(1) ಆರ್ಥಿಕ ಅಧಿಕಾರಿಯು ಪ್ರಾಧಿಕಾರದ ಪೂರ್ಣಕಾಲದ ಅಧಿಕಾರಿಯಾಗಿರತಕ್ಕದ್ದು.
(2) ಆತನು ಪ್ರಾಧಿಕಾರ ಎಲ್ಲಾ ಸ್ವತ್ತುಗಳನ್ನು ಮತ್ತು ಹೂಡಿಕೆಗಳನ್ನು ನಿರ್ವಹಿಸತಕ್ಕದ್ದು.
(3) ಆತನು ಆರ್ಥಿಕ ನೀತಿಗೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ರಿಜಿಸ್ಟ್ರಾರ್ (ಆಡಳಿತ)/ ರಿಜಿಸ್ಟ್ರಾರ್ (ಮೌಲ್ಯಮಾಪನ) ಇವರಿಗೆ ಸಲಹೆ ನೀಡತಕ್ಕದ್ದು.
(4) ಆತನು ವಾರ್ಷಿಕ ಆರ್ಥಿಕ ಅಂದಾಜುಗಳು ಮತ್ತು ವಾರ್ಷಿಕ ಲೆಕ್ಕಪತ್ರಗಳು/ ಮತ್ತು ಪಡಿಸು ವುದು ಸೇರಿದಂತೆ ಪ್ರಾಧಿಕಾರದ ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಣೆ ಆಯ ವ್ಯಯಪಟ್ಟಿ ಯನ್ನು ಸಿದ್ಧ ಮಾಡುವುದಕ್ಕೆ ಜವಾಬ್ದಾರರಾಗಿರುತ್ತಾರೆ.
(5) ಆತನು ಕಾರ್ಯನಿರ್ವಹಣಾ ಸಮಿತಿಯಿಂದ ಅಧಿಕೃತಗೊಳಿಸದ ಮತ್ತು ಪ್ರಾಧಿಕಾರದಿಂದ ಅನುಮೋದನೆ ಪಡೆಯದ ಯಾವುದೇ ವೆಚ್ಚ ವನ್ನು ಪ್ರಾಧಿಕಾರವು ಮಾಡದಂತೆ ಖಚಿತಪಡಿಸಿಕೊಳ್ಳ ತಕ್ಕದ್ದು ಮತ್ತು ಸಕ್ಷಮ ಪ್ರಾಧಿಕಾರವು ಮಂಜೂರು ಮಾಡದ ಯಾವುದೇ ವೆಚ್ಚವನ್ನು ಮಾಡಲು ಅವಕಾಶ ನೀಡತಕ್ಕದ್ದಲ್ಲ.
(6) ಆತನು ಚಾರ್ಟೆಡ್ ಅಕೌಂಟೆಂಟ್ನಿಂದ ಲೆಕ್ಕಪತ್ರಗಳನ್ನು ವಾರ್ಷಿಕ ಲೆಕ್ಕ ಪರಿಶೋಧನೆ ಮಾಡಿಸಲು ಜವಾಬ್ದಾರನಾಗಿರತಕ್ಕದ್ದು.