ಯ ಸರ್ಕಾರದಲ್ಲಿ ನಿಹಿತವಾದ ಮತ್ತು ಅದರಿಂದ ವಸೂಲಿಯಾದ ಸ್ಪತ್ತು, ನಿಧಿ ಮತ್ತು ಬಾಕಿಗಳಷ್ಟರ ಮಟ್ಟಿಗೆ ರಾಜ್ಯ ಸರ್ಕಾರದ ವಿರುದ್ಧ ಅಮಲು ಜಾರಿಯಾಗಬಹುದಾಗಿರತಕ್ಕದ್ದು.